Site icon Vistara News

Ponniyin Selvan 2 : ‘ಪೊನ್ನಿಯಿನ್ ಸೆಲ್ವನ್-2’ ಚಿತ್ರದ ಮೊದಲನೇ ಹಾಡು ಬಿಡುಗಡೆʼ; ಸಿನಿಮಾ ಬಿಡುಗಡೆ ದಿನಾಂಕವೂ ಫಿಕ್ಸ್‌

#image_title

ಬೆಂಗಳೂರು: ಖ್ಯಾತ ನಿರ್ದೇಶಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ಆಗಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಪೊನ್ನಿಯಿನ್ ಸೆಲ್ವನ್-2ʼ (Ponniyin Selvan 2) ಬಿಡುಗಡೆಗೆ ಸಿದ್ಧವಾಗಿದೆ. ಏಪ್ರಿಲ್ 28ಕ್ಕೆ ಸಿನಿಮಾ ವಿಶ್ವಾದ್ಯಂತ ಈ ಸಿನಿಮಾ ಅದ್ಧೂರಿಯಾಗಿ ತೆರೆ ಕಾಣಲಿದೆ. ಈಗಾಗಲೇ ಟೀಸರ್ ಮೂಲಕ ಮೋಡಿ ಮಾಡುತ್ತಿರುವ ಸಿನಿಮಾದ ಮೊದಲನೇ ಹಾಡಾದ ʼಕಿರುನಗೆʼಯ ಲಿರಿಕಲ್‌ ವಿಡಿಯೊವನ್ನೂ ಚಿತ್ರತಂಡ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Ponniyin Selvan: I | ʻವಿಕ್ರಮ್‌ʼ ಚಿತ್ರದ ದಾಖಲೆ ಸೆಡ್ಡು ಹೊಡೆದ ಪೊನ್ನಿಯಿನ್ ಸೆಲ್ವನ್‌-1: ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು?
ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಕಿರುನಗೆ’ ಹಾಡಿಗೆ ಜಯಂತ್ ಕಾಯ್ಕಿಣಿ ಚೆಂದದ ಸಾಲುಗಳನ್ನು ಪೋಣಿಸಿದ್ದು, ಗಾಯಕಿ ರಕ್ಷಿತಾ ಸುರೇಶ್ ಇಂಪಾದ ದನಿಯಾಗಿದ್ದಾರೆ. ಕಿರುನಗೆ ಮೆಲೋಡಿ ಹಾಡು ಬಿಡುಗಡೆಯಾಗಿ ಕೇಳುಗರ ಮನ ಸೆಳೆಯುತ್ತಿದೆ.‌


ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ಅಡಿ ಅದ್ಧೂರಿಯಾಗಿ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಬಳಗವೇ ಇದೆ. ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ದಿಗ್ಗಜ ಕಲಾವಿದರ ಸಮಾಗಮ ಚಿತ್ರದಲ್ಲಿದೆ. ಮಣಿರತ್ನಂ ನಿರ್ದೇಶನ ಸಿನಿಮಾದ ಪ್ರಬಲ ಶಕ್ತಿಯಾದರೆ ಎ.ಆರ್.ರೆಹಮಾನ್ ಸಂಗೀತ, ರವಿವರ್ಮನ್ ಕ್ಯಾಮೆರಾ ವರ್ಕ್, ಸ್ಟಾರ್ ಹಾಗೂ ಅನುಭವಿ ಕಲಾವಿದರ ನಟನೆ, ಅದ್ಧೂರಿ ಮೇಕಿಂಗ್ ಎಲ್ಲವೂ ಚಿತ್ರದ ಶಕ್ತಿ ಹೆಚ್ಚಿಸಿವೆ.

ಇದನ್ನೂ ಓದಿ: ಪೊನ್ನಿಯಿನ್‌ ಸೆಲ್ವನ್‌ ಟೀಸರ್‌ ಬಿಡುಗಡೆ ಬೆನ್ನಿಗೇ ಮಣಿರತ್ನಂಗೆ ಕೋವಿಡ್‌, ಆಸ್ಪತ್ರೆಗೆ ದಾಖಲು
ಲೇಖಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕಲ್ಕಿ ಕೃಷ್ಣಮೂರ್ತಿ ಬರೆದ ಕಾದಂಬರಿ ‘ಪೊನ್ನಿಯಿನ್ ಸೆಲ್ವನ್’ ಆಧಾರಿತ ಚಿತ್ರವಿದು. ಸೆಪ್ಟೆಂಬರ್ 30ರಲ್ಲಿ ತೆರೆಕಂಡ ಮೊದಲ ಸೀಕ್ವೆಲ್ ವಿಶ್ವಾದ್ಯಂತ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಆ ಗೆಲುವಿನ ಸಂಭ್ರಮದಲ್ಲೇ ಎರಡನೇ ಸೀಕ್ವೆಲ್ ರೆಕಾರ್ಡ್ ಕ್ರಿಯೇಟ್ ಮಾಡಲು ರೆಡಿಯಾಗಿದೆ. ಏಪ್ರಿಲ್ 28ಕ್ಕೆ ‘ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸಲು ಬರಲಿದೆ.

Exit mobile version