Site icon Vistara News

Prajwal Devaraj: ಸೋನಾ ಬೇಬಿ ಜತೆ ಹೆಜ್ಜೆ ಹಾಕಿದ ಪ್ರಜ್ವಲ್ ದೇವರಾಜ್!

Prajwal Devaraj stepped out with Sona Baby

ಬೆಂಗಳೂರು: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ನಾಯಕರಾಗಿ ನಟಿಸಿರುವ “ಗಣ” ಚಿತ್ರ ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡಿನ ಮೂಲಕ ಜನರ ಮೆಚ್ಚುಗೆ ಪಡೆದುಕೊಂಡಿದೆ.

“ಗಣ” ಚಿತ್ರಕ್ಕಾಗಿ ಡಾ. ವಿ.ನಾಗೇಂದ್ರ ಪ್ರಸಾದ್ ಬರೆದಿರುವ “ಮೈ ನೇಮ್ ಇಸ್ ಸೋನಾ ಬೇಬಿ ಬೇಬಿ.. ಕಣ್ಣಾಮುಚ್ಚಾಲೆ ನನ್ನ ಹಾಬಿ” ಎಂಬ ಮನಮೋಹಕ ಹಾಡು “ಸರಿಗಮಪ” ಆಡಿಯೋ ಸಂಸ್ಥೆ ಮೂಲಕ ಬಿಡುಗಡೆಯಾಗಿದೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜಿಸಿರುವ ಈ ಮಾಸ್ ಐಟಂ ಹಾಡಿಗೆ ಪ್ರಜ್ವಲ್ ದೇವರಾಜ್ , ನಮೃತಾ ಮಲ್ಲ ಹಾಗೂ ರವಿಕಾಳೆ ಹೆಜ್ಜೆ ಹಾಕಿದ್ದಾರೆ.

“ಕ್ರಾಂತಿ” ಚಿತ್ರದ “ಟೇಕ್ ಇಟ್ ಪುಷ್ಪವತಿ” ಹಾಡು ಸೇರಿದಂತೆ ಅನೇಕ ಯಶಸ್ವಿ ಗೀತೆಗಳನ್ನು ಹಾಡಿರುವ ಐಶ್ವರ್ಯ ರಂಗರಾಜನ್ ಈ ಹಾಡನ್ನು ಹಾಡಿದ್ದಾರೆ. “ಸೋನಾ ಬೇಬಿ” ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.

ಚೆರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ಅವರು ನಿರ್ಮಿಸಿರುವ ಈ ಚಿತ್ರವನ್ನು ಹರಿಪ್ರಸಾದ್ ಜಕ್ಕ ನಿರ್ದೇಶಿಸಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನ , ಸತೀಶ್ ಎ ಕಲಾ ನಿರ್ದೇಶನ ಹಾಗೂ ಡಿ.ಜೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಇದನ್ನೂ ಓದಿ: Prajwal Devaraj: ಪ್ರಜ್ವಲ್‌ ದೇವರಾಜ್‌ ಸಿನಿಮಾ ನಾಯಕಿ ಆಸ್ಪತ್ರೆಗೆ ದಾಖಲು

ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ಮುಂತಾದವರು “ಗಣ” ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರಜ್ವಲ್ ದೇವರಾಜ್ ಅವರ 40ನೇ ಸಿನಿಮಾಗೆ ‘ಅಂಬಿ ನಿಂಗೆ ವಯಸಾಯ್ತೋ’ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಗುರುದತ್ ನಿರ್ದೇಶನದ ಎರಡನೇ ಸಿನಿಮಾವಾಗಿದೆ. ಮೊದಲ ಸಿನಿಮಾ ‘ಅಂಬಿ ನಿಂಗೆ ವಯಸಾಯ್ತೋ’ 2018ರಲ್ಲಿ ಬಿಡುಗಡೆಯಾಗಿತ್ತು. ಬಳಿಕ ಗುರುದತ್ ಯಾವುದೇ ಸಿನಿಮಾ ಮಾಡಿರಲಿಲ್ಲ. ಮೊದಲ ಸಿನಿಮಾದಲ್ಲೇ ರೆಬಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್, ಸುಹಾಸಿನಿ ಅಂತಹ ದೊಡ್ಡ ದೊಡ್ಡ ಸ್ಟಾರ್ ಕಲಾವಿದರಿಗೆ ನಿರ್ದೇಶನ ಮಾಡಿದ್ದ ಗುರು ಮುಂದಿನ ಸಿನಿಮಾ ಯಾರ ಜೊತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದೀಗ ಆ ಎಲ್ಲಾ ಕುತೂಹಲ ಮತ್ತು ಪ್ರಶ್ನೆಗಳಿಗೆ ತೆರೆಬಿದ್ದಿದೆ.

Exit mobile version