Site icon Vistara News

Priyanka Chopra | ತಾಯ್ನಾಡಿಗೆ ಬರುತ್ತಿದ್ದಾರೆ ಪ್ರಿಯಾಂಕಾ ಚೋಪ್ರಾ: ಕುತೂಹಲ ಹೆಚ್ಚಾಯ್ತು ಅಂದ್ರು ಪಿಗ್ಗಿ ಫ್ಯಾನ್ಸ್‌!

Priyanka Chopra

ಬೆಂಗಳೂರು: ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅಮೆರಿಕದ ಗಾಯಕ ನಿಕ್‌ ಜೋನಸ್‌ ಅವರನ್ನು ಮದುವೆ ಆದ ನಂತರ ಅಲ್ಲಿಯೇ ಸೆಟಲ್‌ ಆಗಿದ್ದಾರೆ. ಇದೀಗ ಮೂರು ವರ್ಷದ ಬಳಿಕ ಭಾರತಕ್ಕೆ ಬಂದು ಇಳಿದಿದ್ದಾರೆ. ಸರೋಗಸಿ ಮೂಲಕ ಮಗವನ್ನು ಪಡೆದ ದಂಪತಿ ಅಲ್ಲಿಯೇ ಉಳಿದಿದ್ದರು.

ಪಿಗ್ಗಿ ತಾವು ತಾಯ್ನಾಡಿಗೆ ಬರುತ್ತಿರುವ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮುಂಬೈಗೆ ಬೋರ್ಡಿಂಗ್ ಪಾಸ್‌ನ ಫೋಟೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. 3 ವರ್ಷದ ಬಳಿಕ ಮರಳಿ ತಾಯ್ನಾಡಿಗೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದ ನ್ಯೂಯಾರ್ಕ್‌ನಲ್ಲಿ ರೆಸ್ಟೋರೆಂಟ್‌ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ನಿಕ್‌ ಜೋನಸ್‌ ಜತೆ ಮದುವೆಯಾದ ಬಳಿಕ ಹಾಲಿವುಡ್‌ನಲ್ಲಿ ನಟನೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ | ‌ಜನುಮದಿನದ ಸಂಭ್ರಮದಲ್ಲಿ Desi Girl Priyanka Chopra

2018ರಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನಿಕ್‌ ಅವರನ್ನು ವರಿಸಿದರು. ಇದೀಗ ಪಿಗ್ಗಿ ಅಭಿಮಾನಿಗಳಲ್ಲಿ ಭಾರತಕ್ಕೆ ನಟಿ ಬರುತ್ತಿರುವುದು ಕೂತೂಹಲಕ್ಕೆ ಎಡೆ ಮಾಡಿದೆ. ಮೂಲಗಳ ಪ್ರಕಾರ ಯಾವುದಾದರೂ ಬಾಲಿವುಡ್‌ ಸಿನಿಮಾ ಒಪ್ಪಿಕೊಂಡಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ | ಪ್ಯಾರಿಸ್‌ನ ಬಲ್ಗೇರಿಯ ಈವೆಂಟ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ

Exit mobile version