ಬೆಂಗಳೂರು: ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ (Athiya Shetty KL Rahul Wedding) ಜನವರಿ 23 ಸೋಮವಾರದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ತೋಟದ ಮನೆಯಲ್ಲಿ ಜೋಡಿ ಹಸೆಮಣೆ ಏರಿದೆ. ಹಲವಾರು ಬಿ-ಟೌನ್ ಸೆಲೆಬ್ರಿಟಿಗಳು ನವವಿವಾಹಿತ ದಂಪತಿಗೆ ಶುಭ ಹಾರೈಸಿದ್ದಾರೆ. ಸೆಲೆಬ್ರಿಟಿ ಫೋಟೊಗ್ರಾಫರ್ ರೋಹನ್ ಶ್ರೇಷ್ಠ ಮದುವೆಯ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಇದೀಗ ರೋಹನ್ ತಮ್ಮ ಇನ್‌ಸ್ಟಾದಲ್ಲಿ ಅಥಿಯಾ ಅವರ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಒಂದು ಫೋಟೊಗೆ ರೋಹನ್ ಶ್ರೇಷ್ಠ ಕ್ಯಾಪ್ಷನ್ ನೀಡಿ ʻನೀವು ನನ್ನ ಮದುವೆಯ ಭಾವಚಿತ್ರಗಳನ್ನು ಶೂಟ್ ಮಾಡುತ್ತೀರಾ?” ಎಂದು ಅಥಿಯಾ ಕೇಳುತ್ತಾರೆ. “ಖಂಡಿತ ಅಥಿಯಾ ಆದರೆ ಮದುವೆ ನಾಳೆ, ನನ್ನ ಬಳಿ ನನ್ನ ಕ್ಯಾಮೆರಾ ಇಲ್ಲ, ನಾವು ಲೋನಾವಾಲಾದಲ್ಲಿದ್ದೇವೆ ಮತ್ತು ನಾನು ಈಗಾಗಲೇ ಕುಡಿದಿದ್ದೇನೆ!” ಎಂದೆ. ಅದಕ್ಕೆ ಅಥಿಯಾ “ನೀವು ನನಗೆ ಋಣಿಯಾಗಿದ್ದರೂ ನಾನು ಹೆದರುವುದಿಲ್ಲ” ಎಂದು ಹೇಳಿದರು. ಈ ವಿಶೇಷ ದಿನದಂದು ನಿಮಗಾಗಿ ಈ ಫೋಟೊಗಳನ್ನು ಕ್ಲಿಕ್ಕಿಸಲು ನನಗೆ ತುಂಬ ಸಂತೋಷವಾಗಿದೆʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Athiya Shetty KL Rahul wedding: ಕೆ.ಎಲ್. ರಾಹುಲ್-ಅಥಿಯಾ ಶೆಟ್ಟಿ ವಿವಾಹದ ಸುಂದರ ಫೋಟೊಗಳು ಇಲ್ಲಿವೆ
ʻʻನೀವು ನಗುತ್ತಿರುವುದು ತುಂಬ ಅಪರೂಪ, ನಿನ್ನೆಗಿಂತ ನೀವು ಭಿನ್ನವಾಗಿದ್ದೀರಿʼʼಎಂದು ಬರೆದುಕೊಂಡಿದ್ದಾರೆ.
ಜನವರಿ 23ರ ಸೋಮವಾರದಂದು ಖಂಡಾಲಾದಲ್ಲಿರುವ ನಟ ಸುನೀಲ್ ಶೆಟ್ಟಿ(suniel Shetty) ಅವರ ಫಾರ್ಮ್ ಹೌಸನಲ್ಲಿ ಈ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ. ಸಂಜೆ 4.15 ರ ಸುಮಾರಿಗೆ ಅಥಿಯಾ ಮತ್ತು ಕೆಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: Athiya Shetty KL Rahul wedding: ಹಸೆಮಣೆ ಏರಿದ ಕೆ.ಎಲ್. ರಾಹುಲ್-ಅಥಿಯಾ ಶೆಟ್ಟಿ