Site icon Vistara News

Ponniyin Selvan | ಸಲ್ಮಾನ್‌ ಖಾನ್‌ ಸಿನಿಮಾ ರಿಲೀಸ್‌ ಆದ ಸಮಯದಲ್ಲೇ ʻಪೊನ್ನಿಯನ್‌ ಸೆಲ್ವನ್‌-2ʼ ರಿಲೀಸ್‌

Ponniyin Selvan

ಬೆಂಗಳೂರು: ಫರ್ಹಾದ್‌ ಸಮ್ಜಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಲ್ಮಾನ್‌ ಖಾನ್‌-ಪೂಜಾ ಹೆಗ್ಡೆ ನಟನೆಯ ‘ಕಿಸಿ ಕಾ ಭಾಯ್‌ ಕಿಸಿ ಕಾ ಜಾನ್’‌ ಸಿನಿಮಾ ಮುಂದಿನ ವರ್ಷದ ಏಪ್ರಿಲ್‌ 21ರಂದು ಬಿಡುಗಡೆ ಆಗಲಿದೆ. ಟಾಲಿವುಡ್‌ ನಟರಾದ ವೆಂಕಟೇಶ್‌, ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮುಂದಿನ ವರ್ಷದ ಏಪ್ರಿಲ್‌ 21ರಂದು ಬಿಡುಗಡೆ ಆಗಲಿದೆ. ಹೀಗಿರುವಾಗಲೇ ‘ಪೊನ್ನಿಯನ್ ಸೆಲ್ವನ್’ (Ponniyin Selvan) ಸೀಕ್ವೆಲ್ 2 ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, 2023 ಏಪ್ರಿಲ್ 28ಕ್ಕೆ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಸಲ್ಮಾನ್‌ ಖಾನ್‌ ಸಿನಿಮಾ ತೆರೆಕಂಡ ಒಂದೇ ವಾರದ ಬಳಿಕ ಈ ಚಿತ್ರ ಬಿಡುಗಡೆಯಾಗುತ್ತಿದೆ. ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ಕನಸಿನ ಪ್ರಾಜೆಕ್ಟ್ ‘ಪೊನ್ನಿಯನ್ ಸೆಲ್ವನ್’ ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್‌ರಂಥ ದಿಗ್ಗಜ ಕಲಾವಿದರ ಸಮಾಗಮವಿರುವ ಈ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು.

ಇದನ್ನೂ ಓದಿ | Ponniyin Selvan | ಬಿಡುಗಡೆಗೆ ಸಜ್ಜಾಗಿದೆಯಂತೆ ʻಪೊನ್ನಿಯನ್‌ ಸೆಲ್ವನ್‌ ಭಾಗ-2ʼ: ರಿಲೀಸ್‌ ಡೇಟ್‌ ಫಿಕ್ಸ್‌?

ಎ.ಆರ್.ರೆಹಮಾನ್ ಸಂಗೀತ, ರವಿವರ್ಮನ್ ಕ್ಯಾಮೆರಾ, ಸ್ಟಾರ್ – ಅನುಭವಿ ಕಲಾವಿದರ ನಟನೆ, ಅದ್ಧೂರಿ ಮೇಕಿಂಗ್ ಎಲ್ಲವೂ ಸಿನಿರಸಿಕರ ಗಮನ ಸೆಳೆದಿತ್ತು. ಎಲ್ಲೆಡೆ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಚಿತ್ರತಂಡದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ʻಪೊನ್ನಿಯನ್ ಸೆಲ್ವನ್ ಭಾಗ-1′ ವಿಶ್ವಾದ್ಯಂತ 450 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು. ಇದೀಗ ಮತ್ತೊಮ್ಮೆ ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸಲು ಚಿತ್ರತಂಡ ರೆಡಿಯಾಗಿದೆ.

ಇದನ್ನೂ ಓದಿ | Ponniyin Selvan | ʻಪೊನ್ನಿಯನ್‌ ಸೆಲ್ವನ್‌ ಭಾಗ-2ʼ ರಿಲೀಸ್‌ ಡೇಟ್‌ ಅನೌನ್ಸ್‌!

Exit mobile version