ಬೆಂಗಳೂರು: ಪತಿ ನಿಕ್ ಜೋನಸ್ ಮತ್ತು ಕುಟುಂಬದವರ ಜತೆ ಲಾಸ್ ಏಂಜಲೀಸ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ ಚೋಪ್ರಾ (Priyanka Chopra), ಮಗಳು ಮಾಲತಿಯನ್ನು ಪರಿಚಯಿಸಿದರು. ಪ್ರಿಯಾಂಕಾ ಚೋಪ್ರಾ ಇದೇ ಮೊದಲ ಬಾರಿಗೆ ತಮ್ಮ ಮಗಳು ಮಾಲತಿ ಮೇರಿ ಚೋಪ್ರಾ ಮುಖವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
‘ದಿನಗಳು ಹೀಗೇ ಇರಲಿ’ ಎಂದು ಕ್ಯಾಪ್ಷನ್‌ನಲ್ಲಿ ಪ್ರಿಯಾಂಕಾ ಬರೆದಿದ್ದಾರೆ. ಕಳೆದ ವರ್ಷ ಬಾಡಿಗೆ ತಾಯ್ತನದ ಮೂಲಕ ಪ್ರಿಯಾಂಕಾ ಚೋಪ್ರಾ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಬಾಡಿಗೆ ತಾಯ್ತನದಿಂದಾಗಿ ಅವರು ಸಾಕಷ್ಟು ಟ್ರೋಲ್‌ಗೆ ಕೂಡ ಒಳಗಾಗಿದ್ದರು. ಇದೀಗ ಪ್ರಿಯಾಂಕ ಅವರ ʻʻಮಗಳು ತುಂಬಾ ಮುದ್ದಾಗಿದ್ದಾಳೆ ಮತ್ತು ಸುಂದರವಾಗಿದ್ದಾಳೆʼʼಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ‘ದೇಸಿ ಹುಡುಗಿ ಮತ್ತು ಆಮದು ಮಾಡಿಕೊಂಡ ಮಗು’ ಎಂದು ಕೆಲವರು ಟೀಕೆ ಮಾಡಿದ್ದರೆ, ಮಗಳು ಆಮದು ಮಾಡಿಕೊಂಡಿದ್ದಲ್ಲ, ಅಪ್ಪನನ್ನು ಮಾಡಿಕೊಂಡಿದ್ದು ಎಂದು ಕೆಲವರು ಪ್ರಿಯಾಂಕಾ ಅವರ ಕಾಲೆಳೆದಿದ್ದಾರೆ.
ಪ್ರಿಯಾಂಕ ಚೋಪ್ರಾ ಪೋಸ್ಟ್
ಇದನ್ನೂ ಓದಿ: Priyanka Chopra : ಪ್ರಿಯಾಂಕಾ ಚೋಪ್ರಾರ ಹಾಲಿವುಡ್ ಸಿನಿಮಾದ ಟ್ರೈಲರ್ ಬಿಡುಗಡೆ
ಕೆಲವು ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದಿದ್ದಾರೆ. 2018ರಲ್ಲಿ ಮದುವೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ 2022ರ ಜನವರಿಯಲ್ಲಿ ತಮಗೆ ಹೆಣ್ಣುಮಗು ಹುಟ್ಟಿದ್ದಾಗಿ ತಿಳಿಸಿದ್ದರು. ಹಾಗೇ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾಗಿಯೂ ಹೇಳಿದ್ದರು. ಈ ಒಂದು ವರ್ಷದಲ್ಲಿ ಪ್ರಿಯಾಂಕಾ ಚೋಪ್ರಾ ಮಗುವನ್ನು ಎತ್ತಿಕೊಂಡಿರುವ ಫೋಟೋಗಳು ವೈರಲ್ ಆಗಿದ್ದರೂ ಕೂಡ ಮಗುವಿನ ಮುಖ ಬಹಿರಂಗವಾಗಿರಲಿಲ್ಲ.