ಬೆಂಗಳೂರು: ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅದೆಷ್ಟೋ ಬಾರಿ ಬಾಲಿವುಡ್ ಸಿನಿರಂಗದ ಬಗ್ಗೆ ಬೋಲ್ಡ್ ಆಗಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈಗ ಹಿಂದಿ ನಿರ್ದೇಶಕನೊಬ್ಬನ ಬಗ್ಗೆ ಹಳೆಯ ಘಟನೆಯನ್ನು ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ, ಪ್ರಿಯಾಂಕಾ ಮಾತನಾಡಿ ‘ಶೂಟಿಂಗ್ ಸೆಟ್ನಲ್ಲಿ ಸೆಡ್ಯೂಸ್ (ಉನ್ಮಾದಗೊಳಿಸುವ) ದೃಶ್ಯವೊಂದರಲ್ಲಿ ನಿರ್ದೇಶಕರು ನನ್ನ ಸ್ಟೈಲಿಶ್‌ಗೆ, ನನ್ನ ಒಳ ಉಡುಪು ಕಾಣಿಸುವಂತೆ ಮಾಡು ಎಂದು ಹೇಳಿದ್ದರು ಎಂಬ ಸಂಗತಿಯನ್ನು ಹೇಳಿಕೊಂಡಿದ್ದಾರೆ.
ನಟಿ ಈ ಬಗ್ಗೆ ಮಾತನಾಡಿ ʻʻ2002 ಅಥವಾ 2003ರಲ್ಲಿ ನಡೆದ ಘಟನೆ ಇದು. ಆಗಷ್ಟೇ ನಾನು ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದೆ. ನಾನು ಸೆಡ್ಯೂಸಸಿಂಗ್ ದೃಶ್ಯವೊಂದನ್ನು ಮಾಡಬೇಕಿತ್ತು. ಆಗ ನಾನು ಒಂದೊಂದೆ ಬಟ್ಟೆಗಳನ್ನು ಬಿಚ್ಚಿಡಬೇಕಿತ್ತು. ಆ ಸಮಯದಲ್ಲಿ ನಿರ್ದೇಶಕರು ನನ್ನ ಸ್ಟೈಲಿಶ್‌ಗೆ, ಅವರ(ಪ್ರಿಯಾಂಕಾ) ಒಳ ಉಡುಪು ತೋರಬೇಕೆಂದು ಹೇಳಿದ್ದರು. ಇಲ್ಲದಿದ್ದರೆ ಸಿನಿಮಾ ಯಾರು ನೋಡಲು ಬರುತ್ತಾರೆʼʼ ಎಂದು ಹೇಳಿದ್ದರು. ನಿರ್ದೇಶಕರು ಇದನ್ನು ನನಗೆ ನೇರವಾಗಿ ಹೇಳಲಿಲ್ಲ. ನನ್ನ ಮುಂದೆ ಇದ್ದ ಸ್ಟೈಲಿಸ್ಟ್‌ಗೆ ಈ ಮಾತು ಹೇಳಿದರು. ಅದೊಂದು ಅಮಾನವೀಯ ಕ್ಷಣವಾಗಿತ್ತು. ಎರಡು ದಿನ ಕೆಲಸ ಮಾಡಿದ ನಂತರ ಸಿನಿಮಾದಿಂದ ನಾನು ಹೊರನಡೆದೆʼʼ ಎಂದರು.
ಇದನ್ನೂ ಓದಿ: Priyanka Chopra : ಬಾಲಿವುಡ್ನ ಪೊಲಿಟಿಕ್ಸ್ಗೆ ಹೆದರಿ ಹಾಲಿವುಡ್ಗೆ ಓಡಿದ್ದೆ ಎಂದ ನಟಿ ಪ್ರಿಯಾಂಕ ಚೋಪ್ರಾ
ನಿರ್ದೇಶಕ ಯಾರು ಎಂಬುದನ್ನು ನಟಿ ಬಹಿರಂಗಪಡಿಸಿಲ್ಲ. ಬಾಲಿವುಡ್‌ಗೆ ಮರಳುವ ಯಾವುದೇ ಯೋಚನೆ ಅವರಿಗಿಲ್ಲ. ಹಿಂದಿ ಸಿನಿಮಾ ಮಾಡುವಾಗ ತಮ್ಮ ಹಳೆಯ ದಿನಗಳನ್ನು ನಟಿ ಬಿಚ್ಚಿಟ್ಟಿದ್ದಾರೆ.
ಈಗಾಗಲೇ ಪಿಗಿ, ಸಿಟಾಡೆಲ್ ಸಿರೀಸ್‌ನಿಂದ ಸಖತ್ ಸುದ್ದಿಯಲ್ಲಿದ್ದಾರೆ. ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಫರ್ಹಾನ್ ಅಖ್ತರ್ ಅವರ ʻಜೀ ಲೆ ಜರಾʼದಲ್ಲಿ ಕಾಣಿಸಿಕೊಳ್ಳಲಿದ್ದಾರೆ.