ಬೆಂಗಳೂರು: ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ 2 (Ponniyin Selvan 2), ಬಿಡುಗಡೆಯಾದ ಒಂದು ತಿಂಗಳ ನಂತರ ವಿಶ್ವಾದ್ಯಂತ 300 ಕೋಟಿ ರೂ. ಗಳಿಕೆ ಕಂಡಿದೆ. ಈ ಬಗ್ಗೆ ಲೈಕಾ ಪ್ರೊಡಕ್ಷನ್ಸ್ ಟ್ವೀಟ್‌ನಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ವಿಶ್ವಾದ್ಯಂತ 300 ಕೋಟಿ ರೂ. ಸಂಗ್ರಹವಾಗಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದೆ.
ಪೊನ್ನಿಯನ್ ಸೆಲ್ವನ್-2ರಲ್ಲಿ ಐಶ್ವರ್ಯಾ ರೈ, ವಿಕ್ರಮ್, ತ್ರಿಶಾ ಕೃಷ್ಣನ್, ಕಾರ್ತಿಕ್ ಮತ್ತು ಜಯಂ ರವಿ ಕಾಣಿಸಿಕೊಂಡಿದ್ದಾರೆ. ಚಿತ್ರ ಏಪ್ರಿಲ್ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಪೊನ್ನಿಯನ್ ಸೆಲ್ವನ್-2 ಕಳೆದ ವರ್ಷ ಬಿಡುಗಡೆಯಾದ ಪೊನ್ನಿಯಿನ್ ಸೆಲ್ವನ್-1ರ ಮುಂದುವರಿದ ಭಾಗವಾಗಿದೆ.
ಐಶ್ವರ್ಯಾ ರೈ ಮತ್ತು ಮತ್ತು ವಿಕ್ರಮ್ ಅವರ ಅಭಿನಯ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ. ಚಿತ್ರದಲ್ಲಿ, ಐಶ್ವರ್ಯಾ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನ ಜತೆಗೆ, ಪೊನ್ನಿಯನ್ ಸೆಲ್ವನ್-2 ಹಿಂದಿ ಮತ್ತು ತೆಲುಗಿನಲ್ಲೂ ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ. ಮೊದಲ ಭಾಗಕ್ಕಿಂತ ಭಿನ್ನವಾಗಿ, ಪೊನ್ನಿಯನ್ ಸೆಲ್ವನ್-2 ಉತ್ತಮವಾಗಿದೆ ಎಂದು ಪ್ರೇಕ್ಷಕರು ಟ್ವೀಟ್‌ನಲ್ಲಿ ವಿಮರ್ಶೆಗಳನ್ನು ಹಂಚಿಕೊಂಡಿದ್ದಾರೆ.
ಮೊದಲ ಭಾಗವು ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ಗಳಿಸಿತು. ತಮಿಳುನಾಡಿನಲ್ಲಿ, ಕಮಲ್ ಹಾಸನ್ ಅವರ ʻವಿಕ್ರಮ್ʼ ಸಿನಿಮಾಗಿಂತಲೂ ಪೊನ್ನಿಯನ್ ಸೆಲ್ವನ್-2 ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: Ponniyin Selvan 2: ಮೂರೇ ದಿನದಲ್ಲಿ ನೂರು ಕೋಟಿ ರೂ. ಕ್ಲಬ್ ಸೇರಿದ ಪೊನ್ನಿಯನ್ ಸೆಲ್ವನ್-2
ಲೈಕಾ ಪ್ರೊಡಕ್ಷನ್ ಟ್ವೀಟ್
ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿರುವ ಪೊನ್ನಿಯನ್ ಸೆಲ್ವನ್ 2ನಲ್ಲಿ ದೊಡ್ಡ ತಾರಾಬಳಗವೇ ಇದೆ. ಜಯಂರವಿ, ಚಿಯಾನ್ ವಿಕ್ರಮ್, ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ತ್ರಿಶಾ, ಶೋಭಿತಾ ಧುಲಿಪಾಲ್, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.. ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್‌ನಡಿ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ.