ನವದೆಹಲಿ: ತಮಗೆ ಕಿರುಕುಳ ನೀಡಿರುವಂಥ ಎರಡು ಘಟನೆಗಳ ಬಗ್ಗೆ ಪ್ರೀತಿ ಜಿಂಟಾ ಅವರು ಏಪ್ರಿಲ್ 8ರಂದು (Preity Zinta) ತೆರೆದಿಟ್ಟಿದ್ದಾರೆ. ನಟಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಮೊದಲ ಘಟನೆಯನ್ನು ಹಂಚಿಕೊಂಡ ಪ್ರೀತಿ ಜಿಂಟಾ, ಮಗಳು ಗಿಯಾಗೆ ಬಾಯಿಯ ಪಕ್ಕದಲ್ಲಿ ಮತ್ತಿಟ್ಟಿದ್ದು ಮತ್ತು ವಿಶೇಷ ಚೇತನ ವ್ಯಕ್ತಿಯೊಬ್ಬರು ಹಣವನ್ನು ಕೇಳುವ ನೆಪದಲ್ಲಿ ನನ್ನನ್ನು ನಿರಂತರವಾಗಿ ಫಾಲೋ ಮಾಡಿ ಕಿರುಕುಳ ಕೊಟ್ಟ ಸಂಗತಿಗಳ ಕುರಿತು ಹೇಳಿಕೊಂಡಿದ್ದಾರೆ.
ಪ್ರೀತಿ ಜಿಂಟಾ ತನ್ನ ಪೋಸ್ಟ್‌ನಲ್ಲಿ ʻʻಈ ವಾರ ಎರಡು ಘಟನೆಗಳು ನನಗೆ ಕಾಡಿವೆ. ಮೊದಲನೆಯದಾಗಿ ನನ್ನ ಮಗಳು ಗಿಯಾ ಕುರಿತು. ಮಹಿಳೆಯೊಬ್ಬರು ನನ್ನ ಮಗಳ ಜತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ನೋಡಿದ್ದಾರೆ. ನಾವು ಅವರಲ್ಲಿ ಬೇಡ ಎಂದು ನಯವಾಗಿ ಕೇಳಿಕೊಂಡರು, ತನ್ನ ತೋಳುಗಳಲ್ಲಿ ಗೀಯಾಳನ್ನು ಎತ್ತಿಕೊಂಡು ಮಗಳ ಬಾಯಿಯ ಪಕ್ಕದಲ್ಲಿ ಮುತ್ತನ್ನು ನೀಡಿದ್ದಾರೆ. ಬಳಿಕ ಕ್ಯೂಟ್ ಬೇಬಿ ಎಂದು ಓಡಿ ಹೋದರು. ನಾನು ಸೆಲೆಬ್ರಿಟಿ ಅಲ್ಲದಿದ್ದರೆ ಬಹುಶಃ ಕೆಟ್ಟದಾಗಿ ಪ್ರತಿಕ್ರಿಯಿಸುತ್ತಿದ್ದೆʼʼ ಎಂದು ಬರೆದುಕೊಂಡಿದ್ದಾರೆ.
ಎರಡನೆ ಘಟನೆಯ ಬಗ್ಗೆ ನಟಿ ʻʻವಿಶೇಷ ಚೇತನ ವ್ಯಕ್ತಿಯೊಬ್ಬರು ಹಣವನ್ನು ಕೇಳುವ ನೆಪದಲ್ಲಿ ನನಗೆ ತುಂಬ ಕಿರುಕುಳ ನೀಡಿದರು. ನನಗೆ ಸಾಧ್ಯವಾದಾಗ ನಾನು ಆತನಿಗೆ ಹಣ ನೀಡಿದ್ದೇನೆ. ಈ ಬಾರಿ ಆತ ನನ್ನ ಬಳಿ ಹಣ ಕೇಳಿದಾಗ, ಕ್ಷಮಿಸಿ ನನ್ನ ಬಳಿ ಹಣವಿಲ್ಲ, ಕೇವಲ ಕ್ರೆಡಿಟ್ ಕಾರ್ಡ್ ಇದೆ ಎಂದೆ. ನನ್ನೊಂದಿಗಿದ್ದ ಮಹಿಳೆ ತನ್ನ ಪರ್ಸ್‌ನಿಂದ ಸ್ವಲ್ಪ ಹಣವನ್ನು ಕೊಟ್ಟಳು. ಅದು ಸಾಕಾಗಲಿಲ್ಲ ಎಂಬ ಕಾರಣಕ್ಕೆ ಅವನು ಅದನ್ನು ಅವಳ ಕಡೆಗೆ ಎಸೆದು, ಕಿರುಕುಳ ನೀಡಲು ಬಂದರು. ನಾವು ಹೋಗುವವರೆಗೂ ಆತ ನಮ್ಮನ್ನೇ ಫಾಲೋ ಕೂಡ ಮಾಡಿದ್ದಾನೆʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Preity Zinta: ನೆಲ ಒರೆಸಿದ ಪ್ರೀತಿ ಜಿಂಟಾ ಮಗ: ಸ್ವಚ್ಛ ಭಾರತ್ ಅಂದ್ರು ನೆಟ್ಟಿಗರು!
ʻʻಛಾಯಾಗ್ರಾಹಕರು ಈ ಘಟನೆಯನ್ನು ತಮಾಷೆಯಾಗಿ ಕಂಡು, ಸೆರೆ ಹಿಡಿದರು. ಕಾರನ್ನು ಹಿಂಬಾಲಿಸಬೇಡಿ ಅಥವಾ ನಮಗೆ ಕಿರುಕುಳ ನೀಡಬೇಡಿ ಎಂದು ಯಾರೂ ಅವನಿಗೆ ಹೇಳಲಿಲ್ಲ. ಒಂದು ವೇಳೆ ಅಪಘಾತ ನಡೆದಿದ್ದರೆ ನನ್ನ ಮೇಲೆ ಆರೋಪ ಮಾಡಲಾಗುತ್ತಿತ್ತು. ನನ್ನನ್ನು ಸೆಲೆಬ್ರಿಟಿ ಎಂದು ಪ್ರಶ್ನಿಸಲಾಗುತ್ತಿತ್ತು. ಬಾಲಿವುಡ್ ಅನ್ನು ದೂಷಿಸಲಾಗುತ್ತಿತ್ತು ಮತ್ತು ಬಹಳಷ್ಟು ನೆಗೆಟಿವಿಟಿ ಹರಡುತ್ತಿತ್ತುʼʼ.
ʻʻನಾನು ಮೊದಲು ಮನುಷ್ಯ, ನಂತರ ತಾಯಿ ಮತ್ತು ಆನಂತರ ಸೆಲೆಬ್ರಿಟಿ ಎಂದು ಜನರು ತಿಳಿದುಕೊಳ್ಳುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಯಶಸ್ಸಿಗಾಗಿ ನಾನು ನಿರಂತರವಾಗಿ ಕ್ಷಮೆಯಾಚಿಸುವ ಅಗತ್ಯವಿಲ್ಲ ಅದಕ್ಕಾಗಿ ಬೆದರಿಸುವ ಅಗತ್ಯವಿಲ್ಲ. ನಾನು ಬಯಸಿದ ರೀತಿಯಲ್ಲಿ ಬದುಕಲು ಈ ದೇಶದಲ್ಲಿ ಬೇರೆಯವರಂತೆ ನನಗೆ ಸಮಾನ ಹಕ್ಕಿದೆ. ಆದ್ದರಿಂದ ದಯವಿಟ್ಟು ನೀವು ತೀರ್ಪು ನೀಡುವ ಮೊದಲು ಯೋಚಿಸಿ ಮತ್ತು ದಯವಿಟ್ಟು ಪ್ರತಿಯೊಂದಕ್ಕೂ ಸೆಲೆಬ್ರಿಟಿಗಳನ್ನು ದೂಷಿಸುವುದನ್ನು ನಿಲ್ಲಿಸಿ. ಪ್ರತಿಯೊಂದು ಕಥೆಯ ಹಿಂದೆಯೂ ಎರಡು ಬಾರಿ ಯೋಚಿಸಬೇಕಾಗುತ್ತದೆ.
ಪ್ರೀತಿ ಜಿಂಟಾ ಪೋಸ್ಟ್
ʻʻಬಹು ಮುಖ್ಯವಾಗಿ ನನ್ನ ಮಕ್ಕಳು ಪ್ಯಾಕೇಜ್ ಡೀಲ್‌ನ ಭಾಗವಾಗಿಲ್ಲ. ನನ್ನ ಮಕ್ಕಳ ಹತ್ತಿರ ಫೋಟೊಗಳಿಗಾಗಿ ಅವರ ಬಳಿಗೆ ಬರಬೇಡಿ. ಹಾಗೆ ಸ್ಪರ್ಶಿಸಲು ಬೇಡಿ. ಮಕ್ಕಳನ್ನು ಯಾವಾಗಲೂ ಮಕ್ಕಳಂತೆ ಪರಿಗಣಿಸಬೇಕು, ಸೆಲೆಬ್ರಿಟಿಗಳಂತಲ್ಲ. ಅದೇ ರೀತಿ ಫೋಟೊಗ್ರಾಫರ್‌ಗಳು ಕೇವಲ ಬೈಟ್, ಫೋಟೊಗಳು ಹೊರತು ಪಡಿಸಿ ಸ್ವಲ್ಪ ಮಾನವೀಯತೆಯನ್ನು ಬೇಳೆಸಿಕೊಳ್ಳಿʼʼಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬಾಲಿವುಡ್ ತಾರೆಯರು ಸರಿಯಾಗಿ ಹೇಳಿದ್ದೀರಿ ಎಂದು ಹೇಳಿಕೊಂಡಿದ್ದಾರೆ. ನೆಟ್ಟಿಗರೊಬ್ಬರು ʻʻಯಾರೋ ನಿಮ್ಮ ಮಕ್ಕಳನ್ನು ಹಿಡಿದು ಚುಂಬಿಸಲು ಪ್ರಯತ್ನಿಸಿದ್ದಾರೆ ಎಂದು ಕೇಳಲು ಒಂದು ರೀತಿಯ ಭಯಾನಕವಾಗಿದೆ. ಯಾವುದೇ ಮಾನವೀಯತೆ ಉಳಿದಿಲ್ಲʼʼ ಎಂದು ಬರೆದುಕೊಂಡಿದ್ದಾರೆ, ಪ್ರೀತಿ ಜಿಂಟಾ 2016ರಲ್ಲಿ ಜೀನ್ ಗುಡೆನಾಫ್ ಅವರನ್ನು ವಿವಾಹವಾದರು. 2021 ದಂಪತಿಗೆ ಅವಳಿ ಮಕ್ಕಳು ಜನಿಸಿದವು.