Site icon Vistara News

Salaar Movie: ಭಾರತಕ್ಕೆ ಮರಳಿದ ಪ್ರಭಾಸ್‌; ಫ್ಯಾನ್ಸ್‌ ಖುಷ್‌!

Prabhas is back from Italy

ಬೆಂಗಳೂರು: ಪ್ರಶಾಂತ್ ನೀಲ್ ಅವರ ಮುಂಬರುವ ಚಿತ್ರ ಸಲಾರ್‌ (Salaar Movie) ಮೂಲಕ ಪ್ರಭಾಸ್ ತೆರೆಗೆ ಬರಲು ಸಜ್ಜಾಗಿದ್ದಾರೆ. ಪ್ರಭಾಸ್‌ ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಎಂದು ಇಟಲಿಗೆ ಹೋಗಿದ್ದರು. ಇದೀಗ ಭಾರತಕ್ಕೆ ವಾಪಸ್‌ ಆಗಿದ್ದಾರೆ. ಈಗ, ಪ್ರಭಾಸ್ ತಮ್ಮ ಮುಂಬರುವ ಚಿತ್ರ ‘ಸಲಾರ್ ಪ್ರಚಾರಕ್ಕಾಗಿ ಸಜ್ಜಾಗಿದ್ದಾರೆ. ಚಿತ್ರ ಇದೇ ಡಿಸೆಂಬರ್‌ 22ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕೆಲವು ವಾರಗಳ ಹಿಂದೆ ಇಟಲಿಗೆ ಹೊರಟಿದ್ದರು. ‘ಸಲಾರ್’ ರಿಲೀಸ್‌ಗೂ ಮುನ್ನ ಪ್ರಭಾಸ್ ಇಟಲಿಯಿಂದ ಹಿಂತಿರುಗಿದ್ದಾರೆ. ವಿಮಾನ ನಿಲ್ದಾಣದಿಂದ ಅವರು ಹೊರಬರುತ್ತಿರುವ ಫೋಟೊ ಮತ್ತು ವಿಡಿಯೋಗಳು ವೈರಲ್​ ಆಗಿವೆ. ಭಾರತಕ್ಕೆ ಮರಳಿದ ಅವರಿಗೆ ಅಭಿಮಾನಿಗಳು ಸ್ವಾಗತ ಕೋರಿದ್ದಾರೆ. ನಟ ಕೊನೆಯದಾಗಿ ನಿರ್ದೇಶಕ ಓಂ ರಾವುತ್ ಅವರ ‘ಆದಿಪುರುಷ’ ಚಿತ್ರದಲ್ಲಿ ಕಾಣಿಸಿಕೊಂಡರು. ಇಟಲಿಯಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಚೇತರಿಸಿಕೊಳ್ಳಲು ಅಲ್ಲಿಯೇ ಇದ್ದರು. ‘ಸಾಹೋ’ ಚಿತ್ರೀಕರಣದ ವೇಳೆ ಅವರಿಗೆ ಗಾಯವಾಗಿದೆ ಎಂದು ಹೇಳಲಾಗಿತ್ತು.

ಚಿತ್ರದ ಬಗ್ಗೆ ಅಭಿಮಾನಿಗಳು ಮತ್ತು ಪ್ರೇಕ್ಷಕರಲ್ಲಿ ನಿರೀಕ್ಷೆ ಗಗನಕ್ಕೇರಿದ್ದು, ಸಲಾರ್‌ ಸಿನಿಮಾದ ಟ್ರೈಲರ್‌ ಶೀಘ್ರದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಬಹು ನಿರೀಕ್ಷಿತ ಸಲಾರ್: ಭಾಗ 1 ಟ್ರೈಲರ್ ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ಬಿಡುಗಡೆಯಾಗಲಿದೆ. ಪ್ರಶಾಂತ್‌ ನೀಲ್‌ ಮತ್ತು ಪ್ರಭಾಸ್‌ ಒಳಗೊಂಡಿರುವ ಈ ಚಿತ್ರವು ಜನಸಾಮಾನ್ಯರಲ್ಲಿ ಉತ್ಸಾಹವನ್ನು ಸೃಷ್ಟಿಸುತ್ತಿದೆ.

ಇದನ್ನೂ ಓದಿ: Salaar Movie: ನವೆಂಬರ್‌ ಕೊನೆಗೆ `ಸಲಾರ್‌’ ಟ್ರೈಲರ್‌? ಪ್ರಭಾಸ್‌ ಫ್ಯಾನ್ಸ್‌ಗೆ ಬಿಗ್‌ ಅಪ್‌ಡೇಟ್‌!

v

ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಸಲಾರ್’ ಟೀಸರ್ ಈಗಾಗಲೇ ಬಿಡುಗಡೆಗೊಂಡಿದ್ದು. ಸೂಪರ್ ಹಿಟ್ ಆಗಿದೆ. 100 ಮಿಲಿಯನ್‌ಗೂ ಅಧಿಕ ವ್ಯೂಸ್ ಸಾಧಿಸಿದೆ. ಆದರೂ ಕೂಡ ಟೀಸರ್ ಬಗ್ಗೆ ಕೆಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಪ್ರಭಾಸ್‌ ಲುಕ್ ರಿವೀಲ್ ಮಾಡಿಲ್ಲ ಎಂದಿದ್ದರು. ಇನ್ನು ʼಸಲಾರ್‌ʼ ಸಿನಿಮಾದ ವಿತರಣೆಯ ಹಕ್ಕನ್ನು ಪ್ರತ್ಯಾಂಗೀರ್‌ ಸಿನಿಮಾಸ್‌ ಪಡೆದುಕೊಂಡಿದೆ.

Exit mobile version