ಬೆಂಗಳೂರು: ಪ್ರಿಯಾಂಕಾ ಚೋಪ್ರಾ (Priyanka Chopra) ಆಗಾಗ ಮಗಳು ಮಾಲತಿ ಮೇರಿ ಫೋಟೊವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟಿ ಮಾಲತಿ ಮೇರಿಯ ಮೊದಲ ಈಸ್ಟರ್ ಹೇಗಿತ್ತು ಎಂಬುದರ ಕುರಿತು ಫೋಟೊ ಹಂಚಿಕೊಂಡಿದ್ದಾರೆ. ಏಪ್ರಿಲ್ 9ರಂದು ಈಸ್ಟರ್‌ನಲ್ಲಿ ಮಾಲತಿ ಮುದ್ದಾಗಿ ಕಂಡಿದ್ದಾಳೆ. ಈಸ್ಟರ್ ಎಂಬುದು ಕ್ರಿಶ್ಚಿಯನ್ ಹಬ್ಬವಾಗಿದ್ದು, ಶುಭ ಶುಕ್ರವಾರದಂದು ಶಿಲುಬೆಗೇರಿಸಿದ ನಂತರ ಯೇಸುಕ್ರಿಸ್ತನ ಪುನರುತ್ಥಾನವನ್ನು ಗುರುತಿಸಲು ಆಚರಿಸಲಾಗುತ್ತದೆ.
ಪ್ರಿಯಾಂಕಾ ಚೋಪ್ರಾ ಅವರು ಮಗಳು ಮಾಲತಿ ಮೇರಿ ಅವರೊಂದಿಗಿನ ಈಸ್ಟರ್ ಆಚರಣೆಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನಟಿ ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡ ಫೋಟೋಗಳಲ್ಲಿ, ಮಾಲತಿ ಕಸ್ಟಮೈಸ್ ಮಾಡಿದ ಟಿ-ಶರ್ಟ್ ಅನ್ನು ಧರಿಸಿದ್ದು ಅದರಲ್ಲಿ ‘ಮಾಲತಿ ಮೇರಿಯ ಮೊದಲ ಈಸ್ಟರ್’ ಎಂದು ಮುದ್ರಿಸಲಾಗಿದೆ. ಇನ್ನೊಂದು ಫೋಟೊದಲ್ಲಿ ಮಾಲತಿ ಚಾಕಲೇಟ್ ತಿನ್ನುತ್ತಿರುವ ಹಾಗೆ, ಆಟವಾಡುತ್ತಿರುವುದನ್ನು ಕಾಣಬಹುದು. ಪ್ರಿಯಾಂಕಾ ಈ ಫೋಟೊಗಳಿಗೆ “ಈಸ್ಟರ್ ಸಂಡೆ ” ಎಂದು ಸರಳವಾಗಿ ಶೀರ್ಷಿಕೆ ನೀಡಿದ್ದಾರೆ.
ಮಾಲತಿ ಮೇರಿ ಬಿಳಿ ಮತ್ತು ಹಳದಿ ಬಣ್ಣದ ಉಡುಪನ್ನು ಧರಿಸಿದ್ದು, ಪುಟ್ಟ ಮಗು ತನ್ನ ತಲೆಯ ಮೇಲೆ ಹೇರ್‌ಬ್ಯಾಂಡ್ ಧರಿಸಿದೆ. ಕೆಲವು ಆಟಿಕೆಗಳೊಂದಿಗೆ ಬುಟ್ಟಿಯಲ್ಲಿ ಕುಳಿತಿರುವುದನ್ನು ನಾವು ಕಾಣಬಹುದು.
ಪ್ರಿಯಾಂಕಾ ಅಭಿನಯದ ಸಿಟಾಡೆಲ್ ವೆಬ್ ಸಿರೀಸ್ ಬಿಡುಗಡೆಗೆ ಸಜ್ಜಾಗಿದೆ. ರಿಚರ್ಡ್ ಮ್ಯಾಡೆನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ರುಸ್ಸೋ ಬ್ರದರ್ಸ್ ವೆಬ್ ಶೋ ಪ್ರೈಮ್ ವಿಡಿಯೊದಲ್ಲಿ ಏಪ್ರಿಲ್ 28 ರಂದು ಪ್ರಥಮ ಪ್ರದರ್ಶನಕ್ಕೆ ಸಿದ್ಧವಾಗಿದೆ. ನಾಡಿಯಾ ಸಿನ್ಹ್ ಆಗಿ ಪ್ರಿಯಾಂಕಾ ಮತ್ತು ಮೇಸನ್ ಕೇನ್ ಆಗಿ ರಿಚರ್ಡ್ ಮ್ಯಾಡೆನ್ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Priyanka Chopra: ಪ್ರಕೃತಿ ಸೌಂದರ್ಯ ಸವಿಯುತ್ತಿರುವ ಮಾಲತಿ ಮೇರಿ
ಪ್ರಿಯಾಂಕ ಚೋಪ್ರಾ ಪೋಸ್ಟ್
ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಜೀ ಲೆ ಜರಾದಲ್ಲಿಯೂ ನಟಿ ತೆರೆ ಹಂಚಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಫರ್ಹಾನ್ ಅಖ್ತರ್ ನಿರ್ದೇಶಿಸಿದ್ದಾರೆ.