ಬೆಂಗಳೂರು: ಬಾಲಿವುಡ್ ಮಾತ್ರವಲ್ಲ, ಹಾಲಿವುಡ್‌ನಲ್ಲೂ ಖ್ಯಾತಿ ಪಡೆದ ಪ್ರಿಯಾಂಕಾ ಚೋಪ್ರಾ (Priyanka Chopra) ಸಿನಿಮಾ ಹೊರತುಪಡಿಸಿದ ಹಲವು ಚಟುವಟಿಕೆಗಳಲ್ಲೂ ಬ್ಯುಸಿಯಾಗಿದ್ದಾರೆ. ಇಷ್ಟೆಲ್ಲ ಚಟುವಟಿಕೆಗಳ ನಡುವೆ ಅವರೀಗ ಹೊಸ ಬ್ಯುಸಿನೆಸ್ ಒಂದಕ್ಕೆ ಇಳಿದಿದ್ದಾರೆ. ಅದುವೇ ಸೋನಾ ಹೋಮ್ (Sona Home collection) ಎಂಬ ಹೊಸ ಗೃಹೋಪಯೋಗಿ ಉದ್ಯಮ.
ತಾವು ಸಹಸಂಸ್ಥಾಪಕಿಯಾಗಿ ಸೋನಾ ಹೋಮ್ ಕಲೆಕ್ಷನ್‌ನ್ನು ಆರಂಭಿಸಿದ್ದಾಗಿ ಬುಧವಾರ (ಜೂನ್ 29) ಇನ್ ಸ್ಟಾಗ್ರಾಂ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಸೋನಾ ಹೋಮ್ ಕಲೆಕ್ಷನ್ಸ್ ಗೃಹೋಪಯೋಗಿ ವಸ್ತುಗಳು ಅದರಲ್ಲೂ ಮುಖ್ಯವಾಗಿ ಟೇಬಲ್ ಲಿನೆನ್, ಬಾರ್ ಡೆಕೋರ್ ಮತ್ತಿತರ ವಸ್ತುಗಳನ್ನು ಒಳಗೊಂಡಿದೆ. ಈ ಕಲೆಕ್ಷನ್‌ನಲ್ಲಿರುವ ಎಲ್ಲ ವಸ್ತುಗಳು ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವ ಪರಿಕರಗಳಾಗಿರುವುದು ವಿಶೇಷ.
ಇದನ್ನೂ ಓದಿ | Priyanka chopra | ದ್ವೀಪದಲ್ಲಿ ಹಾಲಿಡೇ ಮಜಾ ಮಾಡುತ್ತಿರುವ ಪಿಗ್ಗಿ, ನಿಕ್
ʼಭಾರತೀಯ ಸಂಸ್ಕೃತಿಯು ಆತಿಥ್ಯಕ್ಕೆ ಹೆಸರುವಾಸಿ. ಈ ಸೋನಾ ಹೋಮ್ ಸಮುದಾಯ ಮತ್ತು ಜನರನ್ನು ಒಂದುಗೂಡಿಸುವ ಧ್ಯೇಯವನ್ನು ಹೊಂದಿದೆʼ ಎಂದು ಪಿಗ್ಗಿ ಹೇಳಿಕೊಂಡಿದ್ದಾರೆ. ಪೋಸ್ಟ್ ಮಾಡಿದ ವಿಡಿಯೊದಲ್ಲಿ ಸೋನಾ ಹೋಮ್ ಸಂಬಂಧಿತ ವಸ್ತುಗಳನ್ನು ತೋರಿಸಿದ್ದಾರೆ.
ʼನಾವು ಯಾವುದಾದರೂ ಪಾರ್ಟಿ ಇನ್ನಿತರ ಸಮಾರಂಭಗಳು ತುಂಬಾ ಮಜವಾಗಿರಬೇಕು ಎಂದು ಬಯಸುತ್ತೇವೆ. ನಮ್ಮ ಸ್ನೇಹಿತರು ಮತ್ತು ಕುಟುಂಬದವರ ಜತೆ ಸೇರಿ ನಾವು ಏನನ್ನೇ ಮಾಡುತ್ತಿದ್ದರೂ ಅದು ಸಂಸ್ಕೃತಿ ಮತ್ತು ಮನೆಗೆ ಸಂಬಂಧಿಸಿರಬೇಕು. ಅದಕ್ಕಿಂತ ಹಿತವಾದುದು ಬೇರೇನೂ ಇಲ್ಲʼ ಎಂದು ಸೋನಾ ಹೋಮ್ ಸಹ ಸಂಸ್ಥಾಪಕ ಮನೀಶ್ ಗೋಯಲ್ ಹೇಳಿದ್ದಾರೆ.
ʻಭಾರತದಿಂದ ಬಂದ ನನಗೆ ಅಮೆರಿಕ ಎರಡನೇ ಮನೆ ಆಯಿತು. ಇಲ್ಲಿ ನನಗೆ ಕುಟುಂಬವಿದೆ, ಸ್ನೇಹಿತರಿದ್ದಾರೆ. ಇದು ನಾನು ಆಯ್ಕೆ ಮಾಡಿಕೊಂಡಿರುವ ದೇಶ ಹಾಗೂ ಕುಟುಂಬ. ಭಾರತದಿಂದ ಬಂದು ಅಮೆರಿಕವನ್ನು ನನ್ನ ಮನೆಯಾಗಿಸಿಕೊಳ್ಳುವುದು ಸವಾಲಾಗಿತ್ತು. ಈಗ ಹೊಂದಿಕೊಂಡಿದ್ದೇನೆ. ಈಗ ನಾನು ಮಾಡುವ ಪ್ರತಿಯೊಂದು ಪ್ರಯತ್ನದಲ್ಲೂ ಭಾರತವನ್ನು, ಭಾರತೀಯತೆಯನ್ನು ಬಿಂಬಿಸುವ ಪ್ರಯತ್ನ ಮಾಡುತ್ತೇನೆ. ಭಾರತೀಯ ಸಂಸ್ಕೃತಿಯು ಆತಿಥ್ಯಕ್ಕೆ ಹೆಸರುವಾಸಿ. ಇದು ಸಮುದಾಯ ಮತ್ತು ಜನರನ್ನು ಒಂದುಗೂಡಿಸುವುದಕ್ಕೆ ಸಹಾಯಕಾರಿಯಾಗಿದೆ. ಈ ಸೋನಾ ಹೋಮ್ ನಿಂದ ಭಾರತ ದೇಶದ ಸಂಸ್ಕೃತಿಯನ್ನು ಮತ್ತು ಪರಂಪರೆಯನ್ನು ತಲುಪಲು ಸಾಧ್ಯವಾಗುತ್ತದೆ. ನಿಮ್ಮೆಲ್ಲರಿಗೂ ಸೋನಾ ಹೋಮ್ ಅನ್ನು ಪರಿಚಯಿಸಲು ನನಗೆ ಹಮ್ಮೆಯಾಗುತ್ತಿದೆ.ʼ ಎಂದು ಬರೆದುಕೊಂಡಿದ್ದಾರೆ ಪ್ರಿಯಾಂಕಾ ಚೋಪ್ರಾ.
ಸೋನಾ ಹೋಮ್‌ನಲ್ಲಿ 2 ಪ್ರಕಾರಗಳ ಸಂಗ್ರಹಗಳಿವೆ. ʻಸುಲ್ತಾನ್ ಗಾರ್ಡನ್ʼ ಮತ್ತು ʻಮನ್ನಾ ಕಲೆಕ್ಷನ್ʼ. ಪನ್ನಾ ಟೇಬಲ್ ರನ್ನರ್ ಬೆಲೆ 14,043 ರೂ, ಆಯಾತಕಾರದ ಪನ್ನಾ ಟೇಬಲ್ ಕ್ಲಾತ್ 30,612 ರೂ, ಪನ್ನಾ ಕೋಸ್ಟರ್ ಸೆಟ್‌ಗೆ 4,576 ರೂ.
ಇದನ್ನೂ ಓದಿ | ಪ್ಯಾರಿಸ್‌ನ ಬಲ್ಗೇರಿಯ ಈವೆಂಟ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ
ಒಂದು ಸುಲ್ತಾನ್ ಗಾರ್ಡ್‌ನ್ ಡಿನ್ನರ್ ಪ್ಲೇಟ್ 4,733 ರೂ, ಸರ್ವಿಂಗ್ ಬೌಲ್ 7,732 ರೂ, ಒಂದು ಟೀ ಕಪ್ ಮತ್ತು ಒಂದು ಸಾಸರ್ ಬೆಲೆ 5,365 ರೂ. ಮತ್ತು ಒಂದು ಮಗ್ ಬೆಲೆ 3,471 ರೂ ಆಗಿವೆ. ಸೋನಾ ಹೋಮ್ ವೆಬ್‌ಸೈಟ್‌ನಲ್ಲಿ ವಸ್ತುಗಳ ಬೆಲೆಗಳ ಬಗ್ಗೆ ಮಾಹಿತಿ ಲಭ್ಯವಾಗಿವೆ. ಬೆಲೆಗಳ ಬಗ್ಗೆ ಇದೀಗ ನೆಟ್ಟಿಗರು ವಸ್ತುಗಳು ತುಂಬಾ ದುಬಾರಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಎಲ್ಲೆಲ್ಲೂ ಪ್ರಿಯಾಂಕಾ ಭಾರತೀಯತೆ
ಕಳೆದ ವರ್ಷವಷ್ಟೆ ಪ್ರಿಯಾಂಕಾ ಚೋಪ್ರಾ ಅಮೆರಿಕದಲ್ಲಿ ಸೋನಾ ಎಂಬ ರೆಸ್ಟೋರೆಂಟ್ ಆರಂಭಿಸಿದ್ದರು. ಈ ಹಿಂದೆ ಗೃಹ ಪ್ರವೇಶದ ಸಂಭ್ರಮದಲ್ಲಿ ಪ್ರಿಯಾಂಕಾ ಸೆಲ್ವಾರ್ನಲ್ಲಿದ್ದು, ತಲೆ ಮೇಲೆ ಕಳಸವನ್ನು ಹೊತ್ತುಕೊಂಡು ಮನೆ ಒಳಗೆ ಹೋಗುತ್ತಿದ್ದರೆ, ಹಿಂದೆ ನಿಕ್ ಸಹ ಕೈಯಲ್ಲಿ ಪೂಜೆಯ ತಟ್ಟೆ ಹಿಡಿದು ಕಾಣಿಸಿಕೊಂಡಿದ್ದರು. ಇದನ್ನು ನೋಡಿದ ನೆಟ್ಟಿಗರು ಪ್ರಿಯಾಂಕಾ ವಿದೇಶದಲ್ಲಿದ್ದರೂ ಭಾರತೀಯ ಸಂಪ್ರದಾಯವನ್ನು ಮರೆತಿಲ್ಲ ಎಂದು ಸೋಷಿಯಲ್ ಮೀಡಿಯಾ ಮೂಲಕ ಮಾತನಾಡಿಕೊಳ್ಳುತ್ತಿದ್ದರು.
ಇದನ್ನೂ ಓದಿ | 18 ವರ್ಷವಿದ್ದಾಗ ಹೇಗಿದ್ದರು ಪಿಗ್ಗಿ? Memories ಶೇರ್ ಮಾಡಿಕೊಂಡ ಪ್ರಿಯಾಂಕ ಚೋಪ್ರಾ