Site icon Vistara News

Ponniyin Selvan 2: ಮೊದಲ ದಿನವೇ ಭಾರಿ ಕಲೆಕ್ಷನ್‌: ಸಲ್ಮಾನ್‌ ಚಿತ್ರವನ್ನೂ ಹಿಂದಿಕ್ಕಿದ ಪೊನ್ನಿಯನ್ ಸೆಲ್ವನ್-2

Poinniyin Selvan 2 box office collection day 1

ಬೆಂಗಳೂರು: ಪೊನ್ನಿಯನ್ ಸೆಲ್ವನ್-2 (Ponniyin Selvan 2) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಆರಂಭಿಕ ದಿನದಲ್ಲಿಯೇ ಬೃಹತ್ ಮೊತ್ತವನ್ನು ಸಂಗ್ರಹಿಸಿದೆ. ಮಣಿರತ್ನಂ ನಿರ್ದೇಶನದ, ಎರಡನೇ ಭಾಗ ಮೊದಲನೇ ದಿನ 38 ಕೋಟಿ ರೂ. ಗಳಿಕೆ ಕಂಡು ಅಖಿಲ್‌ ಅಕ್ಕಿನೇನಿ ಅವರ ʻಏಜೆಂಟ್‌ʼ ಹಾಗೂ ಸಲ್ಮಾನ್ ಖಾನ್ (Salman Khan) ನಟನೆಯ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಗಳಿಕೆಯನ್ನೂ ಹಿಂದಿಕ್ಕಿದೆ.

ತಮಿಳುನಾಡಿನಲ್ಲಿ ಪೊನ್ನಿಯನ್ ಸೆಲ್ವನ್-2 25 ಕೋಟಿ ರೂ. ಸಂಗ್ರಹಿಸಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಚಿತ್ರವು 3-4 ಕೋಟಿ ರೂ. ಸಂಗ್ರಹಿಸಿದೆ. ಕರ್ನಾಟಕದಲ್ಲಿ 4-5 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ.

ಏಪ್ರಿಲ್ 29 ಹಾಗೂ ಏಪ್ರಿಲ್ 30ರಂದು ಈ ಸಿನಿಮಾ ಮತ್ತಷ್ಟು ಗಳಿಕೆ ಮಾಡುವ ಸಾಧ್ಯತೆ ಇದೆ. ಮೇ 1 ಕಾರ್ಮಿಕರ ದಿನಾಚರಣೆ ಪ್ರಯುಕ್ತ ರಜೆ ಇದೆ. ಇದು ಸಿನಿಮಾಗೆ ಸಹಕಾರಿ ಆಗಲಿದೆ. ಹೀಗಾಗಿ, ಕೆಲವೇ ದಿನಗಳಲ್ಲಿ ಚಿತ್ರದ ಗಳಿಕೆ 100 ಕೋಟಿ ರೂ. ದಾಟಲಿದೆ.

ಪೊನ್ನಿಯನ್ ಸೆಲ್ವನ್ ಸಿನಿಮಾ ಮಾಡಬೇಕೆಂಬುದು ತಮಿಳುನಾಡಿನಲ್ಲಿ ಎಂಜಿಆರ್ ಕಾಲದಿಂದಲೂ ಕನಸಾಗಿತ್ತು. ಮಣಿರತ್ನಂ ಈಗ ಇದನ್ನು ನನಸಾಗಿಸಿದ್ದಾರೆ. ಐಶ್ವರ್ಯಾ ರೈ ಬಚ್ಚನ್​, ಚಿಯಾನ್ ವಿಕ್ರಮ್​, ತ್ರಿಷಾ, ಜಯಂ ರವಿ, ಕಾರ್ತಿ, ಪ್ರಕಾಶ್​ ರಾಜ್​ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜಯರಾಮ್, ಶರತ್‌ಕುಮಾರ್, ಪ್ರಭು, ಐಶ್ವರ್ಯ ಲಕ್ಷ್ಮಿ, ವಿಕ್ರಮ್ ಪ್ರಭು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಸಂಗೀತವನ್ನು ಎ.ಆರ್ ರೆಹಮಾನ್ ಸಂಯೋಜಿಸಿದ್ದಾರೆ.

ಏಪ್ರಿಲ್ 21ರಂದು ರಿಲೀಸ್ ಆದ ಸಲ್ಮಾನ್ ಖಾನ್ ನಟನೆಯ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಮೊದಲ ದಿನ 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಅದಕ್ಕೂ ಒಂದೂವರೆ ಪಟ್ಟು ಹೆಚ್ಚು ಗಳಿಕೆಯನ್ನು ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಮಾಡಿದೆ.

ಇದನ್ನೂ ಓದಿ: Ponniyin Selvan 2: ಬಾಹುಬಲಿ-2ಗಿಂತ ಉತ್ತಮವಾಗಿದೆ ಎಂದ ಪ್ರೇಕ್ಷಕರು; ʻಪೊನ್ನಿಯನ್ ಸೆಲ್ವನ್-2ʼ ಟ್ವೀಟರ್‌ ವಿಮರ್ಶೆ!

ಅಖಿಲ್‌ ಅಕ್ಕಿನೇನಿ ಅಭಿನಯದ ಏಜೆಂಟ್ ಬಿಡುಗಡೆಯಾದ ಮೊದಲ ದಿನದಲ್ಲಿ ಸುಮಾರು 7 ಕೋಟಿ ರೂ. ಗಳಿಕೆ ಕಂಡಿದೆ. ಸುಮಾರು 80 ಕೋಟಿ ರೂ. ಬಜೆಟ್‌ನಲ್ಲಿ “ಏಜೆಂಟ್ʼ ಚಿತ್ರ ನಿರ್ಮಿಸಲಾಗಿದೆ. ಮುಂಬರುವ ವಾರಾಂತ್ಯದಲ್ಲಿ ಚಿತ್ರವು ಬಾಕ್ಸ್ ಆಫೀಸ್ ಹಿಟ್‌ ಟ್ರೆಂಡ್‌ ಉಳಿಸಿಕೊಳ್ಳಲಿದೆಯೇ ಎಂಬ ಬಗ್ಗೆ ಕುತೂಹಲ ಇದೆ.

Exit mobile version