Site icon Vistara News

Prabhas Anushka : ಹಿರಿಯ ನಟನ ಜತೆ ಪ್ರೀತಿಯಲ್ಲಿ ಬಿದ್ದ ಅನುಷ್ಕಾ! ಬೇಸರವಾಗಿ ಬ್ರೇಕಪ್‌ ಎಂದ ಪ್ರಭಾಸ್‌?

#image_title

ಹೈದರಾಬಾದ್‌: ತೆಲುಗು ನಟ ಪ್ರಭಾಸ್‌ ಹಾಗೂ ನಟಿ ಅನುಷ್ಕಾ ಶೆಟ್ಟಿ (Prabhas Anushka) ಪ್ರೀತಿ ಮಾಡುತ್ತಿರುವ ವಿಚಾರ ಹಲವು ವರ್ಷಗಳಿಂದಲೂ ದಕ್ಷಿಣ ಭಾರತದಲ್ಲಿ ಜನಜನಿತ. 2009ರಲ್ಲಿ ಬಿಲ್ಲಾ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ ಜೋಡಿ ನಂತರ ಮಿರ್ಚಿ ಮತ್ತು ಬಾಹುಬಲಿ ಸಿನಿಮಾಗಳಲ್ಲಿ ಜೋಡಿಯಾಗಿತ್ತು. ಈ ಜೋಡಿ ತಮ್ಮ ಮಧ್ಯೆ ಇರುವುದು ಸ್ನೇಹ ಮಾತ್ರ ಎಂದು ಅದೆಷ್ಟೇ ಹೇಳಿದರೂ, ಅಭಿಮಾನಿಗಳು ಮಾತ್ರ “ನೀವಿಬ್ಬರು ಬೇಗ ಮದುವೆಯಾಗಿ” ಎಂದು ಕೋರಿಕೊಳ್ಳುತ್ತಲೇ ಇದ್ದರು.

ಇದನ್ನೂ ಓದಿ:Project K: ಪ್ರಭಾಸ್‌, ದೀಪಿಕಾ, ಅಮಿತಾಭ್‌ ನಟನೆಯ ʻಪ್ರಾಜೆಕ್ಟ್ ಕೆʼ ರಿಲೀಸ್‌ ಡೇಟ್‌ ರಿವೀಲ್‌!
ಆದರೆ ಇದೀಗ ಈ ಜೋಡಿ ಮಧ್ಯೆ ಬಿರುಕು ಮೂಡಿದೆ ಎನ್ನಲಾಗಿದೆ. ಈ ಜೋಡಿ ಬ್ರೇಕಪ್‌ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಅನುಷ್ಕಾ ಹಿರಿಯ ನಟರೊಬ್ಬರ ಜತೆ ಹೆಚ್ಚು ಆತ್ಮೀಯವಾಗಿದ್ದು, ಅದು ಪ್ರಭಾಸ್‌ ಅವರಿಗೆ ಇಷ್ಟವಾಗಿಲ್ಲವಂತೆ. ಅದೇ ಕಾರಣಕ್ಕೆ ಪ್ರಭಾಸ್‌ ಹಾಗೂ ಅನುಷ್ಕಾ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಯಲ್ಲಿ ಹೇಳಲಾಗಿದೆ.


ಹಾಗೆಯೇ ಇತ್ತೀಚೆಗೆ ಪ್ರಭಾಸ್‌ ಹಾಗೂ ಬಾಲಿವುಡ್‌ ನಟಿ ಕೃತಿ ಸನೊನ್‌ ನಿಶ್ಚಿತಾರ್ಥವಾಗಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಸಿನಿಮಾ ವಿಮರ್ಶಕರೊಬ್ಬರು “ಪ್ರಭಾಸ್‌ ಹಾಗೂ ಕೃತಿ ಮಾಲ್ಡೀವ್ಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ” ಎಂದು ಹೇಳಿದ್ದರು. ಆದರೆ ಅವರು ಹೇಳಿದಂತೆ ಇನ್ನೂ ನಡೆದಿಲ್ಲ. ಬಾಲಿವುಡ್‌ ನಟ ವರುಣ್‌ ಧವನ್‌ ಕೂಡ, “ಕೃತಿ ಎಲಿಜಿಬಲ್‌ ಬ್ಯಾಚುಲರ್‌ ಅಲ್ಲ. ಅವಳ ಹೃದಯ ಇನ್ನೊಬ್ಬ ವ್ಯಕ್ತಿಯಲ್ಲಿದೆ. ಆ ವ್ಯಕ್ತಿ ದೀಪಿಕಾ ಜತೆ ಶೂಟಿಂಗ್‌ನಲ್ಲಿ ಬಿಜಿ ಇದ್ದಾರೆ” ಎಂದು ಟಿವಿ ಶೋ ಒಂದರಲ್ಲಿ ಹೇಳಿದ್ದರು. ಪ್ರಭಾಸ್‌ ಅವರು ದೀಪಿಕಾ ಜತೆ ಪ್ರಾಜೆಕ್ಟ್-ಕೆ ಸಿನಿಮಾ ಶೂಟಿಂಗ್‌ನಲ್ಲಿರುವುದರಿಂದಾಗಿ ಅಭಿಮಾನಿಗಳೆಲ್ಲರೂ ಪ್ರಭಾಸ್‌ ಮತ್ತು ಕೃತಿಗೆ ಮದುವೆಯನ್ನೇ ಮಾಡಿಸುವುದಕ್ಕೆ ಮುಂದಾಗಿದ್ದರು. ಆದರೆ ಈ ಸಂಬಂಧದ ಬಗ್ಗೆ ಪ್ರಭಾಸ್‌ ಅಥವಾ ಕೃತಿ ಇನ್ನೂ ಯಾವುದೇ ಹೇಳಿಕೆ ಕೊಟ್ಟಿಲ್ಲ.

Exit mobile version