Site icon Vistara News

ಪಳುವೂರಿನ ರಾಣಿ ನಂದಿನಿಯಾದ ನಟಿ ಐಶ್ವರ್ಯಾ ರೈ ಬಚ್ಚನ್, ಮಹಾರಾಣಿ ಲುಕ್​ಗೆ ಅಭಿಮಾನಿಗಳು ಫಿದಾ

aishwarya new film first look

ವಿಶ್ವ ಸುಂದರಿ, ಬಾಲಿವುಡ್​ನ ಆಲ್​ ಟೈಮ್ ಬ್ಯೂಟಿ ನಟಿ ಐಶ್ವರ್ಯಾ ರೈ ಬಚ್ಚನ್ ತುಂಬಾ ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಬರುತ್ತಿದ್ದು, ಈ ಬಾರಿ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಐತಿಹಾಸಿಕ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಚಿತ್ರದ ಚಿತ್ರೀಕರಣವೂ ಆರಂಭವಾಗಿದೆ. ಸಿನಿಮಾದಲ್ಲಿ ನಟಿ ಐಶ್ವರ್ಯಾ ರಾಣಿಯ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರದ ಹೆಸರು ನಂದಿನಿ ಆಗಿದ್ದು, ರಾಣಿಯ ವೇಷದಲ್ಲಿರುವ ಐಶ್ವರ್ಯಾ ಅವರ ಫಸ್ಟ್ ಲುಕ್ ರಿಲೀಸ್ ಆಗಿದೆ.

ಬಾಲಿವುಡ್​ನ ಹೆಸರಾಂತ ನಟಿಯರಲ್ಲಿ ಮೊದಲು ಕೇಳಿ ಬರುವ ಹೆಸರೇ ನಟಿ ಐಶ್ವರ್ಯಾ, ಹಿಂದಿ ಚಿತ್ರರಂಗದಲ್ಲಿ ಮಾತ್ರವಲ್ಲದೆ, ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಐಶ್ವರ್ಯಾಗೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳಿದ್ದಾರೆ. ಸದ್ಯ ಈ ವಿಶ್ವಸುಂದರಿ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಥೇಟ್ ಮಹಾರಾಣಿಯಂತೆಯೇ ಕಂಗೊಳಿಸಿದ್ದಾರೆ. ಈ ಒಂದು ಪೋಸ್ಟರ್ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಇದನ್ನು ಓದಿ| Aishwarya Rai ಆರಂಭಿಕ ಮಾಡೆಲಿಂಗ್‌ಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ? ಬರೀ..

ಲೈಕಾ ಪ್ರೊಡೆಕ್ಷನ್ಸ್​ ಬುಧವಾರ (ಜು.6) ಐಶ್ವರ್ಯಾ ರೈ ಬಚ್ಚನ್ ಅವರ ಫಸ್ಟ್ ಲುಕ್​ ಪಳುವೂರಿನ ರಾಣಿ ನಂದಿನಿ ಎಂದು ಪೋಸ್ಟರ್ ರಿಲೀಸ್ ಮಾಡಿದೆ. ಈ ಐತಿಹಾಸಿಕ ಸಿನಿಮಾ ಎರಡು ಭಾಗದಲ್ಲಿ ಬರಲಿದ್ದು, ಪೊನ್ನಿಯನ್ ಸೆಲ್ವನ್ ಭಾಗ 1 ಎಂಬ ಮಹಾಕಾವ್ಯದ ರೂಪಾಂತರದ ಮೊದಲ ಭಾಗದ ಚಿತ್ರೀಕರಣವನ್ನು ಮುಗಿಸಲಾಗಿದೆ. ಚಿತ್ರತಂಡದ ಮಾಹಿತಿಯ ಪ್ರಕಾರ ಇದೇ ವರ್ಷ ಸೆಪ್ಟೆಂಬರ್ 30ರಂದು ಥಿಯೇಟರ್​ಗಳಿಗೆ ಬರಲಿದೆ.

ಈ ಸಿನಿಮಾ ಪ್ಯಾನ್​ ಇಂಡಿಯಾ ಸಿನಿಮಾವಾಗಿದ್ದು, ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂನಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಸಿನಿಮಾದಲ್ಲಿ ವಿಕ್ರಮ್, ಐಶ್ವರ್ಯಾ ರೈ, ಜಯಂ ರವಿ, ಕಾರ್ತಿ, ತ್ರಿಷಾ, ಶರತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಣವೇ ಸಿನಿಮಾದಲ್ಲಿದೆ.

ಇದನ್ನು ಓದಿ| Aishwarya Arjun | ಐಶ್ವರ್ಯ ಸರ್ಜಾ ಚಿತ್ರಕ್ಕೆ ಆ್ಯಕ್ಷನ್‌ ಕಿಂಗ್‌ ಆ್ಯಕ್ಷನ್‌ ಕಟ್  

Exit mobile version