ಬೆಂಗಳೂರು: ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ಮಗಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಉದ್ಯಮಿ ನಿತಿನ್ ಜೊತೆ ಲಾಕ್‌ಡೌನ್‌ನಲ್ಲಿ ಮದುವೆಯಾಗಿದ್ದರು. ಜುಲೈ 17ರಂದು ಭೀಮನ ಅಮಾವ್ಯಾಸೆಗೆ ಪ್ರಣಿತಾ, ಪತಿಯ ಪಾದ ಪೂಜೆ ಮಾಡಿದ್ದಾರೆ. ಪೂಜೆಯ ಫೋಟೊವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ನಟಿ ಶೇರ್ ಮಾಡಿದ್ದಾರೆ.
ಈ ಬಗ್ಗೆ ನಟಿ ಫೋಟೊ ಶೇರ್ ಮಾಡಿಕೊಂಡು ʻʻಇಂದು ಬೆಳಗ್ಗೆ ಭೀಮನ ಅಮವಾಸ್ಯೆಯಂದು ಪೂಜೆ ಸಲ್ಲಿಸಿದೆ. ಇದರಲ್ಲಿ ನಿಮಗೆ ಪುರುಷ ಪ್ರಧಾನ ಎಂದೆನಿಸಬಹುದು. ಆದರೆ ನನಗೆ ಇದು ಹೆಚ್ಚಿನ ಮಹತ್ವವನ್ನು ಹೊಂದಿದೆ.
ಸನಾತನ ಧರ್ಮದಲ್ಲಿ, ಹೆಚ್ಚಿನ ಆಚರಣೆಗಳು ಏಕೆ ಮಹತ್ವದ್ದಾಗಿದೆ ಎಂಬುದಕ್ಕೆ ಕಥೆ ಇರುತ್ತದೆ. ಹಿಂದು ಆಚರಣೆಗಳು ಪಿತೃಪ್ರಧಾನವೆಂದು ವಾದಿಸುವುದು ಸಂಪೂರ್ಣವಾಗಿ ಆಧಾರರಹಿತವಾಗಿದೆ. ಏಕೆಂದರೆ ಇದು ದೇವಿಯರನ್ನು ಸಮಾನವಾಗಿ ಪೂಜಿಸುವ ಕೆಲವು ನಂಬಿಕೆಗಳಲ್ಲಿ ಒಂದಾಗಿದೆʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Pranitha Subhash: ಬೀಗರ ಊಟಕ್ಕೆ ಮದುಮಗಳಂತೆ ಮಿಂಚಿದ ಸುಂದರಿ ಪ್ರಣಿತಾ ಸುಭಾಷ್
2010ರ ‘ಪೊರ್ಕಿ’ ಚಿತ್ರದ ಮೂಲಕ ಪ್ರಣಿತಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಹಲವು ಸ್ಟಾರ್ಗಳ ಜತೆ ಅವರು ತೆರೆ ಹಂಚಿಕೊಂಡಿದ್ದಾರೆ. ವಿವಿಧ ಭಾಷೆಗಳಲ್ಲಿ ಅವರು ನಟಿಸಿದ್ದಾರೆ.
ಪ್ರಣಿತಾ, ಜರಾಸಂದ, ಮಿ.420, ಅಂಗಾರಕ ಸೇರಿದಂತೆ ಹಲವು ಕನ್ನಡ ಸಿನಿಮಾದಲ್ಲಿ ಪ್ರಣಿತಾ ನಟಿಸಿದ್ದಾರೆ. ಬಳಿಕ ತೆಲುಗು- ತಮಿಳು ಸಿನಿಮಾರಂಗದಲ್ಲಿ ನಟಿ ಬ್ಯುಸಿಯಾದರು. ಮದುವೆಗೂ ಮುನ್ನ ಬಾಲಿವುಡ್‌ನ ಹಂಗಾಮ 2, ಭುಜ್ ಸಿನಿಮಾದಲ್ಲಿ ಪೊರ್ಕಿ ನಾಯಕಿ ಅಭಿನಯಿಸಿದ್ದರು. ಇದೀಗ ಪ್ರಣಿತಾ, ನಟ ದಿಲೀಪ್‌ಗೆ ನಾಯಕಿಯಾಗುವ ಮೂಲಕ ಮಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ದಿಲೀಪ್‌ಗೆ ಪ್ರಣಿತಾ ಮತ್ತು ತಮನ್ನಾ ನಾಯಕಿಯರಾಗಿದ್ದಾರೆ.