Site icon Vistara News

Priyanka Chopra: ಪ್ರಿಯಾಂಕಾ ಚೋಪ್ರಾ ಮಗಳ ಕೈಯಲ್ಲಿ ದುಬಾರಿ ಹ್ಯಾಂಡ್‌ಬ್ಯಾಗ್‌; ಬೆಲೆ ಕೇಳಿದ್ರೆ ಅಚ್ಚರಿ ಗ್ಯಾರಂಟಿ!

Priyanka Chopra Daughter Malti Owns A Bag Worth High cost

ಬೆಂಗಳೂರು: ಪ್ರಿಯಾಂಕಾ ಚೋಪ್ರಾ (Priyanka Chopra) ಆಗಾಗ ಮಗಳು ಮಾಲತಿ ಮೇರಿಯ ಕುರಿತಾದ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಮ್ಮನ ಜತೆ ಶಾಪಿಂಗ್ ಮಾಡುವುದರಿಂದ ಹಿಡಿದು ತಂದೆ ನಿಕ್‌ ಜೋನಾಸ್‌ ಜತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ತನಕ ಫ್ಯಾನ್ಸ್‌ ಹೃದಯ ಗೆಲ್ಲುತ್ತಲೇ ಇರುತ್ತಾಳೆ ಮಾಲತಿ. ಪ್ರಿಯಾಂಕಾ ಚೋಪ್ರಾ ಜೋನಾಸ್, ಇತ್ತೀಚೆಗೆ ಮಗಳೊಂದಿಗಿನ ಫೋಟೊವೊಂದನ್ನು ಹಂಚಿಕೊಂಡಿದ್ದರು. ಚಿಕ್ಕ ಹ್ಯಾಂಡ್‌ಬ್ಯಾಗ್‌ನೊಂದಿಗೆ ಮಾಲತಿ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಳು. ಅದರ ಬೆಲೆ ಕೇಳಿ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ.

ವರದಿಯ ಪ್ರಕಾರ, ಮಾಲತಿ ಮೇರಿ ಹಿಡಿದ ಹ್ಯಾಂಡ್‌ ಬ್ಯಾಗ್‌ ಬರೋಬ್ಬರಿ 2.45 ಲಕ್ಷ ರೂ. ಅಂದರೆ ನೀವು ನಂಬಲೇ ಬೇಕು. ಹೌದು 2.45 ಲಕ್ಷ ರೂ. ಮೌಲ್ಯದ ಬಲ್ಗರಿ ಸರ್ಪೆಂಟಿ ಫಾರೆವರ್ ಕ್ರಾಸ್‌ಬಾಡಿ ಬ್ಯಾಗ್, ಕಾಫ್‌ ಲೆದರ್‌ನಿಂದ (ಕರು ಚರ್ಮದಿಂದ)ತಯಾರಿಸಲಾಗಿದೆ ಮತ್ತು ನೀಲಿ ಹಾಗೂ ಹಸಿರು ಮಿಶ್ರಿತ ಬಣ್ಣದಲ್ಲಿದೆ.

ಕೆಲವು ದಿನಗಳ ಹಿಂದೆ ಪಿಗ್ಗಿ (Priyanka Chopra) ತಮ್ಮ ತಂದೆ ಡಾ ಅಶೋಕ್ ಚೋಪ್ರಾ ಅವರ ಪುಣ್ಯತಿಥಿಯಂದು ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಲಾಸ್ ಏಂಜಲೀಸ್ ಮನೆಯಲ್ಲಿ ಪೂಜೆಯನ್ನು ಆಯೋಜಿಸಿದ್ದರು. ಮಗಳು ಮಾಲತಿ ಮೇರಿ ಕೂಡ ಪೂಜೆಯಲ್ಲಿ ಭಾಗಿಯಾಗಿದ್ದು, ಮಾಲತಿ ಲೆಹೆಂಗಾವನ್ನು ಧರಿಸಿದ್ದು ಕ್ಯೂಟ್‌ ಆಗಿ ಕಂಡಿದ್ದಳು.

ಪ್ರಿಯಾಂಕಾ ಪ್ರಸ್ತುತ ತನ್ನ ಮುಂದಿನ ಹಾಲಿವುಡ್ ಪ್ರಾಜೆಕ್ಟ್ – ʻಹೆಡ್ಸ್ ಆಫ್ ಸ್ಟೇಟ್‌ʼನ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಜಾನ್ ಸೆನಾ ಮತ್ತು ಇದ್ರಿಸ್ ಎಲ್ಬಾ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: Priyanka Chopra: ಪ್ರಿಯಾಂಕಾ ತಂದೆಯ ಪುಣ್ಯತಿಥಿಯಂದು ಭಾರತೀಯ ಉಡುಗೆಯಲ್ಲಿ ಮಿಂಚಿದ ಮಗಳು ಮಾಲತಿ ಮೇರಿ!

ಜ್ಯೂ. ಎನ್‌ಟಿಆರ್‌ ಜತೆ ಪ್ರಿಯಾಂಕಾ ಚೋಪ್ರಾ!

ಈಗಾಗಲೇ ಜ್ಯೂನಿಯರ್‌ ಎನ್‌ಟಿಆರ್‌ ʻದೇವರʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ NTR 31 ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಸಿನಿಮಾಗಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್‌ ಕೆಲವು ದಿನಗಳ ಹಿಂದೆ ಪ್ರಶಾಂತ್ ನೀಲ್ ಅವರ ಜನ್ಮದಿನಕ್ಕೆ ಶುಭಹಾರೈಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿತ್ತು. ಜ್ಯೂನಿಯರ್‌ ಎನ್‌ಟಿಆರ್‌ ಸಹೋದರ ನಂದಮೂರಿ ಕಲ್ಯಾಣ್ ರಾಮ್ ಅವರ ನಿರ್ಮಾಣ ಸಂಸ್ಥೆಯಾಗಿರುವ ಎನ್ ಟಿಆರ್ ಆರ್ಟ್ಸ್ ಹಾಗೂ ಮೈತ್ರಿ ಮೂವಿ ಮೇಕರ್ಸ್‌ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇದೀಗ ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಅವರನ್ನು ಚಿತ್ರತಂಡ ಸಂಪರ್ಕಿಸಿದೆ ಎಂದು ವರದಿಯಾಗಿದೆ.

ಜ್ಯೂನಿಯರ್‌ ಎನ್‌ಟಿಆರ್‌ NTR 31 ಚಿತ್ರದಲ್ಲಿ ನಟಿಸಲು ಪ್ರಿಯಾಂಕಾ ಚೋಪ್ರಾ ಜೋನಸ್ ಅವರನ್ನು ಸಂಪರ್ಕಿಸಲಾಗಿದೆ ಎಂಬುದು ಇತ್ತೀಚಿನ ಸುದ್ದಿ. ಜ್ಯೂನಿಯರ್‌ ಎನ್‌ಟಿಆರ್‌ ಜತೆ ಪಿಗ್ಗಿ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. NTR 31 2024ರಲ್ಲಿ ತೆರೆಗೆ ಬರಲಿದೆ. ಪ್ರಿಯಾಂಕಾ ಅವರು ಸಿಟಾಡೆಲ್‌ನಲ್ಲಿ ಈಗಾಗಲೇ ಆ್ಯಕ್ಷನ್‌ ಸಿಕ್ವೆನ್ಸ್‌ಗಳಲ್ಲಿ ನಟಿಸಿದ್ದಾರೆ. NTR 31 ಸಿನಿಮಾ ಕೂಡ ಆ್ಯಕ್ಷನ್‌ ಸಿನಿಮಾ ಆಗಿದ್ದು. ಪಾತ್ರಗಳು ಕೂಡ ರೋಮಾಂಚನಕಾರಿಯಾಗಿರಲಿದೆ ಎಂದು ಹೇಳಲಾಗುತ್ತಿದೆ.

Exit mobile version