Pranitha Subhash: ಬೀಗರ ಊಟಕ್ಕೆ ಮದುಮಗಳಂತೆ ಮಿಂಚಿದ ಸುಂದರಿ ಪ್ರಣಿತಾ ಸುಭಾಷ್ Yashaswi Devadiga 1 ವರ್ಷ ago ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ಮಗಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಮಗಳಿಗೆ ಅವರು ಅರ್ನಾ ಎಂದು ಹೆಸರು ಇಟ್ಟಿದ್ದಾರೆ. ಪ್ರಣಿತಾ ಈಗ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಪ್ರಣಿತಾ ಗ್ರ್ಯಾಂಡ್ ಲೆಹಂಗಾದಲ್ಲಿ ಕಂಗೊಳಿಸುತ್ತಿದ್ದಾರೆ. ಗೊಂಬೆ ತರ ಕಾಣುತ್ತಿದ್ದೀರಾ ಎನ್ನುತ್ತಿದ್ದಾರೆ ಅವರ ಫ್ಯಾನ್ಸ್. ಟ್ರೆಡಿಷನಲ್ ಲುಕ್ನಲ್ಲಿ ನಟಿ ಮಿಂಚಿದ್ದಾರೆ. 2010ರ ‘ಪೊರ್ಕಿ’ ಚಿತ್ರದ ಮೂಲಕ ಪ್ರಣಿತಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಹಲವು ಸ್ಟಾರ್ಗಳ ಜತೆ ಅವರು ತೆರೆ ಹಂಚಿಕೊಂಡಿದ್ದಾರೆ. ವಿವಿಧ ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಫೋಟೊಗಳ ಜತೆ, ನನ್ನ ಸೋದರ ಮಾವನ ಬೀಗರ ಊಟ ಎಂದು ಬರೆದುಕೊಂಡಿದ್ದಾರೆ. ಮದುಮಗಳಂತೆ ಮಿಂಚಿದ್ದಾರೆ. ಹಸಿರು ಡ್ರೆಸ್ಗೆ ತಕ್ಕಂತೆ ಸರ, ಕಿವಿಯೋಲೆ, ಬಳೆ, ಎಲ್ಲಕ್ಕಿಂತ ಹೆಚ್ಚಾಗಿ ಅವರ ಜಡೆ ಹೈಲೈಟ್ ಆಗಿದೆ. ಕನ್ನಡದ ಪೊರ್ಕಿ ಚಿತ್ರ ಮೂಲಕ ಅವರು ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಈಗ ಬಹುಭಾಷಾ ನಟಿಯಾಗಿ ಹೆಸರು ಮಾಡಿದ್ದಾರೆ.