Site icon Vistara News

Poonam Pandey: ಪೂನಂ ಪಾಂಡೆಗೆ ಮಕ್ಕಳಿಂದ ಚಿಕ್ಕ ರಿಕ್ವೆಸ್ಟ್‌; ಅಮ್ಮ ಹೊಡಿತಾರೆ ಎಂದ ಹಾಟ್‌ ಬೆಡಗಿ!

Poonam Pandey instagram id in a public place

ಬೆಂಗಳೂರು: ಪೂನಂ ಪಾಂಡೆ (Poonam Pandey) ಇತ್ತೀಚೆಗೆ ಮುಂಬೈನಲ್ಲಿ ಸಾರ್ವಜನಿಕವಾಗಿ ಕಂಡರು. ಪೂನಂ ನೋಡುತ್ತಲೇ ಮೈದಾನಲ್ಲಿ ಕ್ರಿಕೆಟ್ ಆಡುತ್ತಿರುವ ಮಕ್ಕಳು ಪೂನಂ ಪಾಂಡೆ ಕಡೆ ಓದಿ ಬಂದು ಮಾತನಾಡಿಸಿದರು. ಜತೆಗೆ ಪೂನಂ ಅಭಿಮಾನಿಯೊಬ್ಬರು ತಾವೇ ಬಿಡಿಸಿದ ಚಿತ್ರವನ್ನು ಪೂನಂಗೆ ಗಿಫ್ಟ್‌ ಮಾಡಿದ್ದಾರೆ. ಇದೀಗ ಪೂನಂ ಅವರ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಮಕ್ಕಳು ಪೂನಂ ಹತ್ತಿರ ಓಡಿ ಬರುತ್ತಿದ್ದಂತೆ ಅದರಲ್ಲಿ ಒಬ್ಬ ಬಾಲಕ ಪೂನಂ ಪಾಂಡೆಗೆ ʻನಿಮ್ಮ ಇನ್‌ಸ್ಟಾಗ್ರಾಂ ಐಡಿ ಕೊಡಿʼ ಎಂದು ಕೇಳಿದ್ದಾನೆ. ಇದಕ್ಕೆ ಪೂನಂ ʻನನ್ನ ಇನ್‌ಸ್ಟಾಗ್ರಾಂ ಐಡಿ ನಿನಗೆ ಯಾಕೆ ಬೇಕುʼ? ಅದನ್ನ ತಗೊಂಡು ನೀನೇನು ಮಾಡ್ತೀಯಾ? ಎಂದು ಮರು ಪ್ರಶ್ನೆಯನ್ನ ಹಾಕಿದ್ದಾರೆ. ʻನಿನಗೆ ನಿಮ್ಮ ಅಮ್ಮನನ್ನ ಕಂಡರೆ ಭಯ ಇಲ್ಲವಾ..? ನಿಮ್ಮ ತಾಯಿಗೆ ಈ ವಿಚಾರ ಗೊತ್ತಾದರೆ ಹೊಡೆಯುತ್ತಾರೆʼ ಎಂದಿದ್ದಾರೆ. ಈ ಸನ್ನಿವೇಶದ ವಿಡಿಯೊ ವೈರಲ್‌ ಆಗುತ್ತಿದೆ. ಪೂನಂ ಪಬ್ಲಿಸಿಟಿ ಸ್ಟಂಟ್‌ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಇನ್ನು ಮತ್ತೊಬ್ಬರು ಪೂನಂ ಚಿತ್ರವನ್ನು ಬಿಡಿಸಿ ಗಿಫ್ಟ್‌ ಕೊಟ್ಟಿರುವ ಬಗ್ಗೆ ಮಾಧ್ಯಮದ ಜತೆ ಮಾತನಾಡಿದರು. ʻʻಈ ಫೋಟೊ ಫ್ರೇಮ್‌ ನನಗೆ ಗಿಫ್ಟ್‌ ಆಗಿ ಕೊಟ್ಟಿರುವುದು ಆಸ್ಕರ್‌ಗಿಂತ ಕಡಿಮೆಯಿಲ್ಲ. ಫ್ಯಾನ್ಸ್‌ ಪ್ರೀತಿ ನೋಡಿ ನನ್ನ ಜೀವನದಲ್ಲಿ ನಾನು ಏನನ್ನಾದರೂ ಗಳಿಸಿದ್ದೇನೆ ಎಂದು ಖುಷಿಯಾಗುತ್ತಿದೆ. ನಾನು ಈ ಉದ್ಯಮಕ್ಕೆ ಬಂದು 12 ವರ್ಷಗಳು ಕಳೆದಿವೆ. ನೀವು ಜೀವನದಲ್ಲಿ ಏನು ಬೇಕಾದರೂ ಗಳಿಸಬಹುದು ನಿಜವಾದ ಅಭಿಮಾನಿಯನ್ನು ಗಳಿಸುವುದು ಕಷ್ಟʼʼ ಎಂದಿದ್ದಾರೆ.

ಇದನ್ನೂ ಓದಿ: Poonam Pandey: ಪೂನಂ ಪಾಂಡೆಗೆ ಕಾನೂನು ಸಂಕಷ್ಟ; 100 ಕೋಟಿ ರೂ. ಮಾನನಷ್ಟ ಕೇಸ್

ಪೂನಂ ಪಾಂಡೆ (Poonam Pandey) ಅವರು ಗರ್ಭಕಂಠ ಕ್ಯಾನ್ಸರ್‌ನಿಂದ (Cervical Cancer) ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಡಿ, ಮರುದಿನ ‘ಇಲ್ಲ ನಾನು ಸತ್ತಿಲ್ಲ’ ಎಂದು ನಟಿ ನೀಡಿದ ಸ್ಪಷ್ಟನೆ ಕೂಡ ಭಾರಿ ಸುದ್ದಿಯಾಗಿತ್ತು.

ಪೂನಂ ವಿಡಿಯೊದಲ್ಲಿ ʻʻನಿಮ್ಮೆಲ್ಲರೊಂದಿಗೆ ಮಹತ್ವದ ಸಂಗತಿಯೊಂದನ್ನು ಹೇಳಲೇಬೇಕಾಗಿದೆ. ನಾನು ಇನ್ನೂ ಇದ್ದೇನೆ. ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ನನ್ನನ್ನು ಬಲಿ ತೆಗೆದುಕೊಂಡಿಲ್ಲ, ದುರಂತವೆಂದರೆ, ಈ ರೋಗವನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಸಾವಿರಾರು ಮಹಿಳೆಯರು ಜೀವ ಕಳೆದುಕೊಂಡಿದ್ದಾರೆ. ಇತರ ಕೆಲವು ಕ್ಯಾನ್ಸರ್ ಗಳಿಗಿಂತ ಭಿನ್ನವಾಗಿ ಗರ್ಭಕಂಠದ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಎಚ್​ಪಿವಿ ಲಸಿಕೆ ಮತ್ತು ಆರಂಭಿಕ ಪರೀಕ್ಷೆಗಳು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ರೋಗದಿಂದ ಯಾರೂ ಪ್ರಾಣ ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮಗೆ ಹಲವಾರು ಮಾರ್ಗಗಳಿವೆ. ವಿಮರ್ಶಾತ್ಮಕ ಜಾಗೃತಿಯೊಂದಿಗೆ ಪರಸ್ಪರರನ್ನು ಸಬಲೀಕರಣಗೊಳಿಸೋಣ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರತಿಯೊಬ್ಬ ಮಹಿಳೆಗೆ ಮಾಹಿತಿ ನೀಡಬೇಕಾಗಿದೆ. ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ನನ್ನ ಬಯೊದಲ್ಲಿರುವ ಲಿಂಕ್ ಗೆ ಭೇಟಿ ನೀಡಿ. ಈ ರೋಗದ ವಿನಾಶಕಾರಿ ಪರಿಣಾಮವನ್ನು ಕೊನೆಗೊಳಿಸಲು ಒಟ್ಟಾಗಿ ಪ್ರಯತ್ನಿಸೋಣʼʼ ಎಂದು ಪೂನಂ ಪಾಂಡೆ ತಮ್ಮ ಇನ್​ಸ್ಟಾಗ್ರಾಮ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದರು..

Exit mobile version