Site icon Vistara News

Actor Prabhas | ಪ್ರಭಾಸ್‌ ಜನುಮದಿನಕ್ಕೆ ʻಬಿಲ್ಲಾʼ ರಿ ರಿಲೀಸ್‌: ಬಿಕಿನಿಯಲ್ಲಿ ಅನುಷ್ಕಾ ಶೆಟ್ಟಿ ಎಂಟ್ರಿ, ಹುಚ್ಚೆದ್ದು ಕುಣಿದ ಫ್ಯಾನ್ಸ್‌!

Prabhas Actor

ಬೆಂಗಳೂರು : ಟಾಲಿವುಡ್‌ ಸ್ಟಾರ್‌ ಪ್ರಭಾಸ್‌ (Actor Prabhas) ಹುಟ್ಟುಹಬ್ಬದ ಉಡುಗೊರೆಯಾಗಿ ʻಬಿಲ್ಲಾʼ ಸಿನಿಮಾ 4K ವರ್ಷನ್‌ನಲ್ಲಿ ತೆರೆ ಕಂಡಿದೆ. ಸೂಪರ್‌ ಸ್ಟಾರ್‌ಗಳ ಜನುಮದಿನಕ್ಕೆ ಅವರ ಹಳೆಯ ಸೂಪರ್‌ ಹಿಟ್‌ ಸಿನಿಮಾಗಳನ್ನು ಹೊಸ ತಂತ್ರಜ್ಞಾನದಲ್ಲಿ ರಿ-ರಿಲೀಸ್‌ ಮಾಡುವ ಟ್ರೆಂಡ್‌ ಟಾಲಿವುಡ್‌ನಲ್ಲಿ ನಡೆಯುತ್ತಿದೆ. ʻಬಿಲ್ಲಾʼ ಸಿನಿಮಾದ ನಾಯಕಿ ಅನುಷ್ಕಾ ಶೆಟ್ಟಿ ಬಿಕಿನಿ ತೊಟ್ಟು ದರ್ಶನ ಕೊಟ್ಟಿದ್ದರು. ಅಭಿಮಾನಿಗಳು ಅನುಷ್ಕಾ ಎಂಟ್ರಿಗೆ ಹುಚ್ಚೆದ್ದು ಸಂಭ್ರಮಿಸಿದ್ದಾರೆ.

ಆದಿ ಪುರುಷ್‌ ಸಿನಿಮಾ ಟೀಸರ್‌ ವಿವಾದದ ಬೆನ್ನೆಲ್ಲೆ ಇದೀಗ ಪ್ರಭಾಸ್‌ ಮತ್ತೆ ಸುದ್ದಿಯಾಗಿದ್ದಾರೆ. ಪ್ರಭಾಸ್‌ ಜನುಮದಿನಕ್ಕೆ ಅವರ ಅಭಿನಯದ ಬಿಲ್ಲಾ ಚಿತ್ರ ಮತ್ತೆ ತೆರೆ ಕಂಡಿದ್ದು ಪ್ರೇಕ್ಷಕರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಕಟೌಟ್‌ ನಿಲ್ಲಿಸಿ, ಪಟಾಕಿ ಸಿಡಿಸಿ ಜೈಕಾರ ಕೂಗಿದ್ದಾರೆ. ಈ ಚಿತ್ರವನ್ನು ಮೆಹರ್‌ ರಮೇಶ್‌ ನಿರ್ದೇಶಿಸಿದ್ದರು. ಪ್ರಭಾಸ್‌ ಜೋಡಿಯಾಗಿ ಅನುಷ್ಕಾ ಶೆಟ್ಟಿ ಮಿಂಚಿದ್ದರು. ನಮಿತಾ, ಹನ್ಸಿಕಾ ಮೊಟ್ವಾನಿ, ಕೃಷ್ಣಂರಾಜು ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿದೆ.

ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾಗೆ ನಟ ಪ್ರಭಾಸ್‌ ಮೆಚ್ಚುಗೆ; ನಟ ಹೇಳಿದ್ದೇನು?

ಮಣಿಶರ್ಮ ಸಂಗೀತವಿದ್ದು, ಪ್ರಭಾಸ್‌ ಸಿನಿಕರಿಯರ್‌ಗೆ ದೊಡ್ಡ ತಿರುವು ಕೊಟ್ಟ ‘ಬಿಲ್ಲಾ’ ಸಿನಿಮಾ 4K ವರ್ಷನ್‌ನಲ್ಲಿ ತೆರೆ ಕಂಡಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಮಾಯಾ ಎಂಬ ಪಾತ್ರದಲ್ಲಿ ಬಿಕಿನಿ ತೊಟ್ಟಿದ್ದರು. ಆ ಸೀನ್‌ ವೈರಲ್‌ ಆಗಿತ್ತು. ಇದೀಗ ಮತ್ತೆ ತೆರೆ ಮೇಲೆ ಅನುಷ್ಕಾ ಶೆಟ್ಟಿ ಬಿಕಿನಿ ತೊಟ್ಟು ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳು ಶಿಳ್ಳೆ ಹಾಕಿ ಸಂಭ್ರಮಿಸಿದ್ದಾರೆ. ವಿಡಿಯೊ ಇದೀಗ ವೈರಲ್‌ ಆಗಿದೆ.

ಅನುಷ್ಕಾ ಶೆಟ್ಟಿ ಸ್ವಿಮ್ಮಿಂಗ್‌ ಫೂಲ್‌ನಿಂದ ಎದ್ದು ಬರುವ ಸೀನ್‌, ಸೊಂಟದ ಹಿಂಬಾಗದಲ್ಲಿ ಬಿಲ್ಲಾ ಎನ್ನುವ ಟ್ಯಾಟೂ ನೋಡಿ ಅವರ ಅಭಿಮನಾಗಳು ಫಿದಾ ಆಗಿದ್ದರು. ಪ್ರಭಾಸ್‌ ಎಂಟ್ರಿಗಿಂತ ಅನುಷ್ಕಾ ಎಂಟ್ರಿಗೆ ಸಿನಿರಸಿಕರು ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸುವಂತೆ ಸೋಷಿಯಲ್‌ ಮೀಡಿಯಾದಲ್ಲಿ ಅನುಷ್ಕಾ ಅಭಿಮಾನಿಗಳು ಕಮೆಂಟ್‌ ಮೂಲಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Kantara Movie | ಎರಡನೇ ಬಾರಿ ಕಾಂತಾರ ವೀಕ್ಷಿಸಿದ ಪ್ರಭಾಸ್‌: ಸ್ಟಾರ್‌ ನಟರ ಮೆಚ್ಚುಗೆ!

Exit mobile version