Site icon Vistara News

Priya Prakash Varrier: ಕಣ್ಣು ಹೊಡೊಯೊ ಐಡಿಯಾ ಕೊಟ್ಟಿದ್ದು ನಾನೆ ಎಂದ ಪ್ರಿಯಾ; ಆಕೆಗೆ ತೈಲ ಕೊಡ್ರಪ್ಪ ಎಂದ ನಿರ್ದೇಶಕ!

Priya Prakash Varrier

ಬೆಂಗಳೂರು: ಒಮರ್ ಲುಲು ನಿರ್ದೇಶದ ಟೀನೇಜ್ ಲವ್‌ಸ್ಟೋರಿ ಸಿನಿಮಾ ‘ಒರು ಆಡಾರ್ ಲವ್ ‘(oru adaar love) ತೆಲುಗು ಹಾಗೂ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿತ್ತು. ‘ಮಾಣಿಕ್ಯ ಮಲರಾಯ ಪೂವಿ’ ಸಾಂಗ್ ಸಿನಿಮಾ ರಿಲೀಸ್‌ಗೂ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಅದಕ್ಕೆ ಕಾರಣ ನಟಿ ಪ್ರಿಯಾ ಪ್ರಕಾಶ್ ಕಣ್ಸನ್ನೆ. ಇದೀಗ ಕೇರಳ ನಟಿ ಪ್ರಿಯಾ ವಾರಿಯಾರ್ (Priya Prakash Varrier) ಮತ್ತು ನಿರ್ದೇಶಕ ಒಮರ್ ಲುಲು ನಡುವೆ ಸಖತ್‌ ವಾರ್‌ ಆಗುತ್ತಿದೆ. ಕಣ್ಸನ್ನೆ ಮಾಡುವ ದೃಶ್ಯದ ಐಡಿಯಾವನ್ನು ಕೊಟ್ಟಿದ್ದು ನಾನೇ ಎಂದು ಪ್ರಿಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ನಿರ್ದೇಶಕ ಪರೋಕ್ಷಕವಾಗಿ ನಟಿಯ ಹೇಳಿಕೆ ಸುಳ್ಳು ಎನ್ನುವಂತೆ ತಿರುಗೇಟು ನೀಡಿದ್ದಾರೆ.

ಈ ಹಿಂದಿನ ಒಂದು ಸಂದರ್ಶನದಲ್ಲಿ ಪ್ರಿಯಾ ವಾರಿಯರ್, ಕಣ್ಸನ್ನೆ ದೃಶ್ಯದ ಐಡಿಯಾ ನೀಡಿದ್ದು ಆ ಸಿನಿಮಾದ ಹೀರೊ ರೋಷನ್ ಎಂದು ಹೇಳಿಕೆ ನೀಡಿದ್ದರು. ಆ ವಿಡಿಯೊವನ್ನು ಮತ್ತು ಈಗ ನಟಿ ಹೇಳಿಕೊಂಡಿರುವ ವಿಡಿಯೊವನ್ನು ಸೇರಿಸಿ, ನಿರ್ದೇಶಕರು ಪೋಸ್ಟ್‌ ಮಾಡಿಕೊಂಡಿದ್ದಾರೆ. ʻʻಈ ಹುಡುಗಿಗೆ ಮರುವಿನ ಕಾಯಿಲೆ ಇರಬಹುದು. 5 ವರ್ಷದ ಹಿಂದೆ ಏನಾಗಿತ್ತು ಎಂದು ಮರೆತು ಹೋದಂತಿದೆ, ಹಾಗಾಗಿ ಈ ತೈಲ ಕೊಡಿ, ತಲೆಗೆ ಹಚ್ಚಿಕೊಂಡರೆ ನೆನಪಾಗುವುದುʼʼ ಎಂದು ಬರೆದುಕೊಂಡಿದ್ದಾರೆ.

2019ರಲ್ಲಿ ಬಿಡುಗಡೆಯಾಗಿದ್ದ ‘ಒರು ಆಡಾರ್ ಲವ್’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಕೆ ಕಂಡಿಲ್ಲ. ಆದರೂ ಕೂಡ ಪ್ರಿಯಾಗೆ ಸಾಕಷ್ಟು ಅವಕಾಶಗಳು ಅ ಬಂತು. ಆದರೂ ಯಾವ ಸಿನಿಮಾ ಕೂಡ ಗೆಲ್ಲಲಿಲ್ಲ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿರುವ ಪ್ರಿಯಾ, ‘ಒರು ಆಡಾರ್ ಲವ್’ ಚಿತ್ರದಲ್ಲಿ ಕಣ್ಸನ್ನೆ ಮಾಡುವ ದೃಶ್ಯದ ಐಡಿಯಾ ಕೊಟ್ಟಿದ್ದು ನಾನೇ ಎಂದು ಹೇಳಿದ್ದಾರೆ.

ಇದನ್ನೂ ಓದಿ: Odisha Train Accident : ಅಯ್ಯೊ ದುರ್ವಿಧಿ, ಟ್ರೈನ್ ಕೆಳಗೆ ಮಲಗಿದ್ದವರು ಅಲ್ಲೇ ಅಪ್ಪಚ್ಚಿ!

ರೋಷನ್ ಹಾಗೂ ಪ್ರಿಯಾ ನಡುವಿನ ಸನ್ನಿವೇಶಗಳನ್ನು ಸೇರಿಸಿ ‘ಮಾಣಿಕ್ಯ ಮಲರಾಯ ಪೂವಿ’ ಹಾಡನ್ನು ಕಟ್ಟಿಕೊಡಲಾಗಿತ್ತು. ಇದು ಸಖತ್‌ ವೈರಲ್‌ ಕೂಡ ಆಗಿತ್ತು. ಕಣ್ಸನ್ನೆ ಮೂಲಕ ಸಾಕಷ್ಟು ಅವಕಾಶಗಳನ್ನು ಪಡೆದಿದ್ದ ಪ್ರಿಯಾ ವಾರಿಯರ್, ಹೇಗೆಲ್ಲ ಸುಳ್ಳು ಹೇಳುತ್ತಾರೆ ಎನ್ನುವುದನ್ನು ಇನ್‌ಸ್ಟಾ ಮೂಲಕ ವ್ಯಕ್ತಪಡಿಸಿದ್ದಾರೆ ನಿರ್ದೇಶಕ.

ಪ್ರಿಯಾ ಸದ್ಯ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ‘ತ್ರೀ ಮಂಕೀಸ್’, ‘ಯಾರಿಯಾನ್- 2’, ‘ಲವ್ ಹ್ಯಾಕರ್ಸ್’, ‘ಶ್ರೀದೇವಿ ಬಂಗ್ಲೋ’ ಹಿಂದಿ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ.

Exit mobile version