Site icon Vistara News

Pragati Shetty: ʻಕಾಂತಾರʼ ಸಿನಿಮಾದಲ್ಲಿ ಉಟ್ಟಿದ್ದ 32 ವರ್ಷ ಹಳೆಯ ಸೀರೆಯ ಸೀಕ್ರೆಟ್‌ ರಿವೀಲ್‌ ಮಾಡಿದ ಪ್ರಗತಿ ಶೆಟ್ಟಿ

Pragati Shetty Kantara actress reveal secrete about her saree

ಕಾಂತಾರ 2 ಚಿತ್ರದಲ್ಲಿ ರಿಷಬ್‌ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ (Pragati Shetty) ರಾಣಿಯ ಪಾತ್ರ ಮಾಡಿದ್ದರು. ಕಾಂತಾರ ಚಿತ್ರ ಶುರುವಾಗುವುದೇ ರಾಜನೊಬ್ಬನ ಕಥೆಯಿಂದ. ಈ ರಾಜನ ಪತ್ನಿಯಾಗಿ ಪ್ರಗತಿ ನಟಿಸಿದ್ದರು.

ರಾಣಿಯ ಪಾತ್ರಕ್ಕಾಗಿ ಉಟ್ಟಿದ್ದ ಸೀರೆ ಬಗ್ಗೆ ಪ್ರಗತಿ ಶೆಟ್ಟಿ ಹೊಸ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ರಾಣಿಯ ಪಾತ್ರಕ್ಕಾಗಿ ಅಮ್ಮನ ಸೀರೆಯನ್ನು ಉಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ಫೋಟೊಗಳ ಜತೆ ಪ್ರಗತಿ ಶೆಟ್ಟಿ ʻʻನಮ್ಮ ಅಮ್ಮನ ಮದುವೆಯ ಸೀರೆಯನ್ನು ಮೂವತ್ತೆರಡು ವರ್ಷದ ನಂತರ ಕಾಂತಾರ ಸಿನಿಮಾದಲ್ಲಿ ಉಟ್ಟಿದ್ದು ತುಂಬಾ ಸಂತಸ ತಂದಿತ್ತುʼʼ ಎಂದು ಬರೆದುಕೊಂಡಿದ್ದಾರೆ.

ಕಾಂತಾರ-2 ಸಿನಿಮಾ ಕಾಂತಾರಕ್ಕಿಂತ ಮೊದಲಿನ ಕತೆಯಾಗಿರಲಿದೆ. ಕಾಂತಾರ-2 ಚಿತ್ರದಲ್ಲಿ ಪ್ರಗತಿ ನಟಿಸಲಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ ರಿಷಬ್ ಅಭಿಮಾನಿಗಳು.

ಕಾಮೆಂಟ್‌ನಲ್ಲಿ ಈ ಬಾರಿ ಯಾವ ಪಾತ್ರದಲ್ಲಿ ನಿಮ್ಮನ್ನು ನೋಡಬಹುದು ಎಂದೂ ಹಲವರು ಪ್ರಗತಿ ಅವರಿಗೆ ಕೇಳಿದ್ದಾರೆ.

ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.ಕಾಂತಾರ ಕನ್ನಡದಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಾಗ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡಿತು.

Exit mobile version