ಬೆಂಗಳೂರು : ಸೈಬರ್ ವಂಚನೆ ಪ್ರಕರಣದ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ ಮತ್ತು ಅನೇಕ ಸೆಲೆಬ್ರಿಟಿಗಳು ಸಹ ಇದನ್ನು ಎದುರಿಸಿದ್ದಾರೆ. ಇದೀಗ ಮಾಜಿ ‘ಬಿಗ್ ಬಾಸ್’ ಸ್ಪರ್ಧಿ ಮತ್ತು ನಟಿ ಪಾಯಲ್ ರೋಹಟಗಿ (Payal Rohatgi) ಸಂದರ್ಶನವೊಂದರಲ್ಲಿ ಆನ್‌ಲೈನ್ ಶಾಪಿಂಗ್‌ನಲ್ಲಿ 20,000 ರೂ.ಕಳೆದುಕೊಂಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ತಾವು ಆನ್‌ಲೈನ್ ಶಾಪಿಂಗ್ ವೇಳೆ 20 ಸಾವಿರೂ.ಗಳನ್ನು ಕಳೆದುಕೊಂಡಿದ್ದೇನೆ. ಸೈಬರ್ ಸೆಲ್ ಅನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಕಸ್ಟಮರ್ ಕೇರ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ನಟಿ ಮಾತನಾಡಿ ʻʻನಾನು ಆನ್‌ಲೈನ್‌ನಲ್ಲಿ ಪ್ರಸಿದ್ಧ ಬ್ರ್ಯಾಂಡ್‌ನಿಂದ ವರ್ಕೌಟ್ ಬಟ್ಟೆಗಳನ್ನು ಆರ್ಡರ್ ಮಾಡಿದ್ದೆ. ಅವರು ಡೆಲಿವರಿ ಮಾಡಿದಾಗ ಸೈಜ್‌ನಲ್ಲಿ ಕೆಲವು ಸಮಸ್ಯೆಗಳಿದ್ದವು. ನಾನು ಮತ್ತೆ ಮತ್ತೆ ರಿಟರ್ನ್ ಮಾಡಿದೆ. ಸುಮಾರು 15 ರಿಂದ 20 ದಿನಗಳ ನಂತರ, ಆ ಕಂಪನಿಯಿಂದ ನನಗೆ ಕರೆ ಬಂತು. ಕಳುಹಿಸಿದ ಪ್ರೊಡಕ್ಟ್ ಬಂದಿಲ್ಲ ಎಂದು. ಕಸ್ಟಮರ್ ಕೇರ್‌ಗೆ ಕರೆ ಮಾಡಿದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಣ ಕೂಡ ವಾಪಸ್ ಸಿಕ್ಕಿಲ್ಲʼʼ ಎಂದರು.
ಇದನ್ನೂ ಓದಿ | Online fraud : ಆನ್‌ಲೈನ್ ವಂಚನೆ ಜಾಲಕ್ಕೆ ಪೊಲೀಸರ ಬಲೆ, 70 ಜನ ವಶಕ್ಕೆ
“ನಾನು ವಾಸ್ತವವಾಗಿ ಕಾರ್ಯನಿರ್ವಾಹಕರೊಂದಿಗೆ ಮಾತನಾಡಿದ್ದೇನೆ ಮತ್ತು ಲೈವ್ ಚಾಟ್ ಮಾಡಿದ್ದೇನೆ. ನಾನು ಕೆಲವು ಫಾರ್ಮ್ ಅನ್ನು ತುಂಬದ ಕಾರಣ ಪ್ರೊಡಕ್ಟ್ ಹೋಲ್ಡ್ ಮಾಡಲಾಗಿದೆ ಎಂದು ನನಗೆ ತಿಳಿಸಲಾಯಿತು. ನಾನು ಅದರ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ‘ಕೊರಿಯರ್ ನೋಂದಣಿ’ಗೆ 10 ರೂ. ಕಾರ್ಡ್ ಮೂಲಕ ಮೊತ್ತವನ್ನು ಪಾವತಿಸಲು ನನ್ನನ್ನು ಕೇಳಲಾಯಿತು. OTP ಶೇರ್ ಮಾಡಲು ಹೇಳಿದರು. ಒಟಿಪಿ ಶೇರ್ ಮಾಡುತ್ತಿದ್ದಂತೆ 20,238 ರೂ. ಡೆಬಿಟ್ ಆಗಿದೆʼʼ ಎಂದರು.
ಪಾಯಲ್ ರೋಹಟಗಿ ಪ್ರಕಾರ, ಗೂಗಲ್‌ನಲ್ಲಿ ಲಭ್ಯವಿರುವ ಸೈಬರ್ ಕ್ರೈಮ್ ಸೆಲ್‌ನ ಸಂಪರ್ಕ ಸಂಖ್ಯೆ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ನಟಿ ಆನ್‌ಲೈನ್‌ನಲ್ಲಿ ದೂರು ದಾಖಲಿಸಿದ್ದಾರೆ. ಚಿತ್ರೀಕರಣದಿಂದ ದೂರವಿರುವ ನಟಿ ಈ ವರ್ಷ ಕುಸ್ತಿಪಟು ಸಂಗ್ರಾಮ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ.
ಇದನ್ನೂ ಓದಿ | ಗುರು ರಾಯರ ಮಠದ ಹೆಸರಿನಲ್ಲಿಯೂ ಆನ್‌ಲೈನ್‌ನಲ್ಲಿ ವಂಚನೆ; ಇಬ್ಬರ ಬಂಧನ