ಬೆಂಗಳೂರು: ನ್ಯೂಯಾರ್ಕ್ನಲ್ಲಿ ʻಮೆಟ್ ಗಾಲಾʼ ಕಾರ್ಯಕ್ರಮ ಹಾಗೂ ʻಲವ್ ಅಗೇನ್ʼ ಸಿನಿಮಾದ ಮೊದಲ ಪ್ರೀಮಿಯರ್ ಶೋನಲ್ಲಿ ಭಾಗವಹಿಸಿದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಮಗಳು ಮಾಲತಿ ಮೇರಿ , ಕುಟುಂಬದೊಂದಿಗೆ ನ್ಯೂಜೆರ್ಸಿಯಲ್ಲಿದ್ದಾರೆ. ಸಿಟಾಡೆಲ್ ಸಿರೀಸ್ಗಾಗಿ ಹಲವೆಡೆ ಪ್ರಚಾರ ಕಾರ್ಯಗಳ ನಂತರ ನಟಿ ಮಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿ ಮಗಳು ಮಾಲತಿ ಆಟವಾಡುತ್ತಿರುವ ಫೋಟೊ, ಶಾಪಿಂಗ್ ಮಾಡುತ್ತಿರುವ ಫೋಟೊ, ಹೀಗೆ ಹಲವಾರು ಫೋಟೊಗಳನ್ನು ನಟಿ ಹಂಚಿಕೊಂಡಿದ್ದಾರೆ.
ತಮ್ಮ ಫೋಟೊಗಳನ್ನು ಹಂಚಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್ನಲ್ಲಿ ʻʻಶನಿವಾರದ (ಮೇ 6) ಸುಂದರʼʼ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ. ಮೊದಲ ಫೋಟೊದಲ್ಲಿ ಪ್ರಿಯಾಂಕಾ ಮಗಳಿಗೆ ಆಟಿಕೆ ಸಾಮಾನುಗಳನ್ನು ಖರೀದಿಸುವುದು ಕಾಣಬಹುದು. ಮಾಲತಿ ಮುದ್ದಾದ ಗುಲಾಬಿ ಮತ್ತು ಬಿಳಿ ಉಡುಪನ್ನು ಧರಿಸಿದ್ದರೆ, ಪ್ರಿಯಾಂಕಾ ಬೂದು ಬಣ್ಣದ ಕ್ಯಾಶುಯಲ್ ಮತ್ತು ಬಿಳಿ ಕ್ಯಾಪ್ ಧರಿಸಿದ್ದರು. ಮುಂದಿನ ಒಂದೆರಡು ಫೋಟೊಗಳಲ್ಲಿ ಮನೆಯಲ್ಲಿ ಮಾಲತಿ ಆಟವಾಡುತ್ತಿರುವುದು ಕಾಣಬಹುದು. ಕೆವಿನ್ ಮತ್ತು ಡೇನಿಯಲ್ ಜೊನಾಸ್ ಅವರ ಮಗಳು ವ್ಯಾಲೆಂಟಿನಾ ಸೇರಿದಂತೆ ಅವರ ಸ್ನೇಹಿತರು ಮತ್ತು ಸೋದರಸಂಬಂಧಿಗಳೊಂದಿಗೆ ಮಾಲತಿ ಆಟವಾಡುತ್ತಿರುವ ಫೋಟೊ ಜತೆ ನಾಯಿಗಳ ಫೋಟೊವನ್ನು ನಟಿ ಹಂಚಿಕೊಂಡಿದ್ದಾರೆ.
ಮಾಲತಿ ಮೇರಿಯನ್ನು ಜನವರಿಯಲ್ಲಿ ಮೊದಲ ಬಾರಿಗೆ ಭಾರತಕ್ಕೆ ಕರೆದುಕೊಂಡು ಬಂದಿದ್ದರು ಪ್ರಿಯಾಂಕಾ. ಪ್ರಿಯಾಂಕಾ ಮತ್ತು ನಿಕ್ ಆಗಾಗ ಮಗಳ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮುಂಬೈಗೆ ಭೇಟಿ ನೀಡಿದಾಗ ಪ್ರಿಯಾಂಕಾ ಅವರು ಮಾಲತಿಯ ಅನೇಕ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ನಟಿ ಮಾತನಾಡಿ ʻʻಮಾಲತಿ ಭಾರತಕ್ಕೆ ಬಂದದ್ದು ಇದೇ ಮೊದಲ ಬಾರಿ. ಅಜ್ಜಿಯ ಮನೆಗೆ ಹೋಗುವುದರಿಂದ ಹಿಡಿದು, ಫುಡ್, ನನ್ನ ಅಮ್ಮನ ಮನೆ ಹೀಗೆ ಎಲ್ಲವನ್ನೂ ಇಷ್ಟ ಪಟ್ಟಿದ್ದಾಳೆʼʼಎಂದು ಪಿಗ್ಗಿ ಹೇಳಿಕೊಂಡಿದ್ದರು.
ಇದನ್ನೂ ಓದಿ: Priyanka Chopra: ನಿಕ್ ಜೋನಸ್ ಎದುರಲ್ಲೇ ಪ್ರಿಯಾಂಕಾ ಚೋಪ್ರಾಗೆ ಕಿಸ್ ಕೊಟ್ಟ ನಟ ಸ್ಯಾಮ್ ಹ್ಯೂವನ್!
ಪ್ರಿಯಾಂಕಾ ಚೋಪ್ರಾ ಪೋಸ್ಟ್
ಇತ್ತೀಚೆಗೆ ನಿಕ್ ಜೋನಾಸ್ ಅವರೊಂದಿಗೆ ಮೆಟ್ ಗಾಲಾದಲ್ಲಿ ಪ್ರಿಯಾಂಕ್ ಫ್ಯಾಷನೆಬಲ್ ಲುಕ್ನಲ್ಲಿ ಕಾಣಿಸಿಕೊಂಡರು. ಸದ್ಯ ಹಾಲಿವುಡ್ ಸಿನಿಮಾ ʻಲವ್ ಅಗೇನ್ʼನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.