Site icon Vistara News

ತಪ್ಪಾಗಿದೆ ಕ್ಷಮಿಸಿ ಎಂದ ನಟ ಪೃಥ್ವಿರಾಜ್ ಸುಕುಮಾರನ್, ಏನಿದು ‘ಕಡುವ’ ಸಿನಿಮಾ ವಿವಾದ?

ನಟ ಪೃಥ್ವಿರಾಜ್ ಸುಕುಮಾರನ್

ಕೊಚ್ಚಿ: ಪೃಥ್ವಿರಾಜ್ ಸುಕುಮಾರನ್ ಅಭಿನಯದ ಮಲಯಾಳಂ ಭಾಷೆಯ ಕಡುವ ಸಿನಿಮಾ ಸದ್ಯ ವಿವಾದವೊಂದರಲ್ಲಿ ಸಿಲುಕಿದೆ. ಚಿತ್ರದಲ್ಲಿ ವಿಕಲಚೇತನ ಮಕ್ಕಳ ಬಗ್ಗೆ ಅವಹೇಳನಕಾರಿ ಸಂಭಾಷಣೆಗಳಿವೆ ಎಂದು ಹೇಳಲಾಗಿದೆ. ಚಿತ್ರದಲ್ಲಿ ಬಳಸಿರುವ ಸಂಭಾಷಣೆಗಳಿಗೆ ವಿವರಣೆ ಕೋರಿ ನಿರ್ದೇಶಕ ಶಾಜಿ ಕೈಲಾಸ್, ನಿರ್ಮಾಪಕರಾದ ಸುಪ್ರಿಯಾ ಮೆನನ್ ಮತ್ತು ಲಿಸ್ಟಿನ್ ಸ್ಟೀಫನ್‌ಗೆ ರಾಜ್ಯ ವಿಕಲಚೇತನರ ಆಯುಕ್ತ ಎಸ್.ಎಚ್.ಪಂಚಾಪಕೇಶನ್ ನೋಟಿಸ್ ಜಾರಿ ಮಾಡಿದ್ದಾರೆ. ಪ್ರೇಕ್ಷಕರ ಆಕ್ರೋಶದ ನಂತರ, ನಟ ಪೃಥ್ವಿರಾಜ್ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದ್ದಾರೆ. ಸಿನಿಮಾ ತಯಾರಕರು ಅವಹೇಳನಕಾರಿ ದೃಶ್ಯವನ್ನು ಚಿತ್ರದಿಂದ ತೆಗೆದುಹಾಕಿದ್ದಾರೆ.

ಈ ಕುರಿತಂತೆ ಕಡುವ ಸಿನಿಮಾ ತಂಡ ಫೇಸ್‌ಬುಕ್‌ನಲ್ಲಿ ಕ್ಷಮೆಯಾಚನೆಯ ಟಿಪ್ಪಣಿಯನ್ನು ಬಿಡುಗಡೆ ಮಾಡಿದ್ದಾರೆ. ಅವಹೇಳನಕಾರಿ ದೃಶ್ಯವನ್ನು ತೆಗೆದುಹಾಕಿದ್ದಾರೆ. ನಟ ಪೃಥ್ವಿರಾಜ್ ಸುಕುಮಾರನ್ ಕೂಡ ಜನರ ಭಾವನೆಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. “ಕ್ಷಮಿಸಿ ನಮ್ಮ ತಂಡದಿಂದ ತಪ್ಪಾಗಿದೆ. ನಾವು ಅದನ್ನು ಸ್ವೀಕರಿಸುತ್ತೇವೆ, ಸರಿಪಡಿಸುತ್ತೇವೆ” ಎಂದು ಹೇಳಿದ್ದಾರೆ.

ಪೇಸ್‌ ಬುಕ್‌ ಮೂಲಕ ಕ್ಷಮೆಯಾಚಿಸಿದ ನಟ ಪೃಥ್ವಿರಾಜ್ ಸುಕುಮಾರನ್

ಕಡುವ ಸಿನಿಮಾದ ವಿವಾದಾತ್ಮಕ ದೃಶ್ಯ ಯಾವುದು?
ಕಡುವ ಸಿನಿಮಾದ ಒಂದು ದೃಶ್ಯದಲ್ಲಿ, ಪೃಥ್ವಿರಾಜ್ ಸುಕುಮಾರನ್ ಅವರು ಹೀಗೆ ಹೇಳುತ್ತಾರೆ. “ಕಡುವಕ್ಕುನ್ನೆಲ್ ಕುರುವಚನ್” ಎಂದು ಹೇಳಿದ್ದಾರೆ. ಅಂದರೆ ವಿಕಲಚೇತನ ಮಕ್ಕಳು ತಮ್ಮ ಹೆತ್ತವರ ಹಿಂದಿನ ಪಾಪಗಳ ಪರಿಣಾಮವಾಗಿ ಇಂತಹ ಸ್ಥಿತಿಗಳೊಂದಿಗೆ ಜನಿಸುತ್ತಾರೆ ಎಂದು ಹೇಳಿದ್ದಾರೆ. ಈ ಅವಹೇಳನಕಾರಿ ಸಂಭಾಷಣೆಗಾಗಿ ಚಿತ್ರತಂಡದ ವಿರುದ್ಧ ದೂರು ದಾಖಲಾಗಿದೆ. ರಾಜ್ಯ ವಿಕಲಚೇತನರ ಆಯುಕ್ತ ಎಸ್.ಎಚ್.ಪಂಚಾಪಕೇಶನ್ ಅವರು ಕಡುವ ಸಿನಿಮಾ ನಿರ್ಮಾಪಕರಿಗೆ ಈ ಬಗ್ಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಿದ್ದಾರೆ. ಸದ್ಯ ಆ ದೃಶ್ಯವನ್ನು ಸಿನಿಮಾದಿಂದ ತೆಗೆದುಹಾಕಲಾಗಿದೆ.

ಇದನ್ನೂ ಓದಿ: ಯುವ ನಟಿಗೆ ಲೈಂಗಿಕ ಕಿರುಕುಳ: ಮಲಯಾಳಂ ನಟ ವಿಜಯ್‌ ಬಾಬು ಅರೆಸ್ಟ್

Exit mobile version