Site icon Vistara News

Pooja Hegde: ನಿರ್ಮಾಪಕರಿಂದ ಐಷಾರಾಮಿ ಕಾರ್ ಗಿಫ್ಟ್‌ ಪಡೆದರಾ ಪೂಜಾ ಹೆಗ್ಡೆ? ನಟಿ ಸ್ಪಷ್ಟನೆ ನೀಡಿದ್ದೇನು?

Pooja Hegde Received A Luxurious Car

ಬೆಂಗಳೂರು: ಸಲ್ಮಾನ್‌ ಖಾನ್‌ (Salman Khan) ಅವರೊಂದಿಗೆ ನಟಿ ಪೂಜಾ ಹೆಗ್ಡೆ (Pooja Hegde) ʼಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಬ್ಬರೂ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಸುದ್ದಿಗಳು ಕೆಲವು ದಿನಗಳ ಹಿಂದೆ ವೈರಲ್‌ ಆಗಿತ್ತು. ಇದೀಗ ನಟಿ ಮತ್ತೊಂದು ಸುದ್ದಿಯಲ್ಲಿ ಇದ್ದಾರೆ. ನಿರ್ಮಾಪಕರೊಬ್ಬರು ನಟಿಗೆ ದುಬಾರಿ ಬೆಲೆಯ ಕಾರ್‌ ಗಿಫ್ಟ್‌ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ ನಿರ್ಮಾಪಕರ ಹೆಸರು ಬಹಿರಂಗಗೊಂಡಿಲ್ಲ. ಯಾವುದೇ ತೊಂದರೆಯಿಲ್ಲದೆ ನಿಗದಿತ ಸಮಯಕ್ಕೆ ಸೆಟ್‌ಗೆ ತಲುಪಲು ನಟಿಗೆ ಕಾರು ನೀಡಲಾಗಿದೆ ಎಂದು ಹೇಳಲಾಗಿದೆ.

ಬಾಲಿವುಡ್ ಬಬಲ್‌ಗೆ ನೀಡಿದ ಸಂದರ್ಶನದಲ್ಲಿ ಪೂಜಾ ಹೆಗ್ಡೆ, “ನಾನು ಈ ರೀತಿಯ ಗಾಸಿಪ್‌ಗಳನ್ನು ಓದುತ್ತಲೇ ಇರುತ್ತೇನೆ. ನನ್ನ ಪೋಷಕರು ನನಗೆ ಆಗಾಗ ಈ ರೀತಿಯ ಗಾಸಿಪ್‌ ನ್ಯೂಸ್‌ಗಳನ್ನು ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಕಳುಹಿಸುತ್ತಾರೆ, ‘ಇದು ನಿಜವೇ?’ ಎಂದು ಕೇಳುತ್ತಾರೆ. ನಾನು ಆಗ ಇಂತಹ ಸುದ್ದಿಗಳನ್ನು ನಿರ್ಮಾಪಕರಿಗೆ ಸ್ಕ್ರೀನ್‌ಶಾಟ್ ಕಳುಹಿಸಿ, ನಿಮ್ಮ ಸರ್‌ಪ್ರೈಸ್‌ ಹಾಳಾಯಿತು ಎಂದು ಹೇಳುತ್ತಿರುತ್ತೇನೆ. ಹೇಗಿದ್ದರೂ ನನ್ನ ಹೆಸರು ಹಾಳು ಮಾಡಿದ್ರಿ, ಈ ನೆಪದಲ್ಲಾದರೂ ಕಾರು ಕೊಡಿ ಎನ್ನುತ್ತೇನೆʼʼಎಂದು ವ್ಯಂಗ್ಯವಾಡಿದ್ದಾರೆ.

ಸಲ್ಮಾನ್‌ ಜತೆಗಿನ ಸಂಬಂಧದ ಕುರಿತು ನಟಿ ಪೂಜಾ ಹೆಗ್ಡೆ ಪ್ರತಿಕ್ರಿಯಿಸಿದ್ದರು. ಈ ವಿಚಾರದಲ್ಲಿ ಮಾತನಾಡಿರುವ ಪೂಜಾ ಹೆಗ್ಡೆ, “ನಾನಿನ್ನೂ ಸಿಂಗಲ್‌. ಸದ್ಯಕ್ಕೆ ನನ್ನ ವೃತ್ತಿಯೇ ನನ್ನ ಆದ್ಯತೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇದನ್ನೂ ಓದಿ: Salman Khan : ಸಲ್ಮಾನ್‌ ಜತೆ ಪೂಜಾ ಹೆಗ್ಡೆ ಡೇಟಿಂಗ್‌ ನಿಜಾನಾ? ನಟಿ ಹೇಳಿದ್ದೇನು?

“ನನ್ನ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲ ವಿಚಾರಗಳನ್ನೂ ನಾನು ಓದುತ್ತಿರುತ್ತೇನೆ. ಆದರೆ ಅದಕ್ಕೆ ನಾನು ಏನು ಮಾಡಲಿ. ನಾನಿನ್ನೂ ಒಂಟಿಯಾಗಿದ್ದಾನೆ ಹಾಗೆಯೇ ಒಂಟಿಯಾಗಿರುವುದಕ್ಕೇ ಬಯಸುತ್ತೇನೆ. ನಾನು ಈಗ ನನ್ನ ವೃತ್ತಿಜೀವನದ ಮೇಲೆ ಪ್ರಾಮಾಣಿಕವಾಗಿ ಗಮನಹರಿಸುತ್ತಿದ್ದೇನೆ. ಅದು ನನ್ನ ಗುರಿ. ಕುಳಿತುಕೊಂಡು ಈ ವದಂತಿಗಳನ್ನು ಪರಿಹರಿಸಲು ಸಾಧ್ಯವಿಲ್ಲ” ಎಂದು ನಟಿ ಹೇಳಿದ್ದಾರೆ.

ಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ ಸಿನಿಮಾದಲ್ಲಿ ಪೂಜಾ ಸಲ್ಮಾನ್‌ ಪ್ರೇಯಸಿ ಪಾತ್ರದಲ್ಲಿ ನಟಿಸಿದ್ದಾರೆ. ಪೂಜಾ ಮತ್ತವರ ಕುಟುಂಬವನ್ನು ರೌಡಿಗಳಿಂದ ರಕ್ಷಿಸಲು ಸಲ್ಮಾನ್‌ ರೌಡಿಗಳೊಂದಿಗೆ ಕುಸ್ತಿಯಾಡುವ ದೃಶ್ಯಗಳನ್ನು ಸಿನಿಮಾದ ಟ್ರೈಲರ್‌ನಲ್ಲಿ ನೋಡಬಹುದಾಗಿದೆ. ಫರ್ಹಾದ್ ಸಾಮ್ಜಿ ನಿರ್ದೇಶನದ ಈ ಚಿತ್ರದಲ್ಲಿ ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಶೆಹನಾಜ್ ಗಿಲ್, ಪಾಲಕ್ ತಿವಾರಿ, ವಿಜೇಂದರ್ ಸಿಂಗ್, ರಾಘವ್ ಜುಯಲ್, ಜಸ್ಸಿ ಗಿಲ್, ಭೂಮಿಕಾ ಚಾವ್ಲಾ ಮತ್ತು ಸಿದ್ಧಾರ್ಥ್ ನಿಗಮ್ ಸೇರಿ ಅನೇಕರು ನಟಿಸಿದ್ದಾರೆ.‌

Exit mobile version