ಬೆಂಗಳೂರು: ನಟಿ ಪೂನಂ ಪಾಂಡೆ (Poonam Pandey) ಟಾಪ್‌ಲೆಸ್ ಅವತಾರಗಳು ಹೊಸದಲ್ಲ . ಆಗಾಗ ತನ್ನ ಮೈಮಾಟವನ್ನು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರದರ್ಶನಕ್ಕೀಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಪೂನಂ ಪಾಂಡೆ ಕೆಲವು ದಿನಗಳ ಹಿಂದೆ ಬೆತ್ತಲಾ ಕತ್ತಲೆ ಬೆಳಕಿನಲ್ಲಿ ಪೋಸ್ ಕೊಟ್ಟಿದ್ದರು. ಇದೀಗ ಬಾಳೆ ಹಣ್ಣಿನ ಜ್ಯೂಸ್ ಮಾಡಿ ತೋರಿಸಿದ್ದಾರೆ. ಈ ರೆಸಿಪಿಗೆ ಏನೆಂದು ಹೆಸರಿಡಲಿ ಎಂದು ಅಭಿಮಾನಿಗಳನ್ನು ಪೂನಂ ಪಾಂಡೆ ಪ್ರಶ್ನಿಸಿದ್ದಾರೆ.
ಒಂದು ಬಾಳೆ ಹಣ್ಣು, ಐಸ್‌ಕ್ರೀಮ್, ಹಾಲು, ಡ್ರೈ ಫ್ರ್ಯೂಟ್ಸ್, ಚಾಕೋಲೇಟ್ ಬಳಸಿ ಪೂನಂ ಪಾಂಡೆ ಈ ಜ್ಯೂಸ್ ತಯಾರಿಸಿದ್ದಾರೆ. ಮಾಡುವಾಗ ತಮ್ಮ ಮೈಮಾಟವನ್ನೂ ಪ್ರದರ್ಶಿಸಿದ್ದಾರೆ. ಈ ಮುಂಚೆ ಕೇಕ್ ವಿಥ್ ಐಸ್‌ಕ್ರೀಮ್ ರೆಸಿಪಿಯೊಂದನ್ನೂ ನೀಡಿದ್ದರು. ಚಾಕೋಲೇಟ್ ಕೇಕ್ ತಯಾರಿಸಿ ಅದನ್ನು ಐಸ್‌ಕ್ರೀಮ್ ಜೊತೆ ತಿಂದು ಬಾಯಿ ಚಪ್ಪರಿಸಿದ್ದರು.
ಕೆಲವು ತಿಂಗಳ ಹಿಂದೆ ಗರ್ಭ ಕಂಠಕ ಕ್ಯಾನ್ಸರ್ ನಿಂದ ಸಾವನ್ನಪ್ಪಿರುವುದಾಗಿ ಇಡೀ ದೇಶವನ್ನೇ ನಂಬಿಸಿದ ಚಾಲಕಿ ಈಕೆ. ಇದೀಗ ಅಭಿಮಾನಿಗಳಿಗೆ ಕಚಗುಳಿ ಇಡುವ ಮೂಲಕ ಮತ್ತೆ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗುತ್ತಿದ್ದಾರೆ.
ಇದನ್ನೂ ಓದಿ: Poonam Pandey: ಕತ್ತಲೆಯಲ್ಲಿ ಬೆತ್ತಲೆಯಾಗಿ ಮೈಮಾಟ ಪ್ರದರ್ಶಿಸಿ, ಫ್ಯಾನ್ಸ್‌ಗೆ ಕಚಗುಳಿ ಇಟ್ಟ ಪೂನಂ ಪಾಂಡೆ!
ಪೂನಂ ಪಾಂಡೆ (Poonam Pandey) ಅವರು ಗರ್ಭಕಂಠ ಕ್ಯಾನ್ಸರ್‌ನಿಂದ (Cervical Cancer) ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಡಿ, ಮರುದಿನ ‘ಇಲ್ಲ ನಾನು ಸತ್ತಿಲ್ಲ’ ಎಂದು ನಟಿ ನೀಡಿದ ಸ್ಪಷ್ಟನೆ ಕೂಡ ಭಾರಿ ಸುದ್ದಿಯಾಗಿತ್ತು.
ಪೂನಂ ವಿಡಿಯೊದಲ್ಲಿ ʻʻನಿಮ್ಮೆಲ್ಲರೊಂದಿಗೆ ಮಹತ್ವದ ಸಂಗತಿಯೊಂದನ್ನು ಹೇಳಲೇಬೇಕಾಗಿದೆ. ನಾನು ಇನ್ನೂ ಇದ್ದೇನೆ. ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ನನ್ನನ್ನು ಬಲಿ ತೆಗೆದುಕೊಂಡಿಲ್ಲ, ದುರಂತವೆಂದರೆ, ಈ ರೋಗವನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಸಾವಿರಾರು ಮಹಿಳೆಯರು ಜೀವ ಕಳೆದುಕೊಂಡಿದ್ದಾರೆ. ಇತರ ಕೆಲವು ಕ್ಯಾನ್ಸರ್ ಗಳಿಗಿಂತ ಭಿನ್ನವಾಗಿ ಗರ್ಭಕಂಠದ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಎಚ್ಪಿವಿ ಲಸಿಕೆ ಮತ್ತು ಆರಂಭಿಕ ಪರೀಕ್ಷೆಗಳು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ರೋಗದಿಂದ ಯಾರೂ ಪ್ರಾಣ ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮಗೆ ಹಲವಾರು ಮಾರ್ಗಗಳಿವೆ. ವಿಮರ್ಶಾತ್ಮಕ ಜಾಗೃತಿಯೊಂದಿಗೆ ಪರಸ್ಪರರನ್ನು ಸಬಲೀಕರಣಗೊಳಿಸೋಣ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರತಿಯೊಬ್ಬ ಮಹಿಳೆಗೆ ಮಾಹಿತಿ ನೀಡಬೇಕಾಗಿದೆ. ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ನನ್ನ ಬಯೊದಲ್ಲಿರುವ ಲಿಂಕ್ ಗೆ ಭೇಟಿ ನೀಡಿ. ಈ ರೋಗದ ವಿನಾಶಕಾರಿ ಪರಿಣಾಮವನ್ನು ಕೊನೆಗೊಳಿಸಲು ಒಟ್ಟಾಗಿ ಪ್ರಯತ್ನಿಸೋಣʼʼ ಎಂದು ಪೂನಂ ಪಾಂಡೆ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು..