Site icon Vistara News

Salaar Box Office: ಮೂರೇ ದಿನಕ್ಕೆ 400 ಕೋಟಿ ರೂ. ಬಾಚಿದ ʻಸಲಾರ್‌ʼ!

Prabhas Film Creates History Crosses Rs 400 Cr Worldwide

ಬೆಂಗಳೂರು: ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ (Salaar Box Office) ಈ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಿದೆ. ಆರಂಭಿಕ ಅಂದಾಜಿನ ಪ್ರಕಾರ ಈ ಚಿತ್ರ ಭಾರತದಲ್ಲಿ ಮೊದಲ ದಿನ 95 ಕೋಟಿ ರೂ. ಗಳಿಸಿತು.ಇದೀಗ ಬಿಡುಗಡೆಯಾದ ಮೂರೇ ದಿನಕ್ಕೆ ಭಾರತದ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂಪಾಯಿ ಬಾಚಿಕೊಂಡಿದೆ.

ʻಸಲಾರ್ʼ ಸಿನಿಮಾ ನಿರ್ಮಾಣ ತಂಡ, ಹೊಂಬಾಳೆ ಫಿಲ್ಮ್ಸ್, ಸಿನಿಮಾ ಮೊದಲ ದಿನ ಜಾಗತಿಕವಾಗಿ 175 ಕೋಟಿ ರೂ. ಗಳಿಸಿದೆ ಎಂದು ಮೊದಲ ದಿನ ಘೋಷಿಸಿತ್ತು. ಇದೀಗ 400 ಕೋಟಿ ರೂಪಾಯಿ ಬಾಚಿಕೊಂಡಿದೆ. ಭಾನುವಾರದಂದು (ಡಿ.24) ಒಟ್ಟಾರೆ ಶೇಕಡಾ 73.64ರಷ್ಟು ತೆಲುಗು ಆಕ್ಯುಪೆನ್ಸಿಯನ್ನು ಹೊಂದಿದ್ದು, ಹೈದರಾಬಾದ್ ಆಕ್ಯುಪೆನ್ಸಿ ಶೇಕಡಾ 89.25 ರಷ್ಟಿದೆ ಎಂದು ವರದಿಯಾಗಿದೆ.

ಸಲಾರ್’ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಯಿತು. ಮೊದಲ ದಿನ ಈ ಚಿತ್ರ ಗಳಿಕೆ ಮಾಡಿದ್ದು 90 ಕೋಟಿ ರೂಪಾಯಿ. ಎರಡನೇ ದಿನ (ಡಿಸೆಂಬರ್ 23) ಈ ಸಿನಿಮಾ ಬಾಚಿಕೊಂಡಿದ್ದು 56 ಕೋಟಿ ರೂಪಾಯಿ. ಮೂರನೇ ದಿನ ಸಿನಿಮಾ ಬಾಚಿಕೊಂಡಿದ್ದು 62 ಕೋಟಿ ರೂಪಾಯಿ. ಈ ಮೂಲಕ ಸಿನಿಮಾದ ಒಟ್ಟಾರೆ ಗಳಿಕೆ 209 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: Salaar Box Office: ಎರಡನೇ ದಿನ ಕಲೆಕ್ಷನ್‌ನಲ್ಲಿ ಭಾರಿ ಕುಸಿತ; `ಸಲಾರ್‌’ ಗಳಿಸಿದ್ದೆಷ್ಟು?

ಇದನ್ನೂ ಓದಿ: Salaar Box Office: ಎರಡನೇ ದಿನ ಕಲೆಕ್ಷನ್‌ನಲ್ಲಿ ಭಾರಿ ಕುಸಿತ; `ಸಲಾರ್‌’ ಗಳಿಸಿದ್ದೆಷ್ಟು?

ಸಲಾರ್‌ ಎರಡನೇ ಭಾಗ ಬರಲಿದೆಯಾ ಎನ್ನುವ ಚರ್ಚೆಗಳು ಜೋರಾಗಿವೆ. ಸಿನಿಮಾ ಒಟಿಟಿ ಸ್ಟ್ರೀಮಿಂಗ್ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಸಾಧ್ಯವಾದಷ್ಟು ಬೇಗ ಸೀಕ್ವೆಲ್ ತೆರೆಗೆ ತರಲು ಚಿತ್ರತಂಡ ಮನಸ್ಸು ಮಾಡಿದೆ ಎನ್ನಲಾಗುತ್ತಿದೆ.ಸಲಾರ್’ ಒಟಿಟಿ ಸ್ಟ್ರೀಮಿಂಗ್ ಬಗ್ಗೆ ಹೇಳುವುದಾದರೆ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬರಲಿದೆ ಎನ್ನಲಾಗಿದೆ. ಹೊಂಬಾಳೆ ಸಂಸ್ಥೆ ತನ್ನ ಎಲ್ಲಾ ಸಿನಿಮಾಗಳನ್ನು ಅಮೇಜಾನ್ ಪ್ರೈಂ ಕೊಡುತ್ತಾ ಬರುತ್ತಿತ್ತು. ಫೆಬ್ರವರಿಯಲ್ಲಿ ಸಿನಿಮಾ ಒಟಿಟಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ʼಡಂಕಿʼ ಮತ್ತು ʼಸಲಾರ್‌ʼ ಈ ವರ್ಷ ಬಹು ನಿರೀಕ್ಷೆ ಹುಟ್ಟು ಹಾಕಿರುವ ಚಿತ್ರಗಳು. ಟ್ರೈಲರ್‌, ಹಾಡುಗಳಿಂದಲೇ ಈ ಎರಡೂ ಚಿತ್ರಗಳು ನಿರೀಕ್ಷೆ ಮೂಡಿಸಿವೆ.

ʼಕೆಜಿಎಫ್‌ʼ ಸರಣಿ ಚಿತ್ರಗಳ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿರುವ ಪ್ರಶಾಂತ್‌ ನೀಲ್‌ ʼಸಲಾರ್‌ʼ ಚಿತ್ರವನ್ನು ನಿರ್ದೇಶಿಸಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಸತತ ಸೋಲುಗಳಿಂದ ಕಂಗೆಟ್ಟಿರುವ ಪ್ರಭಾಸ್‌ ವೃತ್ತಿ ಜೀವನಕ್ಕೆ ಇದು ತಿರುವು ನೀಡಿದ ಸಿನಿಮಾವಾಗಿ ಹೊರಹೊಮ್ಮಿದೆ. . ಪೃಥ್ವಿರಾಜ್‌, ಶ್ರುತಿ ಹಾಸನ್‌ ಮತ್ತತರರು ಮುಖ್ಯ ಪಾತ್ರದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದಾರೆ.

Exit mobile version