ಬೆಂಗಳೂರು: ವಿವಾದಾತ್ಮಕ ಸೆಲೆಬ್ರಿಟಿ ಎಂತಲೇ ಖ್ಯಾತಿ ಪಡೆದಿರುವ ಪೂನಂ ಪಾಂಡೆ (Poonam Pandey) ಇತ್ತೀಚೆಗೆ ಗುಡಿ ಪಾಡ್ವಾ ಹಬ್ಬದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ಲಿ ಕೂದಲು, ಕಪ್ಪು ಬಣ್ಣದ ಔಟ್‌ಫಿಟ್‌ನಲ್ಲಿ ಪೂನಂ ಮಿಂಚಿದ್ದಾರೆ. ಗುರುತೇ ಸಿಗಲಾರದಷ್ಟು ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಟೋದಲ್ಲಿ ಸಾಮಾನ್ಯರಂತೆ ಕಾಣಿಸಿಕೊಂಡಿದ್ದಾರೆ ಪೂನಂ.
ಪೂನಂ ಪಾಂಡೆ ತನ್ನ ವಿಭಿನ್ನ ಸ್ಟೈಲ್‌ನಿಂದಲೇ ಜನಪ್ರಿಯರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಪೂನಂ ತನ್ನ ಫೋಟೊಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವ ಅಭಿಮಾನಿಗಳ ಜತೆ ಟಚ್ನಲ್ಲಿ ಇದ್ದಾರೆ. ಪೂನಂ ಅವರು ಕಂಗನಾ ರಣಾವತ್ ಅವರ OTT ಶೋ ‘ಲಾಕ್ ಅಪ್’ ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದರು.
ಈ ವರ್ಷ ಗುಡಿ ಪಾಡ್ವಾವನ್ನು ಮಹಾರಾಷ್ಟ್ರದ ಅನೇಕ ಸೆಲೆಬ್ರಿಟಿಗಳು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಶ್ರದ್ಧಾ ಕಪೂರ್, ನೀತು ಕಪೂರ್, ಪೂನಂ ಪಾಂಡೆ, ಅಂಕಿತಾ ಲೋಖಂಡೆ ಮತ್ತು ಅವರ ಪತಿ ವಿಕ್ಕಿ ಜೈನ್, ಎಲ್ಲರೂ ಸಾಂಪ್ರದಾಯಿಕ ಹೊಸ ವರ್ಷದ ಆರಂಭವನ್ನು ಸ್ವಾಗತಿಸಿದರು.
ಪೂನಂ ಪಾಂಡೆ ಕೊನೆಯದಾಗಿ ಕಂಗನಾ ರಣಾವತ್ ಅವರ ರಿಯಾಲಿಟಿ ಶೋ ಲಾಕ್ ಅಪ್ ಸೀಸನ್ 1 ರಲ್ಲಿ ಕಾಣಿಸಿಕೊಂಡರು. ಶೋನಲ್ಲಿದ್ದಾಗ, ಅವರು ಒಮ್ಮೆ ಕೌಟುಂಬಿಕ ಹಿಂಸೆಯನ್ನು ಎದುರಿಸುತ್ತಿರುವುದನ್ನು ಪ್ರಸ್ತಾಪಿಸಿದರು. ಕಾರ್ಯಕ್ರಮದ ವೇಳೆ ಪೂನಂ ತನ್ನ ಪತಿ ಸ್ಯಾಮ್ ಬಾಂಬೆ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತಾಡಿದ ಪೂನಂ ಪಾಂಡೆ ತನ್ನ ಜೀವನದ ಕರಾಳ ರಹಸ್ಯಗಳನ್ನು ಹಂಚಿಕೊಂಡಿದ್ದರು. ಮ್ಮೆ ಸ್ಯಾಮ್ ನನ್ನನ್ನು ತುಂಬಾ ಹೊಡೆದಿದ್ದರು. ಅದು ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. 4 ಮಹಡಿಗಳ ಮನೆ ಇತ್ತು, ಆದರೆ ನನ್ನ ಇಷ್ಟದಂತೆ ಉಳಿಯಲು ಅಥವಾ ಯಾವುದೇ ಕೋಣೆಗೆ ಹೋಗಲು ನನಗೆ ಅವಕಾಶವಿರಲಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಆ ನೀಲಿ ಕಡಲು ಮತ್ತು ಮಹಾ ಸಂಶೋಧನೆಯೊಂದು ಹುಟ್ಟಿದ ದಿನ!
ಪೂನಂ ಪಾಂಡೆ ತನ್ನ ಪ್ರೇಮಿ ಸ್ಯಾಮ್ ಬಾಂಬೆಯನ್ನು 2020ರಲ್ಲಿ ವಿವಾಹ ಆಗಿದ್ದರು. ಮದುವೆಯಾದ ಕೇವಲ 12 ದಿನಗಳ ನಂತರ, ಪೂನಂ ಅವರ ಪತಿಯನ್ನು ಗೋವಾ ಪೊಲೀಸರು ಹಲ್ಲೆ ಮತ್ತು ಕಿರುಕುಳದ ಆರೋಪದ ಮೇಲೆ ಬಂಧಿಸಿದ್ದರು. ಈ ಘಟನೆ ದಕ್ಷಿಣ ಗೋವಾದ ಕಾನಕೋನ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.