Site icon Vistara News

Priyanka Chopra: ನೀತಾ ಮುಕೇಶ್​ ಅಂಬಾನಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಿಯಾಂಕಾ-ನಿಕ್‌ ಮಿಂಚಿದ್ದು ಹೀಗೆ!

Priyanka Chopra

ಬೆಂಗಳೂರು: ಮುಂಬಯಿಯ ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿರುವ ರಿಲಯನ್ಸ್ ಜಿಯೊ ವರ್ಲ್ಡ್​ ಸೆಂಟರ್​​ನೊಳಗೆ ನೂತನವಾಗಿ ನಿರ್ಮಿಸಲಾಗಿರುವ ನೀತಾ ಮುಕೇಶ್​ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆ ಅದ್ಧೂರಿಯಾಗಿ ಮಾರ್ಚ್‌ 31ರಂದು ನಡೆಯಿತು. ನೀತಾ ಅಂಬಾನಿ, ಮುಕೇಶ್​ ಅಂಬಾನಿ ಮತ್ತು ಅವರ ಇಡೀ ಕುಟುಂಬದವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಪತಿ ನಿಕ್ ಜೋನಸ್ ಜತೆ ಭಾಗವಹಿಸಿದ್ದರು. ನಟಿ ತಮ್ಮ ಇನ್‌ಸ್ಟಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ನೀತಾ ಅಂಬಾನಿ (Nita Ambani)ಯವರು ‘ರಘುಪತಿ ರಾಘವ ರಾಜಾರಾಮ್​’ ಹಾಡಿಗೆ ಚೆಂದನೆಯ ನೃತ್ಯ ಮಾಡಿ ಗಮನ ಸೆಳೆದರು. ನಟಿ ಇನ್‌ಸ್ಟಾದಲ್ಲಿ “ನಮ್ಮ ದೇಶದ ಇತಿಹಾಸವು ತುಂಬಾ ವಿಸ್ಮಯಕಾರಿಯಾಗಿದೆ. ನಿಮ್ಮ ದಣಿವರಿಯದ ಕೊಡುಗೆ ಮತ್ತು ಕಲೆಗೆ ಬದ್ಧತೆಗಾಗಿ ನಾನು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ, ನೀತಾ ಅಂಬಾನಿ ಅವರಂತೆ ಯಾರು ಈ ರೀತಿಯ ಈವೆಂಟ್‌ ಮಾಡಲು ಸಾಧ್ಯವಿಲ್ಲʼʼ ಎಂದು ಬರೆದುಕೊಂಡಿದ್ದಾರೆ. ಇನ್ನು ಪ್ರಿಯಾಂಕಾ ಅವರ ಫೋಟೊಗಳನ್ನು ನೋಡಿ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ತುಂಬಾ ಮುದ್ದಾಗಿದೆ ಜೋಡಿ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

ನೀತಾ ಮುಕೇಶ್​ ಅಂಬಾನಿ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆ ಕಾರ್ಯಕ್ರಮಕ್ಕೆ ಬಾಲಿವುಡ್​ ಗಣ್ಯರಾದ ಶಾರುಖ್​ಖಾನ್​, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್​, ಅಲಿಯಾ ಭಟ್​, ಜಾನ್ವಿ ಕಪೂರ್​, ವರುಣ್​ ಧವನ್​, ಕೀರ್ತಿ ಸನೂನ್​, ಕರೀನಾ ಕಪೂರ್​, ಆಮೀರ್ ಖಾನ್​, ಸೈಫ್​ ಅಲಿ ಖಾನ್​, ಕರಿಷ್ಮಾ ಕಪೂರ್​, ವಿದ್ಯಾ ಬಾಲನ್​ ಆಗಮಿಸಿದ್ದರು. ರಜನಿಕಾಂತ್​ ಅವರೂ ಪಾಲ್ಗೊಂಡಿದ್ದರು. ಅಂಬಾನಿ ಕುಟುಂಬದ ಇಶಾ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ, ಅನಂತ್​ ಅಂಬಾನಿ, ರಾಧಿಕಾ ಮರ್ಚಂಟ್ ಕೂಡ ಉಪಸ್ಥಿತರಿದ್ದರು. ಇವರೆಲ್ಲ ಸಾಂಪ್ರದಾಯಿಕ ಉಡುಗೆ ತೊಟ್ಟು, ಸಂಭ್ರಮಸಿದರು. ನೀತಾ ಅಂಬಾನಿಯವರು ಕೆಂಪು ಮತ್ತು ಗುಲಾಬಿ ಮಿಶ್ರಿತ ಲೆಹಂಗಾವನ್ನು, ಗುಜರಾತಿ ಶೈಲಿಯಲ್ಲಿ ತೊಟ್ಟು, ಮೈತುಂಬ ಆಭರಣಗಳನ್ನು ಹಾಕಿಕೊಂಡು ನೃತ್ಯ ಮಾಡಿದ್ದಾರೆ.

ಇದನ್ನೂ ಓದಿ: Priyanka Chopra: ಸೋದರಸಂಬಂಧಿ ಪರಿಣಿತಿ ಚೋಪ್ರಾ ಮದುವೆಗೆ ಬಂದಿದ್ದಾರಾ ಪ್ರಿಯಾಂಕಾ ಚೋಪ್ರಾ?

ಪ್ರಿಯಾಂಕಾ ಚೋಪ್ರಾ ಪೋಸ್ಟ್‌

NMACC ಎಂಬುದು ನೀತಾ ಅಂಬಾನಿಯವರ ಕನಸಿನ ಯೋಜನೆಯಾಗಿದ್ದು, ಇದು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ಗ್ಲೋಬಲ್ ಸೆಂಟರ್‌ನಲ್ಲಿದೆ. ಇದು ಭಾರತೀಯ ಕಲೆಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಹೊಂದಿದೆ.

Exit mobile version