Site icon Vistara News

Pooja Hegde | ಕೇಕ್‌ ತಿನ್ನಿಸಲು ಹೋದ ಪೂಜಾ ಹೆಗ್ಡೆಗೆ ʻಸೀನಿಯರ್‌ ಫಸ್ಟ್‌ʻ ಅಂದ್ರು ಸಲ್ಮಾನ್‌ ಖಾನ್‌: ವಿಡಿಯೊ ವೈರಲ್‌!

Pooja Hegde

ಬೆಂಗಳೂರು : ಟಾಲಿವುಡ್‌ ನಟಿ ಪೂಜಾ ಹೆಗ್ಡೆ (Pooja Hegde) ಜನುಮದಿನದ ಅಂಗವಾಗಿ ಗುರುವಾರ (ಅ.13) ʻಕಿಸಿ ಕಾ ಭಾಯಿ ಕಿಸಿ ಕಿ ಜಾನ್’ ಸಿನಿಮಾ ಸೆಟ್‌ನಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮತ್ತು ಸೌತ್ ಸ್ಟಾರ್ ವೆಂಕಟೇಶ್ ದಗ್ಗುಬಾಟಿ ಕೇಕ್‌ ತಿನ್ನಿಸಿದ್ದಾರೆ. ಸಂಭ್ರಮ ಕ್ಷಣದ ವಿಡಿಯೊ ವೈರಲ್‌ ಆಗಿದ್ದು, ವಿಡಿಯೊವನ್ನು ನಟ ಸಲ್ಮಾನ್‌ ಖಾನ್‌ ಇನ್‌ಸ್ಟಾ ಮೂಲಕ ಹಂಚಿಕೊಂಡಿದ್ದಾರೆ.

ಕೇಕ್‌ ತಿನ್ನಿಸಲು ಪೂಜಾ ಹೆಗ್ಡೆ ಮುಂದಾದಾಗ ಸಲ್ಮಾನ್‌ ಖಾನ್‌, ನಟ ವೆಂಕಟೇಶ್‌ ಕಡೆ ತಿರುಗಿ ʻʻಸೀನಿಯರ್‌ ಫಸ್ಟ್‌ʼʼ ಎಂದು ಲುಕ್‌ ಕೊಟ್ಟಿದ್ದಾರೆ. ನಂತರ ಖುಷಿಯಿಂದ ಕೇಕ್‌ ತಿಂದು ಪೂಜಾ ಹೆಗ್ಡೆಯನ್ನು ಹಗ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗಿದೆ.

ಇದನ್ನೂ ಓದಿ | Salman Khan | ಮೂಸೆವಾಲಾ ರೀತಿಯೇ ಸಲ್ಮಾನ್‌ ಖಾನ್‌ ಹತ್ಯೆಗೆ ಸಂಚು? ಬಂಧಿತ ಆರೋಪಿ ಹೇಳಿದ್ದೇನು?

ಸಲ್ಮಾನ್ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಟೀಸರ್ ರಿಲೀಸ್ ಆದ ಸಂದರ್ಭದಲ್ಲಿ ʻಕಬಿ ಈದ್ ಕಬಿ ದಿವಾಲಿʼ ಎನ್ನುವ ಟೈಟಲ್ ಇಡಲಾಗಿತ್ತು. ಇತ್ತೀಚಿಗಷ್ಟೆ ಟೈಟಲ್ ರಿವೀಲ್ ಮಾಡುವ ಜತೆಗೆ ಪುಟ್ಟ ಟೀಸರ್ ಕೂಡ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿತ್ತು ಸಿನಿಮಾ ತಂಡ. ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಹುಟ್ಟುಹಬ್ಬದ ಪ್ರಯುಕ್ತ ಸೆಟ್‌ನಲ್ಲಿ ಕೇಕ್‌ ಕತ್ತರಿಸುವ ಮೂಲಕ ವಿಶೇಷವಾಗಿ ಆಚರಿಸಿದ್ದಾರೆ.

ಈ ಸಿನಿಮಾಗೆ ಫರ್ಹಾನ್ ಸಾಮ್ಜಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಲ್ಮಾನ್ ಖಾನ್ ನಿರ್ಮಾಣದಲ್ಲಿಯೇ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾ ಟಾಲಿವುಡ್‌ ಫ್ಲಾಪ್‌ ಸಿನಿಮಾವೊಂದರ ರಿಮೇಕ್‌ ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಜಗಪತಿ ಬಾಬು , ರಾಘವ್ ಜುಯಲ್, ಜಸ್ಸಿ ಗಿಲ್, ಸಿದ್ಧಾರ್ಥ್ ನಿಗಮ್, ಶೆಹನಾಜ್ ಗಿಲ್, ಪಾಲಕ್ ತಿವಾರಿ ಮತ್ತು ಮಾಳವಿಕಾ ಶರ್ಮಾ ತಾರಾ ಬಳಗವಿದೆ. ಚಿತ್ರವನ್ನು ಡಿಸೆಂಬರ್ 30, 2022ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ರಣವೀರ್ ಸಿಂಗ್ ಹಾಗೂ ರೋಹಿತ್ ಶೆಟ್ಟಿ ನಟನೆಯ ʻಸರ್ಕಸ್ʼ ಚಿತ್ರದಲ್ಲಿ ಪೂಜಾ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಇತ್ತೀಚೆಗೆ ಮೆಗಾಸ್ಟಾರ್‌ ಚಿರಂಜೀವಿ ನಟನೆಯ ʻಗಾಡ್ ಫಾದರ್‌ʼನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗೇ ʻಟೈಗರ್ 3ʼನಲ್ಲಿ ಕತ್ರಿನಾ ಕೈಫ್ ಜತೆಗೆ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ | Ranveer Singh | ಬೆತ್ತಲೆ ಫೋಟೊ ನಂದಲ್ಲ ಎಂದ ರಣವೀರ್‌ ಸಿಂಗ್‌!

Exit mobile version