Site icon Vistara News

Aishwarya Rai: ‘ಪೊನ್ನಿಯನ್ ಸೆಲ್ವನ್ 2’ಪ್ರಿ ರಿಲೀಸ್‌ ಇವೆಂಟ್‌ನಲ್ಲಿ ಕ್ಯೂಟ್‌ ಆಗಿ ಕಂಡ ಐಶ್ವರ್ಯಾ ರೈ

Ponniyin Selvan 2 Aishwarya Rai Glamour Look

ಮಣಿರತ್ನಂ ಕನಸಿನ ಪ್ರಾಜೆಕ್ಟ್ ‘ಪೊನ್ನಿಯನ್ ಸೆಲ್ವನ್ 2′ (Ponniyin Selvan 2) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ ತಿಂಗಳ 28ರಂದು ವಿಶ್ವಾದ್ಯಂತ ಚಿತ್ರ ತೆರೆಗಪ್ಪಳಿಸುತ್ತಿದೆ.

ಹೈದರಾಬಾದ್‌ನಲ್ಲಿ ನಡೆದ ಪ್ರಿ ರಿಲೀಸ್‌ ಇವೆಂಟ್‌ನಲ್ಲಿ ಕೆಂಪು ಬಣ್ಣದ ಉಡುಪಿನಲ್ಲಿ ಐಶ್ವರ್ಯಾ ರೈ ಮಿಂಚಿದ್ದಾರೆ.

ಕಲ್ಕಿ ಕೃಷ್ಣಮೂರ್ತಿ ಬರೆದಿರುವ ಕಾದಂಬರಿ ‘ಪೊನ್ನಿಯನ್ ಸೆಲ್ವನ್’ ಆಧಾರಿಸಿದ ಸಿನಿಮಾವಿದು. ಸೆಪ್ಟೆಂಬರ್ 30ರಲ್ಲಿ ತೆರೆಕಂಡ ಮೊದಲ ಚಾಪ್ಟರ್ ಮೆಗಾ ಹಿಟ್ ಆಗಿತ್ತು.

ಚೋಳ ಸಾಮ್ರಾಜ್ಯದ ದೃಶ್ಯ ವೈಭೋಗದ ಈ ಸಿನಿಮಾ ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಏಪ್ರಿಲ್ 28ಕ್ಕೆ ತೆರೆಕಾಣಲಿದೆ.

ಈವೆಂಟ್‌ನಲ್ಲಿ ವೇದಿಕೆ ಏರಿದ ಐಶ್ವರ್ಯಾ ರೈ ಅವರು ಈ ಚಿತ್ರದ ನಿರ್ದೇಶಕ ಮಣಿರತ್ನಂ ಅವರಿಗೆ ಧನ್ಯವಾದ ಹೇಳಿದ್ದಾರೆ. ಈ ಚಿತ್ರದಲ್ಲಿ ಹಲವು ಕಲಾವಿದರಿದ್ದಾರೆ.

Exit mobile version