Site icon Vistara News

NMACC Launch: NMACC ಈವೆಂಟ್‌ನಲ್ಲಿ ಬಾಲಿವುಡ್‌ ಪವರ್‌ಫುಲ್‌ ಜೋಡಿಗಳು ಕಂಡದ್ದು ಹೇಗೆ?

Power couples Bollywood arrive at NMACC launch

ಮುಂಬೈ: ಮುಂಬೈನಲ್ಲಿ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ)ಯ (NMACC ) ಉದ್ಘಾಟನೆ ಅದ್ಧೂರಿಯಾಗಿ (NMACC Launch) ಮಾರ್ಚ್‌ 31ರಂದು ನಡೆದಿದೆ. ಈ ಸಮಾರಂಭಕ್ಕೆ ಬಾಲಿವುಡ್‌ ತಾರೆಯರು, ಅನೇಕ ಗಣ್ಯರು ಭಾಗಿಯಾಗಿದ್ದರು. ಚಿತ್ರರಂಗದ ಎಲ್ಲಾ ಜನಪ್ರಿಯ ಸೆಲೆಬ್ರಿಟಿಗಳ ಪೈಕಿ, ಬಾಲಿವುಡ್‌ನ ಪವರ್ ಕಪಲ್, ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್, ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಮತ್ತು ಸೈಫ್ ಅಲಿ ಖಾನ್-ಕರೀನಾ ಕಪೂರ್ ರೆಡ್ ಕಾರ್ಪೆಟ್‌ನಲ್ಲಿ ಸಖತ್‌ ಮಿಂಚಿದ್ದಾರೆ.

NMACCನಲ್ಲಿ ದೀಪಿಕಾ-ರಣವೀರ್, ಪ್ರಿಯಾಂಕಾ-ನಿಕ್

ಸಲ್ಮಾನ್ ಖಾನ್‌ನಿಂದ ಹಿಡಿದು ಸೋನಂ ಕಪೂರ್, ರಜನಿಕಾಂತ್ ಮತ್ತು ಕರಣ್ ಜೋಹರ್ ಸೇರಿದಂತೆ ಇತರರು ಗಾಲಾ ನೈಟ್‌ಗೆ ಫ್ಯಾಶನ್ ಉಡುಗೆಯಲ್ಲಿ ಆಗಮಿಸಿದರು. ಮಗಳು ಮಾಲತಿ ಮೇರಿಯೊಂದಿಗೆ ಇದೇ ಮೊದಲ ಬಾರಿ ಭಾರತಕ್ಕೆ ಬಂದ ಪ್ರಿಯಾಂಕ ಮಾರ್ಚ್ 31ರಂದು ಮಧ್ಯಾಹ್ನ ಮುಂಬೈಗೆ ಬಂದರು. ನಟಿ ರಫಲ್ಡ್ ಕೇಪ್‌ನೊಂದಿಗೆ ಸಂಪೂರ್ಣವಾಗಿ ಅಲಂಕರಿಸಿದ ಗೌನ್‌ನಲ್ಲಿ ಸಖತ್‌ ಮಿಂಚಿದ್ದಾರೆ.

ಪ್ರಿಯಾಂಕಾ ಮತ್ತು ನಿಕ್ ನಂತರ, ರೆಡ್ ಕಾರ್ಪೆಟ್ ಮೇಲೆ ಗಮನ ಸೆಳೆದ ಇತರ ಸೆಲೆಬ್ರಿಟಿ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್. ಬಿಳಿ ಕೇಪ್‌ನೊಂದಿಗೆ ಮಿನುಗುವ ಅಲಂಕರಿಸಿದ ಉಡುಪಿನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ, ರಣವೀರ್ ಬಿಳಿ ಶೆರ್ವಾನಿಯಲ್ಲಿ ಕಂಡಿದ್ದಾರೆ.

ಇದನ್ನೂ ಓದಿ: Priyanka Chopra : ಬಾಲಿವುಡ್​ನ ಪೊಲಿಟಿಕ್ಸ್​ಗೆ ಹೆದರಿ ಹಾಲಿವುಡ್​ಗೆ ಓಡಿದ್ದೆ ಎಂದ ನಟಿ ಪ್ರಿಯಾಂಕ ಚೋಪ್ರಾ

ಈವೆಂಟ್‌ ಫೋಟೊಗಳು ಇಲ್ಲಿವೆ

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಪಟೌಡಿ ನವಾಬ್ ಬಿಳಿ ಕುರ್ತಾ ಪೈಜಾಮದಲ್ಲಿ ನೆಹರೂ ಜಾಕೆಟ್‌ನೊಂದಿಗೆ ಸುಂದರವಾಗಿ ಕಾಣುತ್ತಿದ್ದರೆ, ನಟಿ ಕೆಂಪು ಮಿನುಗುವ ಲೆಹೆಂಗಾದಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು.

ನವ ದಂಪತಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಆಡ್ವಾಣಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಸಿದ್ಧಾರ್ಥ್ ಬಿಳಿ ಶರ್ಟ್ ಮತ್ತು ಕೆನೆ ಪ್ಯಾಂಟ್‌ನಲ್ಲಿ ಕಾಣುತ್ತಿದ್ದರು. ಮತ್ತೊಂದೆಡೆ ಕಿಯಾರಾ, ಹೊಳೆಯುವ ಸ್ಕರ್ಟ್ ಮತ್ತು ಉದ್ದವಾದ ಗೋಲ್ಡನ್ ಸ್ಟ್ರೋಲ್ನೊಂದಿಗೆ ಆಕರ್ಷಕವಾಗಿ ಕಾಣುತ್ತಿದ್ದರು.

Exit mobile version