ಬೆಂಗಳೂರು; ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಕಮಲ್ ಹಾಸನ್ ನಟನೆಯ `ಪ್ರಾಜೆಕ್ಟ್ ಕೆ’ (Prabhas New Movie) ಹೊಸ ಅಪ್‌ಡೇಟ್ ಹಂಚಿಕೊಂಡಿದೆ. ಇದೇ ಜುಲೈ 20ರಂದು (ಭಾರತೀಯ ಕಾಲಮಾನ-ಜುಲೈ 21) ಪ್ರಾಜೆಕ್ಟ್-ಕೆಯ ಫಸ್ಟ್ ಪೋಸ್ಟರ್ ಅನಾವರಣಗೊಳ್ಳಲಿದೆ. ಅಮೆರಿಕದಲ್ಲಿ ನಡೆಯುವ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಸಮಾವೇಶದಲ್ಲಿ ಪೋಸ್ಟರ್ ಜತೆಗೆ ಸಿನಿಮಾದ ಟೈಟಲ್ ಹಾಗೂ ಗ್ಲಿಂಪ್ಸ್ ರಿವೀಲ್ ಮಾಡಲಿದ್ದಾರೆ ಚಿತ್ರತಂಡ. ಈ ಬಗ್ಗೆ ಪ್ರಭಾಸ್ ಹೊಸ ಪೋಸ್ಟರ್ ಹಂಚಿಕೊಂಡಿದ್ದು, ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.
ಅಮೆರಿಕದಲ್ಲಿ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಸಮಾವೇಶದಲ್ಲಿ ಪ್ರಾಜೆಕ್ಟ್-ಕೆ ಸಿನಿಮಾದ ಶೀರ್ಷಿಕೆ ಮತ್ತು ಗ್ಲಿಂಪ್ಸ್ ಬಿಡುಗಡೆ ಮಾಡಲಾಗುವುದು ಎಂದು ಪ್ರಭಾಸ್ ಶೇರ್ ಮಾಡಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ಪ್ರಭಾಸ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಭಾರತೀಯ ಚಲನಚಿತ್ರವೊಂದು ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ಗೆ ಹೋಗಿರುವುದು ಇದೇ ಮೊದಲು. ಇದು ಭಾರತೀಯ ಚಲನಚಿತ್ರೋದ್ಯಮಕ್ಕೆ ದೊಡ್ಡ ಸಾಧನೆಯಾಗಿದೆ. ಜುಲೈ 20 ರಂದು ನಡೆಯಲಿರುವ ಪ್ರಾಜೆಕ್ಟ್-ಕೆ ಪ್ಯಾನೆಲ್ ಚರ್ಚೆಗೆ 100 ಉಚಿತ ಟಿಕೆಟ್‌ಗಳನ್ನು ಚಿತ್ರದ ನಿರ್ಮಾಪಕರು ನೀಡುತ್ತಿದ್ದಾರೆ.
ಸ್ಯಾನ್ ಡಿಯಾಗೋ ಕಾಮಿಕ್-ಕಾನ್ 2023ರಲ್ಲಿ ‘ಪ್ರಾಜೆಕ್ಟ್-ಕೆ’ ಬಹಿರಂಗಪಡಿಸುವಿಕೆಯ ಕುರಿತು ಚಲನಚಿತ್ರ ನಿರ್ದೇಶಕ ನಾಗ್ ಅಶ್ವಿನ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. “ಭಾರತ ಕೆಲವು ಶ್ರೆಷ್ಠ ಕಥೆಗಾರರ ಮತ್ತು ಸೂಪರ್ ಹೀರೊಗಳ ತವರು ಎಂದು ನಾನು ಭಾವಿಸುತ್ತೇನೆ. ಕಾಮಿಕ್ ಕಾನ್ ಜಾಗತಿಕ ಪ್ರೇಕ್ಷಕರಿಗೆ ನಮ್ಮ ಕಥೆಯನ್ನು ಪರಿಚಯಿಸಲು ಒಂದು ಒಳ್ಳೆಯ ವೇದಿಕೆʼʼಎಂದರು.
ಪ್ರಾಜೆಕ್ಟ್ ಕೆ ಸಿನಿಮಾಗಾಗಿ ಕಮಲ್ ಅವರು 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ‘ಪ್ರಾಜೆಕ್ಟ್ ಕೆ’ ತೆಲುಗು ಚಿತ್ರರಂಗದಲ್ಲಿ ದೀಪಿಕಾ ಪಡುಕೋಣೆ ಅವರ ಚೊಚ್ಚಲ ಚಿತ್ರವಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ಮೊದಲ ಭಾಗವು 2024ರ ಜನವರಿ 12ರಂದು ಮಕರ ಸಂಕ್ರಾಂತಿ ಸಂದರ್ಭದಲ್ಲಿ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: Actor Prabhas: `ಸಲಾರ್’ ಟೀಸರ್ ರಿಲೀಸ್ ಡೇಟ್ ರಿವೀಲ್; ಸದ್ದಿಲ್ಲದೇ ಗುಡ್ ನ್ಯೂಸ್ ಕೊಟ್ಟ ಹೊಂಬಾಳೆ!
ಪ್ರಾಜೆಕ್ಟ್ ಕೆ ಸಿನಿಮಾದ ಕಥಾವಸ್ತು ತುಂಬ ದೊಡ್ಡದಾಗಿದೆ. ಹಾಗಾಗಿ ತಯಾರಕರು ಇದನ್ನು 2 ಭಾಗದ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಮೊದಲ ಭಾಗದಲ್ಲಿ ಸಿನಿಮಾ ಜಗತ್ತನ್ನು ಪರಿಚಯಿಸಿ, ಸಂಘರ್ಷವನ್ನು ಆರಂಭಿಸುತ್ತದೆ. ಬಾಹುಬಲಿ ಫ್ರಾಂಚೈಸ್‌ನಂತೆಯೇ ದ್ವಿತೀಯ ಭಾಗದಲ್ಲಿ ಇಡೀ ಚಿತ್ರ ನಾಟಕವು ತೆರೆದುಕೊಳ್ಳಲಿದೆ.
ಇದು ಭಾರತೀಯ ಚಿತ್ರರಂಗವು ಹಿಂದೆಂದೂ ಕಾಣದ ವಿಶೇಷ ಸಿನಿಮಾವಾಗಿರಲಿದೆ” ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾದಲ್ಲಿ ಪ್ರಭಾಸ್ ವಿಭಿನ್ನ ರೀತಿಯ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.