ಬೆಂಗಳೂರು: ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಅವರ ಮನೆಯಲ್ಲಿ ಸಂಭ್ರಮ ಕಳೆ ಕಟ್ಟಿದೆ. ಪ್ರಿಯಾಂಕ ಚೋಪ್ರಾ (Priyanka Chopra) ತಮ್ಮ ಸಹೋದರ ಸಿದ್ಧಾರ್ಥ ಅವರ ಎಂಗೇಜ್‌ಮೆಂಟ್ ಸಂಭ್ರಮದಲ್ಲಿದ್ದಾರೆ. ಸಿದ್ಧಾರ್ಥ ತಮ್ಮ ಬಹುಕಾಲದ ಗೆಳತಿ ನೀಲಂ ಉಪಾಧ್ಯಾಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಂಭ್ರಮದಲ್ಲಿ ಪ್ರಿಯಾಂಕ ಹಾಗೂ ನಿಕ್ ದಂಪತಿಗಳು ಸಖತ್ ಆಗಿ ಮಿಂಚಿದ್ದಾರೆ.
ಸಿದ್ಧಾರ್ಥ ಹಾಗೂ ನೀಲಂ ಎಂಗೇಜ್ ಮೆಂಟ್ ನಲ್ಲಿ ಕುಟುಂಬದ ಸದಸ್ಯರು ಹಾಗೂ ಒಂದಷ್ಟು ಆತ್ಮೀಯ ಸ್ನೇಹಿತರು ಪಾಲ್ಗೊಂಡಿದ್ದರು. ಸಿದ್ದಾರ್ಥ ಹಾಗೂ ನೀಲಂ ಜೋಡಿಯ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ಈ ಸಂದರ್ಭದಲ್ಲಿ ಪ್ರಿಯಾಂಕ ದಂಪತಿಗಳ ಜೊತೆ ತಾಯಿ ಮಧು ಚೋಪ್ರಾ, ಸೋದರ ಸಂಬಂಧಿ ಮನ್ನಾರ್ ಚೋಪ್ರಾ, ಆತ್ಮೀಯ ಸ್ನೇಹಿತೆ ತಮನ್ನಾ ದತ್ ಪಾಲ್ಗೊಂಡಿದ್ದರು. ಇನ್ನು ಸಾಂಪ್ರಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಪ್ರಿಯಾಂಕ ಕುಟುಂಬದ ಫೋಟೊ ಸಖತ್ ಮೆಚ್ಚುಗೆಯನ್ನು ಪಡೆದುಕೊಂಡಿದೆ.
ಇನ್ನು ನಿಶ್ಚಿತಾರ್ಥ ಮಾಡಿಕೊಂಡ ಸಿದ್ದಾರ್ಥ ಹಾಗೂ ನೀಲಂ ಉಪಾಧ್ಯಾಯ ಪ್ರಿಯಾಂಕ ಚೋಪ್ರಾ ಮಗಳು ಮಾಲ್ತಿಯನ್ನು ಮುದ್ದುಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿರುವ ಪ್ರಿಯಾಂಕ ನಥಿಂಗ್ ವಿಥೌಟ್ ಫ್ಯಾಮಿಲಿ ಎಂಬ ಕ್ಯಾಪ್ಷನ್ ಹಾಕಿ ಸಂಭ್ರಮಪಟ್ಟಿದ್ದಾರೆ.
“ಜಸ್ಟ್ ರೋಕಾಫೈಡ್” ಎಂದ ಸಿದ್ಧಾರ್ಥ-ನೀಲಂ ಜೋಡಿ!
ಹಾಗೇ ಸಿದ್ಧಾರ್ಥ ಹಾಗೂ ನೀಲಂ ಉಪಾಧ್ಯಾಯ ತಮ್ಮ ಎಂಗೇಜ್ ಮೆಂಟ್ ಕುರಿತು ಜಂಟಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. “ಜಸ್ಟ್ ರೋಕಾಫೈಡ್” ಎಂದು ಬರೆದ ಕೇಕ್ ಜೊತೆ ತಮ್ಮ ಫೋಟೊವನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ. ಇನ್ನು ಇದಕ್ಕೆ ನಟಿ ಪ್ರಿಯಾಂಕ ಕೂಡ ಖುಷಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಕಳೆದ ತಿಂಗಳು ಮದುವೆಯಾದ ಪ್ರಿಯಾಂಕ ಸೋದರ ಸಂಬಂಧಿ ಮೀರಾ ಚೋಪ್ರಾ “ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೆ ಇದು ತುಂಬಾ ಒಳ್ಳೆಯ ಸುದ್ದಿ ತುಂಬಾ ಸಂತೋಷವಾಗಿದೆ. ಅಭಿನಂದನೆಗಳು ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೇ ಪ್ರಿಯಾಂಕ ಚೋಪ್ರಾ ಅವರ ಆತ್ಮೀಯ ಸ್ನೇಹಿತೆ ತಮನ್ನಾ ದತ್ ಕೂಡ ಸಿದ್ಧಾರ್ಥ ಹಾಗೂ ನೀಲಂ ಜೋಡಿಗೆ ಶುಭ ಹಾರೈಸಿದ್ದಾರೆ.
ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ ಪ್ರಿಯಾಂಕ
ಎಂಗೇಂಜ್ ಮೆಂಟ್ ಸಂದರ್ಭದಲ್ಲಿ ಸಿದ್ಧಾರ್ಥ ಫ್ಲೋರಲ್ ಕುರ್ತಾ ಹಾಗೂ ಸ್ಲೀವ್ ಲೆಸ್ ಜಾಕೆಟ್ ನೊಂದಿಗೆ ಕಂಗೊಳಿಸಿದರೆ ನೀಲಂ ಉಪಾಧ್ಯಾಯ ನೇರಳೆ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದಾರೆ.ಇನ್ನು ಪ್ರಿಯಾಂಕ ಚೋಪ್ರಾ ಕೆಂಪು ಬಣ್ಣದ ಸೀರೆ ಹಾಗೂ ಅದಕ್ಕೆ ಮ್ಯಾಚ್ ಆಗುವ ಸ್ಲೀವ್ ಲೆಸ್ ಬ್ಲೌಸ್ ಧರಿಸಿದರೆ ನಿಕ್ ಬಿಳಿ ಬಣ್ಣದ ಕುರ್ತಾ ಪೈಜಾಮಾ ಸೆಟ್ ಗೆ ಮೋದಿ ಜಾಕೆಟ್ ಧರಿಸಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮುಂಬೈ ಕರಾವಳಿ ರಸ್ತೆಯ ಸುರಂಗ ಮಾರ್ಗ ‘ಅದ್ಭುತ’ ಎಂದ ಬಚ್ಚನ್
ನೀಲಂ ಉಪಾಧ್ಯಾಯ ಹಾಗೂ ಸಿದ್ಧಾರ್ಥ ನಡುವೆ ಏನೋ ಇದೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿತ್ತು. ಇವರಿಬ್ಬರೂ 2019ರಲ್ಲಿ ಅಂಬಾನಿ ಕುಟುಂಬ ಆಯೋಜಿಸಿರುವ ಗಣೇಶ ಪೂಜೆಯ ಸಂದರ್ಭದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು.ಇದಾದ ಬಳಿಕ 2020ರಲ್ಲಿ ಹೋಳಿ ಕಾರ್ಯಕ್ರಮದಲ್ಲಿಯೂ ಇಬ್ಬರೂ ಕಾಣಿಸಿಕೊಂಡಿದ್ದರು.
ಇಶಿತಾ ಕುಮಾರ್ ಜೊತೆ ಬ್ರೇಕಪ್!
ಸಿದ್ಧಾರ್ಥ್ ಚೋಪ್ರಾ 2019 ಫೆಬ್ರವರಿಯಲ್ಲಿ ಇಶಿತಾ ಕುಮಾರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.ಈ ಕಾರ್ಯಕ್ರಮದಲ್ಲಿ ಪ್ರಿಯಾಂಕ ಹಾಗೂ ನಿಕ್ ದಂಪತಿಗಳು ಪಾಲ್ಗೊಂಡಿದ್ದರು. ಆದರೆ ಕೆಲವೇ ತಿಂಗಳುಗಳಲ್ಲಿ, ಇದು ಮುರಿದು ಬಿದ್ದಿತ್ತು.