Site icon Vistara News

Ileana D’cruz: ಇಲಿಯಾನಾ ಮಗುವಿನ ತಂದೆ ಯಾರಂತ ಗೊತ್ತಾಯ್ತು; ಒಂದು ಸತ್ಯ ಮಾತ್ರ ಹೊರಗೆ ಬರಲೇ ಇಲ್ಲ!

Pregnant Ileana D'Cruz with her boyfriend

ನಟಿ ಇಲಿಯಾನಾ ಡಿಕ್ರೂಜ್ (Ileana D’cruz Pregnant) ತಾಯಿಯಾಗುತ್ತಿರುವ ಬಗ್ಗೆ ಈಗಾಗಲೇ ಹೇಳಿಕೊಂಡಿದ್ದಾರೆ. ಮದುವೆಯಾಗದೇ ಪ್ರೆಗ್ನೆನ್ಸಿ (Pregnancy) ಅನೌನ್ಸ್ ಮಾಡಿದ್ದಕ್ಕೆ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಈಗ ತಮ್ಮ ‘ಡೇಟ್ ನೈಟ್’ ಎಂದು ವ್ಯಕ್ತಿಯ ಜತೆಗಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಪ್ರಿಯಕರನ ಮುಖವನ್ನು ಇಲಿಯಾನಾ ರಿವೀಲ್ ಮಾಡಿದ್ದಾರೆ. ಆದರೆ ನಟಿ ಆ ವ್ಯಕ್ತಿಯ ಹೆಸರನ್ನು ಅವರು ಇನ್ನೂ ಗುಟ್ಟಾಗಿಯೇ ಇಟ್ಟಿದ್ದಾರೆ.

ಜುಲೈ 17ರಂದು ಇಲಿಯಾನಾ ತಮ್ಮ ಫೋಟೊಗಳನ್ನು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹೃದಯದ ಇಮೋಜಿಯೊಂದಿಗೆ ಹಂಚಿಕೊಂಡಿದ್ದಾರೆ. ಇಲಿಯಾನಾ ಸ್ಟ್ರಾಪಿ ಕೆಂಪು ಡ್ರೆಸ್‌ನಲ್ಲಿ ಕಾಣಿಸಿಕೊಂಡರೆ, ಆ ವ್ಯಕ್ತಿ ಕಪ್ಪು ಶರ್ಟ್‌ನಲ್ಲಿ ಕಂಡಿದ್ದಾರೆ. ಇಲಿಯಾನಾ ಈ ಹಿಂದೆ ತಮ್ಮ ಸಂಗಾತಿಯ ಮಸುಕಾದ ಚಿತ್ರವನ್ನು ಹಂಚಿಕೊಂಡಿದ್ದರು.
ಚಿತ್ರದಲ್ಲಿರುವ ವ್ಯಕ್ತಿ ಕಳೆದ ತಿಂಗಳು ಇಲಿಯಾನಾ ಹಂಚಿಕೊಂಡ ಮಸುಕಾದ ಚಿತ್ರದಲ್ಲಿ ನೋಡಿದಂತೆಯೇ ಕಾಣುತ್ತಾರೆ ಎಂದು ನೆಟ್ಟಿಗರೂ ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Ileana D’cruz: ಇಲಿಯಾನಾ ಬೇಬಿಮೂನ್: ಬೇಬಿ ಬಂಪ್‌ ಪ್ರದರ್ಶಿಸಿದ ಸುಂದರಿ

ಕತ್ರೀನಾ ಕೈಫ್ ಸಹೋದರನ ಜತೆ ಡೇಟಿಂಗ್‌!

ಇಲಿಯಾನಾ ಅವರು ಕತ್ರೀನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕಲ್ ಅವರೊಂದಿಗೆ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಮಾಲ್ಡೀವ್ಸ್​ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಜತೆ ಇಲಿಯಾನಾ ಹಾಗೂ ಕತ್ರೀನಾ ತಮ್ಮನೂ ಇದ್ದ ಕಾರಣ ಈ ಡೇಟಿಂಗ್ ವಿಚಾರ ರಿವೀಲ್ ಆಗಿತ್ತು. ಆದರೆ ಈ ಜೋಡಿ ಇನ್ನೂ ತಮ್ಮ ರಿಲೇಷನ್​ಶಿಪ್ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ. ಇಲಿಯಾನಾ ಡಿಕ್ರೂಜ್​ ಅವರು ಈ ಹಿಂದೆ ಆಸ್ಟ್ರೇಲಿಯಾದ ಫೋಟೊಗ್ರಾಫರ್​ ಆ್ಯಂಡ್ರ್ಯೂ ನೀಬೋನ್​ ಜತೆ ಡೇಟಿಂಗ್​ ನಡೆಸುತ್ತಿದ್ದರು. ಆದರೆ ಇವರು ಮದುವೆ ಆದ ಬಗ್ಗೆ ಸೂಕ್ತ ಪರಾವೆ ಸಿಗಲಿಲ್ಲ. ನಂತರ ಈ ಜೋಡಿ ಬ್ರೇಕಪ್​ ಮಾಡಿಕೊಂಡಿತು ಎಂದು ವರದಿ ಆಯಿತು.

ನಟಿ ಬಿಗ್​ ಬುಲ್ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಜತೆ ನಟಿಸಿದ್ದರು. ಇಲಿಯಾನಾ ಮೇ ತೇರಾ ಹೀರೋ, ರುಸ್ತಮ್, ಬರ್ಫಿ, ಪೋಕಿರಿ, ಬಾದ್ ಶೋ, ಪಾಗಲ್​ಪಂತಿ, ರೈಡ್, ಕಿಕ್​ನಲ್ಲಿ ನಟಿಸಿದ್ದಾರೆ.

Exit mobile version