Site icon Vistara News

Pooja Hegde: ಶಾಹಿದ್ ಕಪೂರ್ ಜತೆ ಪೂಜಾ ಹೆಗ್ಡೆ ರೊಮ್ಯಾನ್ಸ್‌!

Pooja Hegde Shahid Kapoor

ಬೆಂಗಳೂರು: ಶಾಹಿದ್ ಕಪೂರ್ ಅವರ ಮುಂಬರುವ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ (Pooja Hegde) ನಾಯಕಿಯಾಗಿ ನಟಿಸಲಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಿಸಿದೆ. ಇನ್ನೂ ಹೆಸರಿಡದ ಚಿತ್ರ ಪೊಲೀಸ್ ಅಧಿಕಾರಿಯ ಕುರಿತಾಗಿದೆ ಎನ್ನಲಾಗಿದೆ. “ಅಲಾ ವೈಕುಂಠಪುರಮುಲೂ”, “ಬೀಸ್ಟ್”, “ರಾಧೆ ಶ್ಯಾಮ್” ಮತ್ತು “ಕಿಸಿ ಕಾ ಭಾಯ್ ಕಿಸಿ ಕಿ ಜಾನ್” ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪೂಜಾ ಹೆಗ್ಡೆ, ನಿರ್ದೇಶಕ ರೋಶನ್‌ ಆಂಡ್ರ್ಯೂಸ್ ಮತ್ತು ಕಪೂರ್ ಅವರೊಂದಿಗೆ ಮೊದಲ ಬಾರಿಗೆ ಕೈ ಜೋಡಿಸುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.

ಈ ಬಗ್ಗೆ ಶಾಹಿದ್ ಕಪೂರ್ ಮಾತನಾಡಿ ʻʻಇದೊಂದು ರೋಚಕ ಹಾಗೂ ವಿಭಿನ್ನ ಕಥಾಹಂದರ ಹೊಂದಿರುವ ವಿಶೇಷ ಚಿತ್ರ. ರೋಶನ್ ಆಂಡ್ರ್ಯೂಸ್ ಅವರು ದೊಡ್ಡ ಪರದೆಯ ಮೇಲೆ ಮ್ಯಾಜಿಕ್ ಮಾಡಲಿದ್ದಾರೆ. ಈ ಪ್ರಯಾಣವನ್ನು ಪ್ರಾರಂಭಿಸಲು ಮತ್ತು ಪ್ರೇಕ್ಷಕರು ನನ್ನನ್ನು ವಿಶಿಷ್ಟ ಮತ್ತು ವಿಭಿನ್ನ ಪಾತ್ರದಲ್ಲಿ ನೋಡಲಿದ್ದಾರೆʼʼಎಂದರು. ಜೀ ಸ್ಟುಡಿಯೋಸ್ ಮತ್ತು ರಾಯ್ ಕಪೂರ್ ಫಿಲ್ಮ್ಸ್ ಸಿನಿಮಾವನ್ನು ಬೆಂಬಲಿಸಿದೆ. ಶೀಘ್ರದಲ್ಲೇ ಸಿನಿಮಾ ಸೆಟೇರಲಿದ್ದು, 2024ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Rashmika Mandanna: ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್‌?

ಕೆಲವು ದಿನಗಳ ಹಿಂದೆಯಷ್ಟೇ ಪೂಜಾ ಹೆಗ್ಡೆ ಖ್ಯಾತ ಕ್ರಿಕೆಟಿಗನ ಜತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ ಎಂದು ವರದಿಯಾಗಿತ್ತು. ಮದುವೆಗೆ ಎಲ್ಲ ಸಿದ್ಧತೆ ನಡೆಯುತ್ತಿದೆ ಎಂತಲೂ ವರದಿಯಾಗಿತ್ತು. ಆ ಖ್ಯಾತ ಕ್ರಿಕೆಟಿಗ ಯಾರು ಎಂಬುದರ ಬಗ್ಗೆ ಎಲ್ಲೂ ರಿವೀಲ್ ಆಗಿಲ್ಲ.ಈ ಬಗ್ಗೆ ನಟಿ ಯಾವುದೇ ಸ್ಪಷ್ಟನೆ ನೀಡಿಲ್ಲ ಆದರೆ ತೆಲುಗು ಮಾಧ್ಯಮಗಳು ಈ ಬಗ್ಗೆ ಸುದ್ದಿ ಮಾಡಿದ್ದವು. ಪೂಜಾ ಹೆಗ್ಡೆ ತೆಲುಗು ಸಿನಿಮಾ ಹಾಗೂ ಬಾಲಿವುಡ್​ನಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ. ಹಿಂದಿಯಲ್ಲಿ ಹಲವು ಸಿನಿಮಾ ಮಾಡಿದ್ದರೂ ಮೂವಿ ಯಾವುದೂ ಅಷ್ಟಾಗಿ ಹಿಟ್ ಆಗಿಲ್ಲ.

ಇದನ್ನೂ ಓದಿ: Pooja Hegde: ಕೆಂಪು ಉಡುಪಿನಲ್ಲಿ ಸಖತ್‌ ಹಾಟ್‌ ಆಗಿ ಕಂಡ ಪೂಜಾ ಹೆಗ್ಡೆ

ರಶ್ಮಿಕಾ ಮಂದಣ್ಣ ಜತೆಯೂ ಶಾಹಿದ್‌ ನಟನೆ

ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ರಶ್ಮಿಕಾ ಟಾಲಿವುಡ್‌ ಅಲ್ಲದೇ ಬಾಲಿವುಡ್‌ ಸಿನಿರಂಗದಲ್ಲಿಯೂ ಮಿಂಚಿದ್ದಾರೆ. ಅನುಭವಿ ಅನೀಸ್ ಬಾಜ್ಮಿ ನಿರ್ದೇಶನದ ಹಾಗೂ ಏಕ್ತಾ ಕಪೂರ್ ಮತ್ತು ದಿಲ್ ರಾಜು ನಿರ್ಮಾಣದ ಹೊಸ ಸಿನಿಮಾಗೆ ರಶ್ಮಿಕಾ ಹಾಗೂ ಶಾಹಿದ್‌ ನಾಯಕ ನಾಯಕಿ ಎಂದು ವರದಿಯಾಗಿದೆ. ಮಾಧ್ಯಮವೊಂದರ ಮಾಹಿತಿ ಪ್ರಕಾರ “ರಶ್ಮಿಕಾ ಈ ಹೊಸ ಯೋಜನೆಗೆ ಮೊದಲೇ ಆಯ್ಕೆಯಾಗಿದ್ದರು. ಏಕ್ತಾ ಕಪೂರ್ ಮತ್ತು ದಿಲ್ ರಾಜು ಇಬ್ಬರೂ ರಶ್ಮಿಕಾ ಜತೆ ವಾರಿಸು ಸಿನಿಮಾದಲ್ಲಿ ಕೆಲಸವನ್ನು ಮಾಡಿದ್ದಾರೆ. ಇದಲ್ಲದೆ, ಶಾಹಿದ್ ಮತ್ತು ರಶ್ಮಿಕಾ ತೆರೆ ಮೇಲೆ ಚೆಂದವಾಗಿ ಕಾಣಿಸುತ್ತಾರೆ. ಆದ್ದರಿಂದ ರಶ್ಮಿಕಾ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆʼʼಎನ್ನಲಾಗಿದೆ. ಕುತೂಹಲವೆಂದರೆ ಈ ಸಿನಿಮಾದಲ್ಲಿ ಶಾಹಿದ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ರಶ್ಮಿಕಾ ಮಂದಣ್ಣ ಟಾಲಿವುಡ್​ನಲ್ಲಿ ಫೇಮಸ್ ಆದ ಬಳಿಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. 

Exit mobile version