Site icon Vistara News

Prakash Jha Birth day: ಖ್ಯಾತ ನಿರ್ಮಾಪಕ ಪ್ರಕಾಶ್ ಝಾ ಅವರ ನೋಡಲೇಬೇಕಾದ ಅದ್ಭುತ ಸಿನಿಮಾಗಳಿವು

#image_title

ಮುಂಬೈ: ಹೆಸರಾಂತ ಚಲನಚಿತ್ರ ನಿರ್ಮಾಪಕ ಮತ್ತು ಚಿತ್ರಕಥೆಗಾರ ಪ್ರಕಾಶ್ ಝಾ (Prakash Jha) ಅವರ ಜನ್ಮದಿನವಿಂದು. 1952ರ ಫೆ.27ರಂದು ಜನಿಸಿದ ಅವರಿಗೆ ಇಂದಿಗೆ 71 ವರ್ಷ ಸಂಪೂರ್ಣವಾಗುತ್ತಿವೆ. ಸಾಮಾಜಿಕ-ರಾಜಕೀಯ ಚಲನಚಿತ್ರಗಳಿಗೆ ಹೆಸರುವಾಸಿಯಾದ ಝಾ ಅವರ ನೋಡಲೇಬೇಕಾದ ಕೆಲವು ಸಿನಿಮಾಗಳ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Children’s Day | ಮಕ್ಕಳು ನೋಡಲೇಬೇಕಾದ ಅತ್ಯುತ್ತಮ ಮಕ್ಕಳ ಚಿತ್ರಗಳಿವು!

ದಾಮುಲ್ (1985)
ಪ್ರಕಾಶ್ ಝಾ ಬರೆದು ನಿರ್ದೇಶಿಸಿದ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ದಾಮುಲ್. ಬಿಹಾರದಲ್ಲಿ ‘ಪನ್ಹಾ’ ಹೆಸರಿನ ಬಂಧಿತ ಗುಲಾಮಗಿರಿಯ ಮೂಲಕ ಬಡ ಹರಿಜನರನ್ನು ಮೇಲ್ವರ್ಗದ ಭೂಮಾಲೀಕರು ದಬ್ಬಾಳಿಕೆ ಮಾಡುವುದನ್ನು ಈ ಚಿತ್ರ ಚಿತ್ರಿಸುತ್ತದೆ. ಈ ಚಿತ್ರವು ಬರಹಗಾರ ಶೈವಾಲ್ ಅವರ ಸಣ್ಣ ಕಥೆ ಕಾಲಸೂತ್ರವನ್ನು ಆಧರಿಸಿದೆ. ಚಿತ್ರದಲ್ಲಿ ಮನೋಹರ್ ಸಿಂಗ್, ಶ್ರೀಲಾ ಮಜುಂದಾರ್, ಅಣ್ಣು ಕಪೂರ್ ಮತ್ತು ದೀಪ್ತಿ ನವಲ್ ಮುಂತಾದವರು ನಟಿಸಿದ್ದಾರೆ.


ಮೃತ್ಯುದಂಡ್ (1997)


ಮೃತ್ಯುದಂಡ್ ಚಿತ್ರವು ಭ್ರಷ್ಟ ಗ್ರಾಮಸ್ಥರು ಆಸ್ತಿ ವಿಚಾರದಲ್ಲಿ ಬೇರೆಯವರಿಗೆ ತೊಂದರೆ ಕೊಡುವ ಕಥೆಯನ್ನು ಹೊಂದಿದೆ. ಇಬ್ಬರು ಗಂಡು ಮಕ್ಕಳಿರುವ ವ್ಯಕ್ತಿಯ ಕುಟುಂಬವನ್ನು ಪ್ರಭಾವಿ ಜನರು ನಾಶಪಡಿಸಲು ಯತ್ನಿಸುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮಾಧುರಿ ದೀಕ್ಷಿತ್, ಶಬಾನಾ ಅಜ್ಮಿ, ಅಯೂಬ್ ಖಾನ್, ಓಂ ಪುರಿ, ಮೋಹನ್ ಜೋಶಿ ಮತ್ತು ಮೋಹನ್ ಅಗಾಶೆ ಈ ಚಿತ್ರದಲ್ಲಿ ನಟಿಸಿದ್ದಾರೆ.

ಗಂಗಾಜಲ್ (2003)
ಬಿಹಾರದ ತೇಜ್‌ಪುರದಲ್ಲಿ ನಡೆಯುವ ಅತಿರೇಕದ ಭ್ರಷ್ಟಾಚಾರ ಮತ್ತು ಅಪರಾಧವನ್ನು ಪತ್ತೆ ಹಚ್ಚುವ ಕಥೆ ಇದಾಗಿದೆ. ಪೊಲೀಸ್ ಅಧಿಕಾರಿಗಳು ಮಾಡುವ ಅಪರಾಧಗಳನ್ನೂ ಚಿತ್ರ ಬಿಂಬಿಸುತ್ತದೆ. ಸಾಮಾಜಿಕ ಸಮಸ್ಯೆಗಳ ಚಿತ್ರಣಕ್ಕಾಗಿ ಗಂಗಾಜಲ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಚಿತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದಾರೆ.

ಅಪಹರಣ್ (2005)


ಬಿಹಾರದ ಅಪಹರಣ ಉದ್ಯಮವು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಈ ಚಿತ್ರ ಸೆರೆಹಿಡಿದಿದೆ. ಇದರಲ್ಲಿ ಅಪ್ಪ ಮಗನ ಸೈದ್ಧಾಂತಿಕ ಸಂಘರ್ಷವನ್ನೂ ಕಾಣಬಹುದು. ಅಪಹರಣ್ ಅತ್ಯುತ್ತಮ ಚಿತ್ರಕಥೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ರಾಜನೀತಿ (2010)
ರಾಜನೀತಿ ರಾಜಕೀಯದ ವಿಶ್ವಾಸಘಾತುಕ ಜಗತ್ತು, ರಾಜಕೀಯ ಪಕ್ಷಗಳ ನಡುವಿನ ಅಂತರ್ಗತ ಪೈಪೋಟಿ, ದ್ರೋಹ, ಅಪರಾಧಗಳು ಮತ್ತು ಅಧಿಕಾರದ ದುರಾಸೆಯನ್ನು ಚಿತ್ರಿಸುತ್ತದೆ. ಚಿತ್ರದಲ್ಲಿ ಅಜಯ್ ದೇವಗನ್, ರಣಬೀರ್ ಕಪೂರ್, ನಾನಾ ಪಾಟೇಕರ್, ಕತ್ರಿನಾ ಕೈಫ್, ನಾಸಿರುದ್ದೀನ್ ಶಾ, ಅರ್ಜುನ್ ರಾಂಪಾಲ್ ಮತ್ತು ಮನೋಜ್ ಬಾಜಪೇಯಿ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: Samantha: ಸಮಂತಾ-ನಾಗಚೈತನ್ಯ ಒಟ್ಟಿಗೆ ನಟಿಸಿದ ಸಿನಿಮಾಗೆ 13 ವರ್ಷ: ಚೈ ಪೋಸ್ಟ್‌ ಮಾಡಿದ್ದೇನು?

Exit mobile version