Site icon Vistara News

Priyanka Chopra: `ಸಿಟಾಡೆಲ್’ ಫಸ್ಟ್‌ ಲುಕ್‌ ಔಟ್: ರಗಡ್‌ ಲುಕ್‌ನಲ್ಲಿ ಪ್ರಿಯಾಂಕ ಚೋಪ್ರಾ

Priyanka Chopra Citadel look

ಬೆಂಗಳೂರು: ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ನಟಿಸಿರುವ ‘ಸಿಟಾಡೆಲ್​’ (Citadel) ವೆಬ್​ ಸೀರಿಸ್​ ಮೇಲೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ಅದರ ಫಸ್ಟ್​ ಲುಕ್​ ಬಿಡುಗಡೆ ಆಗಿದ್ದು, ಗಮನ ಸೆಳೆಯುತ್ತಿದೆ. ಇದೀಗ ಪ್ರಿಯಾಂಕಾ ಸಿಟಾಡೆಲ್‌ನ ಮೊದಲ ಟೀಸರ್ ಮತ್ತು ಟ್ರೈಲರ್ ಅನ್ನು ಹಂಚಿಕೊಂಡಿದ್ದಾರೆ. ಸಿಟಾಡೆಲ್‌ನ ಮೊದಲ ನೋಟವು ರಿಚರ್ಡ್ ಮ್ಯಾಡೆನ್ ಜತೆಗೆ ಕೆಲವು ಆ್ಯಕ್ಷನ್-ಪ್ಯಾಕ್ಡ್ ದೃಶ್ಯಗಳಲ್ಲಿ ಪ್ರಿಯಾಂಕಾ ಕಂಡಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ‘ಸಿಟಾಡೆಲ್​’ ಸೀರಿಸ್​ ಸಿದ್ಧವಾಗುತ್ತಿದೆ. ಅಮೆಜಾನ್​ ಪ್ರೈಂ ವಿಡಿಯೊ ಮೂಲಕ ಇದು ಏಪ್ರಿಲ್ 28, 2023 ರಂದು ಸ್ಟ್ರೀಮ್​ ಆಗಲಿದೆ.

ಬಜೆಟ್ ಮತ್ತು ನಿರ್ಮಾಣ

ಭಾರತೀಯ ನಟಿಯರು ಆ್ಯಕ್ಷನ್-ಪ್ಯಾಕ್ಡ್ ಪಾತ್ರಗಳನ್ನು ನಿರ್ವಹಿಸುವ ಬಯಕೆಯನ್ನು ಹೆಚ್ಚಾಗಿ ವ್ಯಕ್ತಪಡಿಸುತ್ತಿರುವ ಸಮಯದಲ್ಲಿ, ರುಸ್ಸೋ ಬ್ರದರ್ಸ್ ಪ್ರಾಜೆಕ್ಟ್‌ನಲ್ಲಿ ಪ್ರಿಯಾಂಕಾ ಏಜೆಂಟ್ ಆಗಿ ನಟಿಸಿದ್ದಾರೆ. ವರದಿಗಳ ಪ್ರಕಾರ, ಈ ಸಿರೀಸ್‌ 20 ಕೋಟಿ ರೂ. ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಹಾಲಿವುಡ್‌ನ ಮೊದಲ ಲೀಡ್‌ ರೋಲ್‌

ಮುಖ್ಯವಾಹಿನಿಯ ಹಾಲಿವುಡ್ ಪ್ರಾಜೆಕ್ಟ್‌ನಲ್ಲಿ ಪ್ರಮುಖ ಪಾತ್ರವನ್ನು ಪಡೆಯಲು ಹಾಲಿವುಡ್‌ನಲ್ಲಿ 10 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದೇನೆ ಎಂದು ಪ್ರಿಯಾಂಕಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ” ಹಾಲಿವುಡ್‌ನಲ್ಲಿ ಸಹ-ನಟಿಯಾಗಿ ಇದು ನನ್ನ ಮೊದಲ ಪ್ರದರ್ಶನವಾಗಿದೆ. 10 ವರ್ಷಗಳ ನಂತರ ಇಲ್ಲಿ ಕೆಲಸ ಮಾಡಿದ ನಂತರ, ನಾನು ಅಂತಿಮವಾಗಿ ಪ್ರಮುಖ ಪಾತ್ರಗಳನ್ನು ನಿಭಾಯಿಸುತ್ತಿದ್ದೇನೆ. ಹಾಲಿವುಡ್‌ ಮೇನ್‌ಸ್ಟ್ರೀಮ್‌ಗಳಲ್ಲಿ ಪಾತ್ರಗಳನ್ನು ಪಡೆಯಲು ನನಗೆ ಬಹಳ ಸಮಯ ತೆಗೆದುಕೊಂಡಿತುʼʼಎಂದು ಪ್ರಿಯಾಂಕ ಹೇಳಿಕೊಂಡಿದ್ದರು.

ಇದನ್ನೂ ಓದಿ: Priyanka Chopra : ಪ್ರಿಯಾಂಕಾ ಚೋಪ್ರಾರ ಹಾಲಿವುಡ್ ಸಿನಿಮಾದ ಟ್ರೈಲರ್ ಬಿಡುಗಡೆ

ಸಮಾನ ವೇತನ

ಸಮಾನ ವೇತನ ಎಂಬುದು ಇದುವರೆಗೆ ಬಾಲಿವುಡ್‌ನಲ್ಲಿ ದೂರದ ಚಿಂತನೆಯಾಗಿದೆ. ಪ್ರಿಯಾಂಕಾ ಸಿಟಾಡೆಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವುದು ಮಾತ್ರವಲ್ಲದೆ, ಅವರ ಪುರುಷರಷ್ಟೇ ಸಮಾನವಾಗಿ ಸಂಭಾವನೆ ಪಡೆಯುತ್ತಿದ್ದಾರೆ. ಇದು ಮಹಿಳೆಗೆ ಒಂದು ದೊಡ್ಡ ಹೆಜ್ಜೆಯಾಗಿದೆ. ಅವರು ಇತ್ತೀಚೆಗೆ ಈ ಬಗ್ಗೆ ಮಾತನಾಡಿ, “ನಾನು 22 ವರ್ಷಗಳ ಕಾಲ ದುಡಿದಿದ್ದೇನೆ. ಕೆಲಸ ಮಾಡುತ್ತಿದ್ದೇನೆ. ಅಂತಿಮವಾಗಿ, ಸಿಟಾಡೆಲ್ ಮೂಲಕ ಸಮಾನ ವೇತನ ಪಡೆದೆ. ಆದರೆ ಇದು 22 ವರ್ಷಗಳನ್ನು ತೆಗೆದುಕೊಂಡಿತುʼʼಎಂದಿದ್ದರು.

ಮುಖ್ಯವಾಹಿನಿಯ ಪರಿಣಾಮ

ಹೆಚ್ಚಿನ ಏಷ್ಯನ್ನರಿಗೆ, ಹಾಲಿವುಡ್‌ನಲ್ಲಿ ಅಥವಾ ಸಿರೀಸ್‌ಗಳಲ್ಲಿ ಪ್ರಮುಖ ಪಾತ್ರ ವಹಿಸುವುದು ಸವಾಲಿನ ಸಂಗತಿಯಾಗಿದೆ. ದಿವಂಗತ ನಟ ಇರ್ಫಾನ್ ಅಥವಾ ಶಶಿ ಕಪೂರ್ ಕೂಡ ಹಾಲಿವುಡ್ ಚಲನಚಿತ್ರಗಳಲ್ಲಿ ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದರು. ಆದಾಗ್ಯೂ, ಮುಖ್ಯವಾಹಿನಿಯ ಹಾಲಿವುಡ್ ಸಂಸ್ಕೃತಿಯಲ್ಲಿ ಛಾಪು ಮೂಡಿಸಲು ಕೆಲವೇ ಕೆಲವರು ಸಮರ್ಥರಾಗಿದ್ದಾರೆ.

ಇದನ್ನೂ ಓದಿ: Priyanka Chopra: ಸ್ಕಿ ವಕೇಷನ್ ಮೂಡ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಕುಟುಂಬ: ಫೋಟೊ ಹಂಚಿಕೊಂಡ ಪತಿ ನಿಕ್‌!

‘ಸಿಟಾಡೆಲ್​’ ವೆಬ್​ ಸರಣಿಯನ್ನು ಭಾರತದಲ್ಲೂ ನಿರ್ಮಾಣ ಮಾಡಲಾಗುತ್ತಿದೆ. ಇಂಡಿಯನ್​ ವರ್ಷನ್​ನಲ್ಲಿ ಸಮಂತಾ ರುತ್​ ಪ್ರಭು ಅವರು ನಟಿಸುತ್ತಿದ್ದಾರೆ. ಅವರು ಕೂಡ ಭರ್ಜರಿ ಆ್ಯಕ್ಷನ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version