Site icon Vistara News

Salman Khan : ಸಲ್ಮಾನ್‌ ಜತೆ ಪೂಜಾ ಹೆಗ್ಡೆ ಡೇಟಿಂಗ್‌ ನಿಜಾನಾ? ನಟಿ ಹೇಳಿದ್ದೇನು?

#image_title

ಮುಂಬೈ: ಬಾಲಿವುಡ್‌ನ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಸಲ್ಮಾನ್‌ ಖಾನ್‌ (Salman Khan) ಅವರೊಂದಿಗೆ ನಟಿ ಪೂಜಾ ಹೆಗ್ಡೆ ʼಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಜೋಡಿಗೆ ತೆರೆ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ಪ್ರೀತಿ ಹುಟ್ಟಿಕೊಂಡಿದೆ, ಇಬ್ಬರೂ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಸುದ್ದಿಗಳು ಹರಿದಾಡಿವೆ. ಆದರೆ ಇದೀಗ ಈ ಸುದ್ದಿಗಳ ಬಗ್ಗೆ ಪೂಜಾ ಹೆಗ್ಡೆ ಪ್ರತಿಕ್ರಿಯಿಸಿದ್ದು, ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಸಲ್ಮಾನ್ ಮತ್ತು ಪೂಜಾ ಹೆಡ್ಗೆ ಅವರ ಡೇಟಿಂಗ್ ವದಂತಿಗಳು ಕೆಲವು ತಿಂಗಳ ಹಿಂದೆಯೇ ಪ್ರಾರಂಭವಾಯಿತು. ಮಂಗಳೂರಿನಲ್ಲಿ ನಡೆದ ಪೂಜಾ ಹೆಗ್ಡೆ ಸಹೋದರ ರಿಷಭ್‌ ಹೆಗ್ಡೆ ಅವರ ಮದುವೆಗೂ ಸಲ್ಮಾನ್‌ ಬಂದಿದ್ದರು. ಅದರಿಂದಾಗಿ ವದಂತಿಗಳು ಇನ್ನಷ್ಟು ಬಲಗೊಂಡಿದ್ದವು. ಆದರೆ ಈ ಬಗ್ಗೆ ಇಬ್ಬರೂ ಯಾವೊಂದು ಹೇಳಿಕೆಯನ್ನೂ ಕೊಟ್ಟಿರಲಿಲ್ಲ. ಇದೀಗ ಈ ವಿಚಾರದಲ್ಲಿ ಮಾತನಾಡಿರುವ ಪೂಜಾ ಹೆಗ್ಡೆ, “ನಾನಿನ್ನೂ ಸಿಂಗಲ್‌. ಸದ್ಯಕ್ಕೆ ನನ್ನ ವೃತ್ತಿಯೇ ನನ್ನ ಆದ್ಯತೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

“ನನ್ನ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲ ವಿಚಾರಗಳನ್ನೂ ನಾನು ಓದುತ್ತಿರುತ್ತೇನೆ. ಆದರೆ ಅದಕ್ಕೆ ನಾನು ಏನು ಮಾಡಲಿ. ನಾನಿನ್ನೂ ಒಂಟಿಯಾಗಿದ್ದಾನೆ ಹಾಗೆಯೇ ಒಂಟಿಯಾಗಿರುವುದಕ್ಕೇ ಬಯಸುತ್ತೇನೆ. ನಾನು ಈಗ ನನ್ನ ವೃತ್ತಿಜೀವನದ ಮೇಲೆ ಪ್ರಾಮಾಣಿಕವಾಗಿ ಗಮನಹರಿಸುತ್ತಿದ್ದೇನೆ. ಅದು ನನ್ನ ಗುರಿ. ಕುಳಿತುಕೊಂಡು ಈ ವದಂತಿಗಳನ್ನು ಪರಿಹರಿಸಲು ಸಾಧ್ಯವಿಲ್ಲ” ಎಂದು ನಟಿ ಹೇಳಿದ್ದಾರೆ.

ಇದನ್ನೂ ಓದಿ: Salman khan: ಸಲ್ಮಾನ್​ ಖಾನ್​​ರನ್ನು ಏ.30ರೊಳಗೆ ಕೊಲ್ಲುವುದಾಗಿ ಹೇಳಿದ್ದವ ಅರೆಸ್ಟ್​; ಆತ ಬಾಲಕ!
ಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ ಸಿನಿಮಾದಲ್ಲಿ ಪೂಜಾ ಸಲ್ಮಾನ್‌ ಪ್ರೇಯಸಿ ಪಾತ್ರದಲ್ಲಿ ನಟಿಸಿದ್ದಾರೆ. ಪೂಜಾ ಮತ್ತವರ ಕುಟುಂಬವನ್ನು ರೌಡಿಗಳಿಂದ ರಕ್ಷಿಸಲು ಸಲ್ಮಾನ್‌ ರೌಡಿಗಳೊಂದಿಗೆ ಕುಸ್ತಿಯಾಡುವ ದೃಶ್ಯಗಳನ್ನು ಸಿನಿಮಾದ ಟ್ರೈಲರ್‌ನಲ್ಲಿ ನೋಡಬಹುದಾಗಿದೆ. ಫರ್ಹಾದ್ ಸಾಮ್ಜಿ ನಿರ್ದೇಶನದ ಈ ಚಿತ್ರದಲ್ಲಿ ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಶೆಹನಾಜ್ ಗಿಲ್, ಪಾಲಕ್ ತಿವಾರಿ, ವಿಜೇಂದರ್ ಸಿಂಗ್, ರಾಘವ್ ಜುಯಲ್, ಜಸ್ಸಿ ಗಿಲ್, ಭೂಮಿಕಾ ಚಾವ್ಲಾ ಮತ್ತು ಸಿದ್ಧಾರ್ಥ್ ನಿಗಮ್ ಸೇರಿ ಅನೇಕರು ನಟಿಸಿದ್ದಾರೆ.‌

ಚಿತ್ರದ ಬಗ್ಗೆ ಮಾತನಾಡಿರುವ ಪೂಜಾ, “ಈ ಸಿನಿಮಾದ ಅವಕಾಶ ಲಾಕ್‌ಡೌನ್‌ಗೂ ಮೊದಲೇ ನನ್ನ ಬಳಿ ಬಂದಿತು. ಈ ಕಥೆ ವಿಭಿನ್ನವಾಗಿದೆ. ಸಿನಿಮಾದಲ್ಲಿ ನಾನು ತೆಲುಗು ಹುಡುಗಿಯಾಗಿದ್ದೇನೆ. ನಾನು ಈಗಾಗಲೇ ಹಲವು ತೆಲುಗು ಸಿನಿಮಾಗಳನ್ನು ಮಾಡಿರುವುದರಿಂದಾಗಿ ನನಗೆ ಈ ಪಾತ್ರ ಸರಿಹೊಂದುತ್ತದೆ ಎಂದು ನನಗೆ ತಿಳಿಯಿತು. ಸಲ್ಮಾನ್ ಖಾನ್ ಅವರ ಚಿತ್ರದಲ್ಲಿ ನನಗೆ ಅಂತಹ ಪ್ರಮುಖ ಪಾತ್ರ ಸಿಕ್ಕಿರುವುದರ ಬಗ್ಗೆ ಸಂತಸವಿದೆ” ಎಂದು ಹೇಳಿದ್ದಾರೆ.

ಸಲ್ಮಾನ್ ಜತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡ ನಟಿ, “ನನಗೆ ಅವರೊಂದಿಗೆ ಕೆಲಸ ಮಾಡಿದ ಅತ್ಯುತ್ತಮ ಅನುಭವ ಸಿಕ್ಕಿದೆ. ನೀವು ಸಂದರ್ಶನಗಳಲ್ಲಿ ಅವರನ್ನು ಯಾವ ರೀತಿಯಲ್ಲಿ ನೋಡುತ್ತೀರೋ ಅವರು ಸೆಟ್‌ನಲ್ಲಿ ಕೂಡ ಹಾಗೇ ಇರುತ್ತಾರೆ. ಅನೇಕರು ಯೋಚನೆ ಮಾಡುವ ರೀತಿಯಲ್ಲಿ ಬದುಕುವುದಿಲ್ಲ. ಆದರೆ ಸಲ್ಮಾನ್‌ ಅವರು ಹಾಗಲ್ಲ. ಅವರು ಹೇಗೆ ಯೋಚಿಸುತ್ತಾರೆಯೋ ಹಾಗೆಯೇ ಬದುಕುತ್ತಾರೆ. ಅದು ನನಗೆ ಇಷ್ಟ” ಎಂದು ಹೇಳಿದ್ದಾರೆ.

Exit mobile version