ಬೆಂಗಳೂರು : 16ನೇ ಏಷ್ಯನ್ ಫಿಲ್ಮ್ ಅವಾರ್ಡ್ಸ್ ನಾಮನಿರ್ದೇಶನ ಪಟ್ಟಿಯನ್ನು ಜನವರಿ 6 ರಂದು ಬಿಡುಗಡೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 12ರಂದು ಹಾಂಗ್ ಕಾಂಗ್‌ನಲ್ಲಿ ನಡೆಯಲಿದೆ. ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ 1 (Ponniyin Selvan: I) ಅತ್ಯುತ್ತಮ ಚಿತ್ರ ಸೇರಿದಂತೆ ಆರು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಮತ್ತೊಂದೆಡೆ, ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಕೂಡ ಎರಡು ವಿಭಾಗಗಳಿಗೆ ನಾಮನಿರ್ದೇಶನಗೊಂಡಿದೆ. ಪೊನ್ನಿಯಿನ್ ಸೆಲ್ವನ್ 1 ಮತ್ತು ಆರ್‌ಆರ್‌ಆರ್ (RRR Film ) ಈ ವರ್ಷ ನಾಮನಿರ್ದೇಶನಗೊಂಡ ಎರಡು ಭಾರತೀಯ ಚಲನಚಿತ್ರಗಳಾಗಿವೆ.
ಏಷ್ಯನ್ ಫಿಲ್ಮ್ ಅವಾರ್ಡ್ಸ್ ಟ್ವೀಟ್ ಮಾಡಿದ್ದು “16ನೇ ಏಷ್ಯನ್ ಚಲನಚಿತ್ರ ಪ್ರಶಸ್ತಿಗಳ ಪತ್ರಿಕಾಗೋಷ್ಠಿ ಇದೀಗ ಯಶಸ್ವಿಯಾಗಿ ಕೊನೆಗೊಂಡಿದೆ. 16ನೇ ಏಷ್ಯನ್ ಫಿಲ್ಮ್ ಅವಾರ್ಡ್ಸ್ ಮಾರ್ಚ್ 12 ರಂದು ಭಾನುವಾರ ರಾತ್ರಿ 7:30 ಕ್ಕೆ ಹಾಂಕಾಂಗ್ ಪ್ಯಾಲೇಸ್ ಮ್ಯೂಸಿಯಂನಲ್ಲಿ ನಡೆಯಲಿದೆ. 16ನೇ ಏಷ್ಯನ್ ಫಿಲ್ಮ್ ಅವಾರ್ಡ್ಸ್ ಮತ್ತು ತೀರ್ಪುಗಾರರ ಅಧ್ಯಕ್ಷರ ನಾಮನಿರ್ದೇಶನ ಪಟ್ಟಿಯನ್ನು ಪ್ರಕಟಿಸಲಾಗಿದೆ ”ಎಂದು ಹೇಳಿದೆ.
ಇದನ್ನೂ ಓದಿ | RRR Film | ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್‌ನಿಂದ ರಾಜಮೌಳಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ
ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ 1 ಅತ್ಯುತ್ತಮ ಚಿತ್ರ ವಿಭಾಗದಲ್ಲಿ, ಅತ್ಯುತ್ತಮ ಸಂಕಲನ ವಿಭಾಗದಲ್ಲಿ ಶ್ರೀಕರ್ ಪ್ರಸಾದ್, ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರವಿ ವರ್ಮನ್, ಅತ್ಯುತ್ತಮ ಮೂಲ ಸಂಗೀತಕ್ಕಾಗಿ ಎ.ಆರ್ ರೆಹಮಾನ್, ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಏಕ ಲಖಾನಿ ಮತ್ತು ಅತ್ಯುತ್ತಮ ನಿರ್ಮಾಣ ವಿನ್ಯಾಸಕ್ಕಾಗಿ ತೋಟ ತರಣಿ ಹೀಗೆ ಆರು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
ಎಸ್ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾದ ಅತ್ಯುತ್ತಮ ವಿಷುಯಲ್ ಎಫೆಕ್ಟ್ಸ್ ವಿಭಾಗದಲ್ಲಿ ಶ್ರೀನಿವಾಸ್ ಮೋಹನ್ ಅವರು ನಾಮನಿರ್ದೇಶನಗೊಂಡಿದರ, ಅತ್ಯುತ್ತಮ ಧ್ವನಿ ವಿಭಾಗದಲ್ಲಿ ಅಶ್ವಿನ್ ರಾಜಶೇಖರ್ ನಾಮನಿರ್ದೇಶನಗೊಂಡಿದೆ.
ಇದನ್ನೂ ಓದಿ | RRR Film | ಜ್ಯೂ.ಎನ್‌ಟಿಆರ್ ನೋಡಿ ಭಾವುಕರಾದ ಜಪಾನ್ ಅಭಿಮಾನಿಗಳು: ವಿಡಿಯೊ ವೈರಲ್!