Site icon Vistara News

Ponniyin Selvan 2 : ಮಾ.29ಕ್ಕೆ ಪೊನ್ನಿಯಿನ್‌ ಸೆಲ್ವನ್‌ 2 ಸಿನಿಮಾ ಟ್ರೈಲರ್‌ ಬಿಡುಗಡೆ; ಏನೆಲ್ಲ ನಿರೀಕ್ಷೆ?

#image_title

ಹೈದರಾಬಾದ್‌: ಮಣಿರತ್ನಂ ನಿರ್ದೇಶನದ ಪೊನ್ನಿಯಿನ್‌ ಸೆಲ್ವನ್‌ ಸಿನಿಮಾ ಕಳೆದ ವರ್ಷ ಇತಿಹಾಸವನ್ನೇ ಸೃಷ್ಟಿಸಿದೆ. ಇದೀಗ ಆ ಸಿನಿಮಾದ ಎರಡನೇ ಭಾಗವಾದ ‘ಪೊನ್ನಿಯಿನ್‌ ಸೆಲ್ವನ್‌ 2’ (Ponniyin Selvan 2) ಬಿಡುಗಡೆಗೆ ಸಿದ್ಧವಾಗಿದೆ. ಅದಕ್ಕೂ ಮೊದಲು ಸಿನಿಮಾದ ಸಣ್ಣ ಝಲಕ್‌ ತೋರಿಸುವ ನಿಟ್ಟಿನಲ್ಲಿ ಸಿನಿಮಾ ತಂಡ ಮಾರ್ಚ್‌ 29ರಂದು ಸಿನಿಮಾದ ಟ್ರೈಲರ್‌ ಬಿಡುಗಡೆ ಮಾಡುತ್ತಿದೆ. ಈ ಟ್ರೈಲರ್‌ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆಗಳು ಹೆಚ್ಚಿವೆ.

ಇದನ್ನೂ ಓದಿ: Ponniyin Selvan 2 : ‘ಪೊನ್ನಿಯಿನ್ ಸೆಲ್ವನ್-2’ ಚಿತ್ರದ ಮೊದಲನೇ ಹಾಡು ಬಿಡುಗಡೆʼ; ಸಿನಿಮಾ ಬಿಡುಗಡೆ ದಿನಾಂಕವೂ ಫಿಕ್ಸ್‌
ಪೊನ್ನಿಯಿನ್‌ ಸೆಲ್ವನ್‌ ಸಿನಿಮಾದಲ್ಲಿ ಕಮಲ ಹಾಸನ್‌ ಅವರು ಆರಂಭದಲ್ಲಿ ಚಿತ್ರದ ಬಗ್ಗೆ ವಿವರಣೆ ನೀಡಿದ್ದರು. ಇದೀಗ ಎರಡನೇ ಭಾಗದಲ್ಲಿ ಬೇರೊಬ್ಬ ನಟರಿಂದ ಈ ವಿವರಣೆ ನೀಡಿಸುವ ಸಾಧ್ಯತೆಯಿದೆ. ಅದು ಟ್ರೈಲರ್‌ನಲ್ಲಿ ತಿಳಿಯಬಹುದೆನ್ನುವ ನಿರೀಕ್ಷೆಯಿದೆ. ಹಾಗೆಯೇ ಮೊದಲನೇ ಭಾಗದಲ್ಲಿ ಪೊನ್ನಿಯಿನ್‌ ಸೆಲ್ವನ್‌ ಅನ್ನು ಊಮೈ ರಾಣಿ ಹಲವು ಬಾರಿ ಉಳಿಸಿದ್ದಾರೆ. ಐಶ್ವರ್ಯ ರೈ ನಟಿಸಿರುವ ಈ ಊಮೈ ರಾಣಿ ನಿಜಕ್ಕೂ ಯಾರು ಎನ್ನುವ ಬಗ್ಗೆ ಈ ಟ್ರೈಲರ್‌ ರಹಸ್ಯ ಬಿಚ್ಚಿಡಬಹುದು.‌

ಚಿತ್ರದ ಮೊದಲನೇ ಭಾಗದ ಅಂತ್ಯದಲ್ಲಿ ಅರುಲ್‌ ಮೋಳಿ ವರ್ಮನ್‌ ಮತ್ತು ವಂಧಿಯತೇವನ್‌ ಅವರನ್ನು ಚಂಡಮಾರುತದಿಂದಾಗಿ ಸಮುದ್ರದಲ್ಲಿ ಕಳೆದು ಹೋಗುವಂತೆ ಮಾಡಲಾಗಿತ್ತು. ಇದೀಗ ಈ ಸಿನಿಮಾದ ಟ್ರೈಲರ್‌ನಲ್ಲಿ ಅದರ ನೆನಪನ್ನು ಅಭಿಮಾನಿಗಳಿಗೆ ತಂದುಕೊಡಬಹುದು ಎಂದು ನಿರೀಕ್ಷೆಯಿದೆ. ಆ ಇಬ್ಬರು ಮತ್ತೆ ಬದುಕಿ ಬರುತ್ತಾರೆಯೇ ಎನ್ನುವುದು ಟ್ರೈಲರ್‌ನಲ್ಲಿ ತಿಳಿಯಬಹುದು. ಹಾಗೆಯೇ ಈ ಭಾಗದಿಂದಾಗಿ ರಾಜ್ಯವನ್ನು ಯಾರು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆ ಉತ್ತರ ಸಿಗಬಹುದು.

ಇದನ್ನೂ ಓದಿ: Ponniyin Selvan: I | ʻವಿಕ್ರಮ್‌ʼ ಚಿತ್ರದ ದಾಖಲೆ ಸೆಡ್ಡು ಹೊಡೆದ ಪೊನ್ನಿಯಿನ್ ಸೆಲ್ವನ್‌-1: ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು?
ವಿಕ್ರಮ್‌, ತ್ರಿಶಾ, ಜಯಂ ರವಿ, ಕಾರ್ತಿ ಮತ್ತು ಐಶ್ವರ್ಯ ರೈ ಅವರು ಪೊನ್ನಿಯಿನ್‌ ಸೆಲ್ವನ್‌ 2ರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇದೇ ವರ್ಷ ಏಪ್ರಿಲ್‌ 28ರಂದು ತೆರೆ ಕಾಣಲಿದೆ.

Exit mobile version