Site icon Vistara News

Actor Yash: ನಾನೇ ನಿರ್ದೇಶಿಸುವುದು ಡೌಟ್‌; ಕೆಜಿಎಫ್‌ 3ಗೆ ಯಶ್‌ ಮಾತ್ರ ಫಿಕ್ಸ್‌ ಎಂದ ನೀಲ್‌!

Prashanth Neel confirms 'KGF 3' with Yash

ಬೆಂಗಳೂರು: ಪ್ರಶಾಂತ್ ನೀಲ್ ಮತ್ತು ಯಶ್ (Actor Yash) ಅವರ ‘ಕೆಜಿಎಫ್’ ಫ್ರ್ಯಾಂಚೈಸ್ ಭಾರತೀಯ ಚಿತ್ರರಂಗದಲ್ಲಿ ಇತಿಹಾಸವನ್ನು ಸೃಷ್ಟಿಸಿತು. ಕೆಜಿಎಫ್‌ 2 ಬಿಡುಗಡೆಯ ನಂತರ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯಿತು. ಕೆಜಿಎಫ್‌ 3, ಸಿನಿಮಾ ಬಗ್ಗೆ ನಿರ್ದೇಶಕ ಪ್ರಶಾಂತ್‌ ನೀಲ್‌ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಸದ್ಯ ‘ಸಲಾರ್’ ಬಿಡುಗಡೆಗೆ ಸಜ್ಜಾಗಿದ್ದಾರೆ.

ಮಾಧ್ಯಮವೊಂದರ ಜತೆ ಪ್ರಶಾಂತ್‌ ನೀಲ್‌ ಮಾತನಾಡಿ ʻʻಕೆಜಿಎಫ್ 3 ಆಗಲಿದೆ. ನಾವು ಈಗಾಗಲೇ ಸ್ಕ್ರಿಪ್ಟ್ ತಯಾರು ಮಾಡಿದ್ದೇವೆ. ಯಶ್ ಅವರು ತುಂಬಾ ಜವಾಬ್ದಾರಿಯುತ ವ್ಯಕ್ತಿ. ನಾನು ಈ ಸಿನಿಮಾಗೆ ನಿರ್ದೇಶಕನೋ ಇಲ್ಲವೋ ಗೊತ್ತಿಲ್ಲ, ಆದರೆ ಯಶ್ ಯಾವಾಗಲೂ ಆ ಸಿನಿಮಾದ ಭಾಗವಾಗಿರುತ್ತಾರೆ. ಅದರ ಸಲುವಾಗಿ ಇನ್ನೂ ಏನನ್ನೂ ಘೋಷಣೆ ಮಾಡಿಲ್ಲ” ಎಂದು ಹೇಳಿದರು.

ಪ್ರಶಾಂತ್ ಅವರು ಜ್ಯೂನಿಯರ್‌ ಎನ್‌ಟಿಆರ್‌ ಜತೆ ತಮ್ಮ ಮೊದಲ ಪ್ರಾಜೆಕ್ಟ್‌ ತಯಾರಿ ನಡೆಸುತ್ತಿದ್ದಾರೆ. ತಾತ್ಕಾಲಿಕವಾಗಿ ಎನ್‌ಟಿಆರ್ 31 ಎಂದು ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ. ಸಲಾರ್‌ ರಿಲೀಸ್‌ ಆದ ಬಳಿಕ ಈ ಸಿನಿಮಾ ಚಿತ್ರೀಕರಣವನ್ನು ಪ್ರಾರಂಭಿಸುತ್ತಿರುವುದಾಗಿ ಹೇಳಿದರು. ಸಲಾರ್‌ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬೆಂಬಲದೊಂದಿಗೆ, ‘ಸಲಾರ್’ 400ಕೋಟಿ ರೂ.ಬಜೆಟ್‌ನಲ್ಲಿ ತಯಾರಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Junior NTR: ಬಿಗ್‌ ಅಪ್‌ಡೇಟ್‌ ಹಂಚಿಕೊಂಡ ಜ್ಯೂನಿಯರ್‌ ಎನ್‌ಟಿಆರ್‌-ಪ್ರಶಾಂತ್​ ನೀಲ್!

ರಾಕಿಂಗ್‌ ಸ್ಟಾರ್‌ ಯಶ್‌ ಹೊಸ ಸಿನಿಮಾ ಟೈಟಲ್ ಅನೌನ್ಸ್‌ಗೆ ಮುಹೂರ್ತ ಫಿಕ್ಸ್!

ನಟ ಯಶ್ (Actor Yash), ‘ಕೆಜಿಎಫ್’ ಹೊರತಾಗಿ ಇನ್ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಮುಂದೆ ಯಾವ ಸಿನಿಮಾ ಒಪ್ಪಿಕೊಳ್ಳಲಿದ್ದಾರೆ ಎಂಬ ಕುತೂಹಲ ಅವರ ಫ್ಯಾನ್ಸ್‌ ಮಾತ್ರವಲ್ಲದೆ ಭಾರತದ ಸಿನಿಮಾ ಪ್ರೇಕ್ಷಕರಲ್ಲಿತ್ತು. (ಡಿಸೆಂಬರ್ 03) ತಮ್ಮ ಮುಂಬರುವ ಸಿನಿಮಾ ಬಗ್ಗೆ ಸುಳಿವೊಂದನ್ನು ನೀಡಿದ್ದರು. ಯಶ್ ಸಿನಿಮಾದ ಟೈಟಲ್ ಅನೌನ್ಸ್ ಮೆಂಟ್‌ಗೆ ಮುಹೂರ್ತ ಫಿಕ್ಸ್‌ ಆಗಿದೆ.

ಡಿಸೆಂಬರ್ 8ರಂದು ಬೆಳಗ್ಗೆ 9:55ಕ್ಕೆ ಯಶ್ ಹೊಸ ಪ್ರಾಜೆಕ್ಟ್‌ ಅನೌನ್ಸ್‌ ಮಾಡಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್ ಪಿಕ್ಚರ್ ಬದಲಾಯಿಸಿಕೊಂಡಿದ್ದು, ‘ಲೋಡಿಂಗ್’ ಎಂದು ಬರೆದಿರುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು ಯಶ್‌. ಯಶ್​ ‘ಲೋಡಿಂಗ್’ ಪೋಸ್ಟರ್ ಹಂಚಿಕೊಂಡ ಕೇವಲ 40 ನಿಮಿಷದಲ್ಲಿ ಆ ಚಿತ್ರಕ್ಕೆ 30 ಸಾವಿರ ಲೈಕ್​ಗಳು ಫೇಸ್​ಬುಕ್​ನಲ್ಲಿ ಬಂದಿತ್ತು. ‘ಲೋಡಿಂಗ್’ ಪೋಸ್ಟರ್ʼ ಹಾಗೂ ಇಂದು ಹಂಚಿಕೊಂಡ ಪೋಸ್ಟರ್‌ ಕೆಂಪು ಬಣ್ಣವನ್ನು ಹೊಂದಿದ್ದು, ಮುಂದಿನ ಸಿನಿಮಾ ಕೂಡ ಇದೇ ಮಾದರಿಯ ಕಲರ್ ಕಾಂಬಿನೇಷನ್‌ನಲ್ಲಿ ಬರಲಿದೆ ಎಂದು ಫ್ಯಾನ್ಸ್‌ ಊಹಿಸುತ್ತಿದ್ದಾರೆ. ಕೆವಿಎನ್‌ ಪ್ರೊಡಕ್ಷನ್‌ ಹೊಸ ಸಿನಿಮಾಗೆ ಬಂಡವಾಳ ಹೂಡುತ್ತಿದೆ ಎನ್ನಲಾಗಿದೆ.

Exit mobile version