Site icon Vistara News

Priyanka Chopra: ಬಾಡಿ ಶೇಮ್‌ ಬಗ್ಗೆ ಬಾಯ್ಬಿಟ್ಟ ಪ್ರಿಯಾಂಕಾ: `ಸ್ಯಾಂಪಲ್‌ ಸೈಜ್‌’ ಇಲ್ಲ ಅಂದಾಗ ಪತಿ ಮುಂದೆ ಅತ್ತುಬಿಟ್ಟೆ‌ ಎಂದ ನಟಿ

Priyanka Chopra

ಬೆಂಗಳೂರು: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಇತ್ತೀಚೆಗಷ್ಟೇ ಲಾಸ್ ಏಂಜಲೀಸ್‌ನಲ್ಲಿ ನಡೆದ ಪ್ರಿ ಆಸ್ಕರ್‌ ಇವೆಂಟ್‌ನಲ್ಲಿ ಪತಿ ನಿಕ್‌ ಜತೆ ಭಾಗಿಯಾಗಿದ್ದರು. ಸಮಾರಂಭದ ಮುಂಚೆ ವ್ಯಕ್ತಿಯೊಬ್ಬರು ನಟಿಯ ಬಾಡಿ ಶೇಮ್‌ ಕುರಿತಾಗಿ ಮಾತನಾಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ಸೌತ್‌ವೆಸ್ಟ್ ಫಿಲ್ಮ್ ಫೆಸ್ಟಿವಲ್ (SXSW 2023) ಮೂಲಕ ಅಮೆಜಾನ್ ಸ್ಟುಡಿಯೋಸ್ ಮುಖ್ಯಸ್ಥ ಜೆನ್ನಿಫರ್ ಸಾಲ್ಕೆ ಅವರೊಂದಿಗೆ ನಟಿ ಮಾತನಾಡುವಾಗ ಈ ಬಗ್ಗೆ ಹೇಳಿಕೊಂಡಿದ್ದಾರೆ.

ʻʻಇಷ್ಟು ವರ್ಷಗಳ ಕಾಲ ಅನೇಕ ಬಾರಿ ಬಾಡಿ ಶೇಮ್‌ ಬಗ್ಗೆ ಅದೆಷ್ಟೋ ಮಾತುಗಳನ್ನು ಕೇಳಿದ್ದೇನೆ. ಆದರೆ ಇತ್ತೀಚೆಗೆ ವ್ಯಕ್ತಿಯೊಬ್ಬರು ನನಗೆ ʻʻಸ್ಯಾಂಪಲ್‌ ಸೈಜ್‌ʼʼಹೊಂದಿಲ್ಲ ಎಂದು ಬಾಡಿ ಶೇಮ್‌ ಮಾಡಿದರು. ಇದರಿಂದ ನನಗೆ ತುಂಬ ಬೇಸರವಾಯಿತು. ಇದರ ಬಗ್ಗೆ ಕುಟುಂಬದೊಂದಿಗೆ ಚರ್ಚಿಸಿದೆ. ನಿಕ್‌ ಮುಂದೆ ಅಳಲು ತೋಡಿಕೊಂಡೆ. ಅದೆಷ್ಟೋ ಜನ ಸ್ಯಾಂಪಲ್‌ ಸೈಜ್‌ ಹೊಂದಿರುವುದಿಲ್ಲʼʼ ಎಂದು ಹೇಳಿಕೊಂಡರು.

ಇದನ್ನೂ ಓದಿ:Priyanka Chopra: ಪ್ರಿ-ಆಸ್ಕರ್‌ ಇವೆಂಟ್‌ನಲ್ಲಿ ಕಂಗೊಳಿಸಿದ ಪ್ರಿಯಾಂಕ ಚೋಪ್ರಾ

ಇತ್ತೀಚೆಗೆ, ಪ್ರಿಯಾಂಕಾ ಲಾಸ್ ಏಂಜಲೀಸ್‌ನಲ್ಲಿ ನಡೆದ ಆಸ್ಕರ್ ಸಮಾರಂಭದಲ್ಲಿ ಎರಡನೇ ವಾರ್ಷಿಕ ಸೌತ್ ಏಷ್ಯನ್ ಎಕ್ಸಲೆನ್ಸ್ ಅನ್ನು ಸಹ-ಹೋಸ್ಟ್ ಮಾಡಿದ್ದರು. ಪ್ರಿ ಇವೆಂಟ್‌ನಲ್ಲಿ ಮಿಂಡಿ ಕಾಲಿಂಗ್, ನಿಕ್ ಜೋನಾಸ್, ಪ್ರೀತಿ ಜಿಂಟಾ, ಜೂನಿಯರ್ ಎನ್‌ಟಿಆರ್, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಅನೇಕರು ಭಾಗವಹಿಸಿದ್ದರು.

ಸದ್ಯ ನಟಿ ಹಾಲಿವುಡ್‌ ವೆಬ್‌ ಸಿರೀಸ್‌ ಸಿಟಾಡೆಲ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಏಪ್ರಿಲ್ 28ರಂದು ಪ್ರೈಮ್ ವಿಡಿಯೋದಲ್ಲಿ ಪ್ರೀಮಿಯರ್ ಆಗಲಿದೆ. ಸಿಟಾಡೆಲ್‌ ಸಿರೀಸ್‌ ಫಸ್ಟ್‌ ಲುಕ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತ್ತು. ರಿಚರ್ಡ್ ಮ್ಯಾಡೆನ್ ಜತೆಗೆ ಕೆಲವು ಆ್ಯಕ್ಷನ್-ಪ್ಯಾಕ್ಡ್ ದೃಶ್ಯಗಳಲ್ಲಿ ಪ್ರಿಯಾಂಕಾ ಕಂಡಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ‘ಸಿಟಾಡೆಲ್​’ ಸೀರಿಸ್​ ಸಿದ್ಧವಾಗುತ್ತಿದೆ. ಅಮೆಜಾನ್​ ಪ್ರೈಂ ವಿಡಿಯೊ ಮೂಲಕ ಇದು ಏಪ್ರಿಲ್ 28ರಂದು ಸ್ಟ್ರೀಮ್​ ಆಗಲಿದೆ.

Exit mobile version