ಬೆಂಗಳೂರು: ಪ್ರಿಯಾಂಕಾ ಚೋಪ್ರಾ (Priyanka Chopra) ಅವರು 16ನೇ ವಯಸ್ಸಿನಲ್ಲಿ ಅಮೆರಿಕದಿಂದ ಭಾರತಕ್ಕೆ ಮರಳಿ ಬಂದಾಗ ಅವರ ತಂದೆ ಅಶೋಕ್ ಚೋಪ್ರಾ ಅವರು ಕಿಟಕಿಗೆ ಸರಳು ಹಾಕಿಸಿದ್ದರಂತೆ. ಮಗಳನ್ನು ಹುಡುಗರು ಹಿಂಬಾಲಿಸುತ್ತಿದ್ದ ಕಾರಣ ಈ ರೀತಿ ಮಾಡಿದ್ದರು ಎಂದು ಪ್ರಿಯಾಂಕಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಒಂದು ದಿನ ರಾತ್ರಿ ನಟಿಯನ್ನು ಹಿಂಬಾಲಿಸಿಕೊಂಡು ಬಂದ ಹುಡುಗರ ಪೈಕಿ ಒಬ್ಬ ಪ್ರಿಯಾಂಕಾ ಚೋಪ್ರಾ ಮನೆಯ ಬಾಲ್ಕನಿವರೆಗೂ ಕಾಲಿಟ್ಟಿದ್ದನಂತೆ. ಆತನನ್ನು ನೋಡಿ ಪ್ರಿಯಾಂಕಾ ಕಿರುಚಿಕೊಂಡಿದ್ದರು. ಬಳಿಕ ಅಶೋಕ್ ಚೋಪ್ರಾ ಅವರು ಮನೆಯ ಕಿಟಕಿಗೆ ಸರಳು ಹಾಕಿಸಿದ್ದರು.
ಇದಾದ ನಂತರ ಮಗಳಿಗೆ ಹಲವು ರೂಲ್ಸ್‌ಗಳನ್ನು ಮಾಡಿದ್ದರಂತೆ. ಪ್ರಿಯಾಂಕಾ ಅವರಿಗೆ ಲೂಸ್ ಬಟ್ಟೆಗಳನ್ನು ಅಥವಾ ಭಾರತೀಯ ಬಟ್ಟೆಗಳನ್ನು ಧರಿಸಬೇಕೆಂದು ಹೇಳಿದ್ದರು. “ತನ್ನ ಬಳಿ ಯಾವುದೇ ಲೂಸ್ ಬಟ್ಟೆ ಇಲ್ಲದ ಕಾರಣ ತಂದೆಯ ನೆಚ್ಚಿನ ಶರ್ಟ್‌ಗಳನ್ನು ಧರಿಸಿ, ಅವುಗಳನ್ನು ಕಟ್ಟಿಕೊಂಡು, ಬಟನ್‌ಗಳನ್ನು ತೆರೆದು ಜೀನ್ಸ್‌ನೊಂದಿಗೆ ಧರಿಸುತ್ತಿದ್ದೆ” ಎಂದು ನಟಿ ನೆನಪಿಸಿಕೊಂಡರು.
ದಿ ಹೊವಾರ್ಡ್ ಸ್ಟರ್ನ್ ಶೋನಲ್ಲಿ ಮಾತನಾಡಿದ ಪ್ರಿಯಾಂಕಾ, “‘ನನ್ನ ತಂದೆ 12 ವರ್ಷದ ಮಗಳನ್ನು ಅಮೆರಿಕಾಗೆ ಕಳುಹಿಸಿದ್ದರು. ಭಾರತಕ್ಕೆ ಮರಳಿದಾಗ ನನ್ನನ್ನು ಹುಡುಗರು ಹಿಂಬಾಲಿಸುತ್ತಿದ್ದರು. ಮನೆಯವರೆಗೂ ಬರುತ್ತಿದ್ದರು. ಅದರಲ್ಲಿ ಒಬ್ಬ ರಾತ್ರಿ ನನ್ನ ಮನೆಯ ಬಾಲ್ಕನಿಗೆ ಹಾರಿದ್ದ. ಆಗ ನನ್ನ ತಂದೆ, ನೀನು ಭಾರತದ ಉಡುಗೆ ಹಾಕಿದ್ದರೆ ಏನೂ ಆಗುತ್ತಿರಲಿಲ್ಲ ಎಂದು ಹೇಳಿದರು. ನನ್ನನ್ನು ಎಲ್ಲಾ ಕಡೆ ಕರೆದುಕೊಂಡು ಹೋಗಲು ಒಬ್ಬ ಡ್ರೈವರ್ ಇದ್ದರು. ಬಳಿಕ ನನ್ನ ವೃತ್ತಿ ಜೀವನ ಪ್ರಾರಂಭವಾಯಿತು’ ಎಂದು ನೆನಪಿಸಿಕೊಂಡಿದ್ದಾರೆ. “ನನ್ನ ಜೀವನದ ಆ ಎರಡು ವರ್ಷಗಳು ತುಂಬಾ ವ್ಯರ್ಥವಾಗಿತ್ತು. ವಿಶೇಷವಾಗಿ ನಾನು ಭಾರತಕ್ಕೆ ಹಿಂತಿರುಗಿದಾಗʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Priyanka Chopra : ಮಗಳಿಗೆ ಪ್ರಿಯಾಂಕಾ-ನಿಕ್ ನೀಡಿದ ಸರ್‌ಪ್ರೈಸ್ ಏನು? ಮಾಲತಿ ಫುಲ್ ಖುಷ್!
ಇದನ್ನೂ ಓದಿ: Met Gala 2023: ರ‍್ಯಾಪರ್-ಸಿಂಗರ್ ಡೋಜಾ ಕ್ಯಾಟ್‌ರನ್ನು ಮಿಮಿಕ್ರಿ ಮಾಡಿದ ನಿಕ್-ಪ್ರಿಯಾಂಕಾ ಚೋಪ್ರಾ: ವಿಡಿಯೊ ವೈರಲ್
ಅಮೆರಿಕದ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ‘ಮೆಟ್ ಗಾಲಾ 2023’ (Met Gala 2023) ಅದ್ಧೂರಿಯಾಗಿ ನೆರವೇರಿದೆ. ಮೆಟ್ ಗಾಲಾ ವೇದಿಕೆ ಮೇಲೆ ಪ್ರಿಯಾಂಕಾ ಚೋಪ್ರಾ ನಾಲ್ಕನೇ ಬಾರಿ ಕಾಣಿಸಿಕೊಂಡಿದ್ದಾರೆ.