Site icon Vistara News

James Movie | ಪವರ್‌ ಸ್ಟಾರ್‌ ಪುನೀತ್‌ ಧ್ವನಿಯಲ್ಲಿ ಜೇಮ್ಸ್: ಜುಲೈ 17ಕ್ಕೆ ಸುವರ್ಣ ವರ್ಲ್ಡ್‌ ಪ್ರೀಮಿಯರ್‌

James Movie

ಬೆಂಗಳೂರು : ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಸಿನಿಮಾ ಜೇಮ್ಸ್‌(James Movie) ಮಾರ್ಚ್ 17ಕ್ಕೆ ಬಿಡುಗಡೆ ಆಗಿತ್ತು. ಪುನೀತ್‌ ಅಭಿಮಾನಿಗಳಿಗೆ ಅವರ ಅಗಲಿಕೆಯನ್ನು ಮರೆಸಿತ್ತು. ಇದೀಗ ಮತ್ತೆ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಚಿತ್ರತಂಡ ನೀಡಿದೆ. ಕಿರುತೆರೆಯಲ್ಲಿ ರಾಜರತ್ನನ ವೈಭವವನ್ನು, ಅವರ ಧ್ವನಿಯನ್ನು ಅವರ ಅಭಿಮಾನಿಗಳು ಮತ್ತೆ ಕಣ್ಣು- ಕಿವಿ ತುಂಬಿಸಿಕೊಳ್ಳಬಹುದಾಗಿದೆ.

ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್‌ ಸುವರ್ಣದಲ್ಲಿ ಜೇಮ್ಸ್‌ ಸಿನಿಮಾ ಇದೇ ಜುಲೈ 17ರಂದು ಭಾನುವಾರ ಸಂಜೆ 5.30ಕ್ಕೆ ಸುವರ್ಣ ವರ್ಲ್ಡ್‌ ಪ್ರೀಮಿಯರ್‌ ಆಗುತ್ತಿದೆ. ಅಭಿಮಾನಿಗಳು ಇಲ್ಲಿಯವರೆಗೆ ಜೇಮ್ಸ್‌ ಸಿನಿಮಾವನ್ನು ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್‌ ಧ್ವನಿಯಲ್ಲಿ ನೋಡಿ ಕೇಳಿ ಭಾವುಕರಾಗಿದ್ದರು. ಇದೀಗ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಜೇಮ್ಸ್‌ ಸಿನಿಮಾವನ್ನು ಪುನೀತ್‌ ರಾಜ್‌ಕುಮಾರ್‌ ಅವರದ್ದೇ ಧ್ವನಿಯಲ್ಲಿ ನೋಡಬಹುದಾಗಿದೆ.

ಈ ಚಿತ್ರವನ್ನು ಕಿಶೋರ್‌ ಪತ್ತಿಕೊಂಡ ನಿರ್ಮಾಣ ಮಾಡಿದ್ದು, ಚೇತನ್‌ ನಿರ್ದೇಶನ ಮಾಡಿದ್ದಾರೆ. ಪ್ರಿಯಾ ಆನಂದ್‌ ನಾಯಕಿಯಾಗಿ ನಟಿಸಿದ್ದು ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಮತ್ತು ರಂಗಾಯಣ ರಘು, ಆದಿತ್ಯ ಮೆನನ್‌ ಸೇರಿದಂತೆ ಬಹುದೊಡ್ಡ ತಾರಾ ಬಳಗವಿದೆ.

ಇದನ್ನೂ ಓದಿ | ಚಾಮರಾಜಪೇಟೆಯಲ್ಲಿ ಈದ್ಗಾ ಮೈದಾನ ಗಲಾಟೆ ಆಯ್ತು, ಈಗ ಪುತ್ಥಳಿ ವಿಚಾರವಾಗಿ ಗುಂಪು ಘರ್ಷಣೆ!

Exit mobile version