Site icon Vistara News

Prashanth Neel Birthday: ‘ಕೆಜಿಎಫ್’ ಡೈರೆಕ್ಟರ್ ನೀಲ್ ಬರ್ತ್‌ಡೇ ಬಾಯ್, ಸಲಾರ್ ಸೆಟ್‌ನಲ್ಲೇ ಕೇಕ್ ಕತ್ತರಿಸಿದ್ರು

Prashanth Neel Birthday celebration

ಬೆಂಗಳೂರು: ಸ್ಯಾಂಡಲ್‌ವುಡ್‌ ನಿರ್ದೇಶಕ ಪ್ರಶಾಂತ್​ ನೀಲ್​ (Prashanth Neel Birthday) ಅವರಿಗೆ ಜೂನ್​ 4ರಂದು ಜನುಮದಿನದ ಸಂಭ್ರಮ. ಈ ವಿಶೇಷ ದಿನದಂದು ಜೂನ್‌ 3ರ ರಾತ್ರಿ ಸಲಾರ್‌ ಶೂಟಿಂಗ್‌ ಸೆಟ್‌ನಲ್ಲಿಯೇ ನಟ​ ಪ್ರಭಾಸ್​ (Prabhas) ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಜತೆ ‘ಹೊಂಬಾಳೆ ಫಿಲ್ಮ್ಸ್​’ನ ವಿಜಯ್​ ಕಿರಗಂದೂರು ಕೂಡ ಸಾಥ್​ ನೀಡಿದ್ದಾರೆ. ಎಲ್ಲರೂ ಒಟ್ಟಾಗಿ ಕೇಕ್​ ಕಟ್​ ಮಾಡುತ್ತಿರುವ ಫೋಟೊ ವೈರಲ್​ ಆಗಿದೆ.

ಕೆಜಿಎಫ್‌ ಸಿನಿಮಾ ಮೂಲಕ ಖ್ಯಾತಿ ಪಡೆದಿರುವ ಪ್ರಶಾಂತ್‌ ನೀಲ್‌ ಅವರಿಗೆ ಅವರ ಫ್ಯಾನ್ಸ್‌ ವಿಶ್‌ ಮಾಡುತ್ತಿದ್ದಾರೆ. ಪ್ರಸ್ತುತ ‘ಸಲಾರ್​’ ಸಿನಿಮಾದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಪ್ರಶಾಂತ್ ನೀಲ್ ಸಿನಿಮಾ ಜೀವನದಲ್ಲಿ ʻಉಗ್ರಂʼ ಸಿನಿಮಾ ತುಂಬಾನೇ ವಿಶೇಷವಾಗಿತ್ತು. ಮೊದಲ ನಿರ್ದೇಶನದ ಈ ಚಿತ್ರದಿಂದ ಖ್ಯಾತಿ ಪಡೆದ ಪ್ರಶಾಂತ್‌ ಕೆಜಿಎಫ್‌ ಸಿನಿಮಾ ಮೂಲಕ ವಿಶ್ಯಾದ್ಯಂತ ಮನ್ನಣೆ ಪಡೆದರು.

ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ಪ್ರಶಾಂತ್‌ ನೀಲ್‌

‘ಕೆಜಿಎಫ್​’ ಸಿನಿಮಾ ಬಾಕ್ಲ್​ ಬಸ್ಟರ್​ ಹಿಟ್​ ಆಗುತ್ತಿದ್ದಂತೆಯೇ ಪ್ರಶಾಂತ್​ ನೀಲ್​ ಅವರಿಗೆ ಟಾಲಿವುಡ್​ನಿಂದ ಸಾಕಷ್ಟು ಆಫರ್​ ಬರಲು ಆರಂಭ ಆಯಿತು. ಜ್ಯೂನಿಯರ್‌​ ಎನ್​ಟಿಆರ್​ ನಟನೆಯ 31ನೇ ಸಿನಿಮಾಗೆ ಅವರು ನಿರ್ದೇಶನ ಮಾಡಲಿದ್ದಾರೆ. ಸದ್ಯಕ್ಕೆ ‘ಸಲಾರ್​’ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ಪ್ರಭಾಸ್‌ ಅವರ ಜತೆಯಲ್ಲಿ ಪೃಥ್ವಿರಾಜ್‌ ಸುಕುಮಾರನ್‌, ಶ್ರುತಿ ಹಾಸನ್‌, ಜಗಪತಿ ಬಾಬು ಸೇರಿ ಅನೇಕರು ಬಣ್ಣ ಹಚ್ಚಿದ್ದಾರೆ. ಕೆಜಿಎಫ್‌ ಚಿತ್ರಕ್ಕೆ ಸಂಗೀತ ನೀಡಿರುವ ರವಿ ಬಸ್ರೂರು ಅವರು ಈ ಸಿನಿಮಾದ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಪ್ರಭಾಸ್‌ ಅವರು ಸಲಾರ್‌ ಸಿನಿಮಾ ಜತೆಯಲ್ಲಿ ಮಹಾನಟಿ ಸಿನಿಮಾ ಖ್ಯಾತಿಯ ನಾಗ್‌ ಅಶ್ವಿನ್‌ ಅವರು ನಿರ್ದೇಶಿಸುತ್ತಿರುವ ಪ್ರಾಜೆಕ್ಟ್‌ ಕೆ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

ಇದನ್ನೂ ಓದಿ: Prashanth Neel | ಟ್ರೋಲಿಗರಿಗೆ ಹೆದರಿ ಸೋಷಿಯಲ್‌ ಮೀಡಿಯಾವನ್ನೇ ತೊರೆದರಾ ಕೆಜಿಎಫ್‌ ಡೈರೆಕ್ಟರ್ ಪ್ರಶಾಂತ್ ನೀಲ್?‌

‘ಕೆಜಿಎಫ್​: ಚಾಪ್ಟರ್​ 3’ ಬಗ್ಗೆ ಬಹಳ ನಿರೀಕ್ಷೆ ಇದೆ. ಆ ಬಗ್ಗೆ ಅಪ್​ಡೇಟ್​ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ಅದಕ್ಕೂ ಮುನ್ನ ‘ಸಲಾರ್​’ ಟೀಸರ್​ ನೋಡಲು ಕಾತುರು ಹೆಚ್ಚಿದೆ. ಶೀಘ್ರದಲ್ಲೇ ಈ ಟೀಸರ್​ ಬಿಡುಗಡೆ ಆಗಲಿದೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

Exit mobile version