Site icon Vistara News

Rishab Shetty: ಸರ್‌ಪ್ರೈಸ್‌ ಗಿಫ್ಟ್‌ ಕೊಟ್ಟ ಪ್ರಗತಿ ಶೆಟ್ಟಿ; ಭಾವುಕರಾದ ರಿಷಬ್‌ ಶೆಟ್ಟಿ!

Pragathi Shetty

ಬೆಂಗಳೂರು: ಜುಲೈ 7ರಂದು ನಂದಿ ಲಿಂಕ್ ಗ್ರೌಂಡ್ಸ್​ನಲ್ಲಿ ಅದ್ಧೂರಿ ವೇದಿಕೆಯಲ್ಲಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ರಿಷಬ್ ಶೆಟ್ಟಿ (Rishab Shetty). ಅಭಿಮಾನಿಗಳ ಪ್ರೀತಿಯ ಋಣವನ್ನು ನಾನು ಸಾಯುವವರೆಗೂ ನನ್ನ ಸಿನಿಮಾ ಮತ್ತು ಕೆಲಸದ ಮೂಲಕ ತೀರಿಸುತ್ತಲೆ ಇರುತ್ತೇನೆ ಎಂದು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾವುಕರಾಗಿ ರಿಷಬ್ ಶೆಟ್ಟಿ ನುಡಿದರು. ವಿಶೇಷವೆಂದರೆ ಇದೇ ವೇದಿಕೆ ಮೇಲೆ ರಿಷಬ್​ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಅವರು ರಿಷಬ್ ಶೆಟ್ಟಿ ಅವರಿಗೆ ಉಡುಗೊರೆಯನ್ನು ನೀಡಿದ್ದಾರೆ.

”ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು’ ಸಿನಿಮಾ ಮಾಡಿದಾಗಿನಿಂದಲೂ ರಿಷಬ್ ಶೆಟ್ಟಿಯವರು ಶಿಕ್ಷಣ ಕ್ಷೇತ್ರದಲ್ಲಿ ಕೈಲಾದ ಸೇವೆ ಮಾಡುತ್ತಲೇ ಇದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಆದರೆ ಅದ್ಯಾವುದೂ ಒಂದು ವ್ಯವಸ್ಥಿತ ರೀತಿಯಲ್ಲಿರಲಿಲ್ಲ. ಸಮಾಜ ಸೇವೆ ಅದರಲ್ಲಿಯೂ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಕೊಡುವುದು ರಿಷಬ್​ಗೆ ಬಹಳ ಇಷ್ಟವಾಗುವ ಕೆಲಸ. ಈ ಬಗ್ಗೆ ನಾನು ರಿಷಬ್ ಬಹಳ ದಿನಗಳಿಂದ ಯೋಚಿಸುತ್ತಲೇ ಇದ್ದೆವು, ಟ್ರಸ್ಟ್ ಮಾಡಿ ಸಮಾಜಕ್ಕೆ ಉಪಯೋಗುವ ಕೆಲಸ ಮಾಡಬೇಕು ಎಂದು. ಹಾಗಾಗಿಯೇ ಯೋಚಿಸಿ ರಿಷಬ್ ಶೆಟ್ಟಿ ಫೌಂಡೇಶನ್ ಮಾಡಿದ್ದೇವೆ. ಇದಕ್ಕಿಂತಲೂ ಒಳ್ಳೆಯ ಉಡುಗೊರೆಯನ್ನು ರಿಷಬ್​ಗೆ ಕೊಡಲಾರೆ ಎನಿಸಿತು ಹಾಗಾಗಿ ಇದನ್ನು ಮಾಡಿದ್ದೇವೆ. ಮತ್ತು ಇದನ್ನು ಲಾಂಚ್ ಮಾಡಲು ಇದಕ್ಕಿಂತಲೂ ಒಳ್ಳೆಯ ದಿನವೂ ಸಿಗಲಾರದು” ಎಂದಿದ್ದಾರೆ ಪ್ರಗತಿ ಶೆಟ್ಟಿ.

ʻʻನಮ್ಮ ಶಕ್ತಿ ಇದ್ದಷ್ಟು, ದೇವರು ಕೊಟ್ಟಷ್ಟು, ಸಮಾಜಕ್ಕೆ ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಕೊಡುಗೆ ನೀಡುವ ಉದ್ದೇಶ ಹೊಂದಿದ್ದೇವೆ” ಎಂದರು ಪ್ರಗತಿ ಶೆಟ್ಟಿ.

ಇದನ್ನೂ ಓದಿ: Rishab Shetty: ಒಂದೇ ತಟ್ಟೆಯಲ್ಲಿ ಊಟ ಮಾಡಿದ ರಿಷಬ್‌, ಪ್ರಮೋದ್‌, ರಕ್ಷಿತ್‌ ಶೆಟ್ಟಿ; ವಿಡಿಯೊ ವೈರಲ್‌!

ಈ ಕಾರ್ಯಕ್ರಮವನ್ನು ಅಯೋಜಿಸಿದ ಅಭಿಮಾನಿಗಳಿಗೆ, ಸ್ನೇಹಿತರಿಗೆ, ತಮ್ಮ ಮಡದಿ ಪ್ರಗತಿ ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿಗೆ ಅವರಿಗೆ ರಿಷಬ್ ಶೆಟ್ಟಿ ಧನ್ಯವಾದ ತಿಳಿಸಿದರು. “ಕಾಂತಾರ” ಸಿನಿಮಾಕ್ಕೆ ಕನ್ನಡಿಗರು ತೋರಿಸಿದ ಪ್ರೀತಿಯಿಂದ ಇವತ್ತು ಅದು ಜಗತ್ತಿನ ಸಿನಿಮಾವಾಗಿದೆ, ಅದ್ದರಿಂದ ನಿಮ್ಮನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಬೇಕೆಂದು ಬಹಳ ದಿನಗಳಿಂದ ಕಾಯುತ್ತಿದ್ದೆ. ಆ ದಿನ ಇವತ್ತು ನನ್ನ ಹುಟ್ಟುಹಬ್ಬದ ಮೂಲಕ ಒದಗಿ ಬಂದಿದೆ. ಮಳೆ ಬಂದರೂ ತಾವೆಲ್ಲ ಇಲ್ಲಿಗೆ ಬಂದು ತೋರಿಸುತ್ತಿರುವ ಪ್ರೀತಿಯ ಋಣವನ್ನು ನಾನು ಸಾಯುವವರೆಗೂ ನನ್ನ ಸಿನಿಮಾ ಮತ್ತು ಕೆಲಸದ ಮೂಲಕ ತೀರಿಸುತ್ತಲೇ ಇರುತ್ತೇನೆ ಎಂದು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾವುಕರಾಗಿ ರಿಷಬ್ ಶೆಟ್ಟಿ ನುಡಿದರು.

Exit mobile version