Site icon Vistara News

Pranitha Subhash : ಮೆರೂನ್‌ ಲೆಹೆಂಗಾದಲ್ಲಿ ಮಿಂಚಿದ ಪ್ರಣಿತಾ; ಲುಕ್‌ಗೆ ಫಿದಾ ಎನ್ನುತ್ತಿದ್ದಾರೆ ನೆಟ್ಟಿಗರು

Pranitha Subhash new pic

#image_title

ಬೆಂಗಳೂರು: ಕರ್ನಾಟಕದ ಪ್ರತಿಭೆ ಪ್ರಣಿತಾ ಸುಭಾಷ್‌ (Pranitha Subhash) ಈಗಾಗಲೇ ಹಲವರ ಮನಸ್ಸನ್ನು ಗೆದ್ದಿರುವ ಬೆಡಗಿ. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲೂ ನಟಿಸಿ ಪಂಚಭಾಷಾ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೆ ತಮ್ಮ ಫ್ಯಾಷನ್‌ ಸೆನ್ಸ್‌ನಿಂದಲೂ ಅನೇಕರ ಮೆಚ್ಚುಗೆಗೆ ಪಾತ್ರವಾಗಿರುವ ಈ ನಟಿ ಇದೀಗ ಹೊಸದೊಂದು ಫೋಟೋಶೂಟ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿ ಮೆರೂನ್‌ ಬಣ್ಣದ ಲೆಹೆಂಗಾದಲ್ಲಿ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಲೆಹೆಂಗಾದ ಪೂರ್ತಿ ಚಿನ್ನದ ಬಣ್ಣದ ಎಂಬ್ರಾಯಿಡರಿಯನ್ನು ಕಾಣಬಹುದು. ಲೆಹೆಂಗಾಕ್ಕೆ ಸರಿಹೊಂದುವಂತಹ ಮುತ್ತಿನ ಚೋಕರ್‌, ಅದರ ಮ್ಯಾಚಿಂಗ್‌ ಕಿವಿ ಓಲೆಯನ್ನು ನಟಿ ಧರಿಸಿದ್ದಾರೆ. ತುಂಬಾ ಸರಳವಾಗಿ ಕೂದಲನ್ನು ಜುಟ್ಟು ಹಾಕಿರುವ ಅವರು ಹಣೆ ಮೇಲೆ ಬಿಂದಿ ಹಾಕಿದ್ದಾರೆ. ನ್ಯೂಡ್‌ ಬಣ್ಣದ ಲಿಪ್ಸ್ಟಿಕ್‌ನೊಂದಿಗೆ ಅತ್ಯಂತ ಕಡಿಮೆ ಮೇಕಪ್‌ ಮಾಡಿಸಿಕೊಂಡು ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Video Viral: ಕಿಕ್‌ ಏರಿಸಿಕೊಂಡ ಯುವಕರ ಹುಚ್ಚಾಟ; ಜತೆಯಲ್ಲಿದ್ದವನ ಬೆತ್ತಲೆಗೊಳಿಸಿ ರೋಡ್‌ ಡ್ಯಾನ್ಸ್‌
ನಟಿ ಈ ಫೋಟೋಗಳನ್ನು ಬುಧವಾರದಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಕಂಡಿರುವ ಆಕೆಯ ಅಭಿಮಾನಿಗಳು ಲೈಕ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಹಾಗೆಯೇ ಹಲವಾರು ರೀತಿಯ ಕಮೆಂಟ್‌ಗಳ ಮೂಲಕ ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.


ಇದಕ್ಕೂ ಮೊದಲು ನಟಿ ಅಚ್ಚ ಹಸಿರು ಬಣ್ಣದ ಗೌನ್‌ ಒಂದನ್ನು ತೊಟ್ಟು ಫೋಟೋಶೂಟ್‌ ಮಾಡಿಸಿಕೊಂಡಿದ್ದರು. ಒನ್‌ ಶೋಲ್ಡರ್‌ ಡ್ರೆಸ್‌ ಆಗಿದ್ದ ಅದಕ್ಕೂ ಕೂಡ ಜನರು ಮೆಚ್ಚುಗೆಯ ಸುರಿಮಳೆ ಸುರಿಸಿದ್ದರು.


ಪ್ರಣಿತಾ ಅವರು ಕೊನೆಯದಾಗಿ 2021ರ ಭುಜ್‌: ದಿ ಪ್ರೈಡ್‌ ಆಫ್‌ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ಸಂಜಯ್ ದತ್, ಸೋನಾಕ್ಷಿ ಸಿನ್ಹಾ ಮತ್ತು ಅಜಯ್ ದೇವಗನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದಾದ ನಂತರ ನಟಿ ಗರ್ಭಿಣಿಯಾಗಿದ್ದರಿಂದ ಸಾಕಷ್ಟು ವಿರಾಮ ತೆಗೆದುಕೊಂಡಿದ್ದರು. ಸದ್ಯ ಅವರು ವಿನಯ್‌ ಪಂಪತಿ ನಿರ್ದೇಶನದ ರಮಣ ಅವತಾರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ D148 ಸಿನಿಮಾ ಕೂಡ ಅವರ ಕೈಯಲ್ಲಿದೆ.

Exit mobile version