ಬೆಂಗಳೂರು: ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್ ಜೋನಾಸ್ ಯುಎಸ್‌ಎ ಕೊಲೊರಾಡೋದ ಆಸ್ಪೆನ್‌ನಲ್ಲಿ ಸ್ನೇಹಿತರ ಜತೆ ಸ್ಕಿ ವಕೇಷನ್ ಮೂಡ್‌ನಲ್ಲಿದ್ದಾರೆ. ತಮ್ಮ ಮಗಳು ಮಾಲತಿ ಮೇರಿ ಚೋಪ್ರಾ ಜೋನಾಸ್ ಅವರನ್ನು ಕರೆದೊಯ್ದಿದ್ದು, ಸ್ನೇಹಿತರ ಜತೆ ಎಂಜಾಯ್ ಮಾಡುತ್ತಿರುವ ಫೋಟೊಗಳನ್ನು ನಿಕ್ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಿಕ್ ಮತ್ತು ಪ್ರಿಯಾಂಕಾ ಅವರು ಒಬ್ಬರನ್ನೊಬ್ಬರು ಅಪ್ಪಿಕೊಂಡಂತೆ, ಹಿಮದ ಮೇಲೆ ಮಲಗಿರುವಂತೆ, ನಿಕ್ ಅವರು ತಮ್ಮ ಮಗಳು ಮಾಲತಿಯನ್ನು ತಮ್ಮ ತೋಳುಗಳಲ್ಲಿ ಹಿಡಿದಿರುವಂತೆ, ಚಿತ್ರಗಳೂ ಇದ್ದವು. ಮತ್ತೊಂದು ಫೋಟೊದಲ್ಲಿ ಕೆಂಪು ಬೀನಿಯನ್ನು ಧರಿಸಿದ್ದ ಪ್ರಿಯಾಂಕಾ ಅವರ ಮೇಲೆ ತಮಾಷೆಯಾಗಿ ಸ್ನೋಬಾಲ್ ಎಸೆಯುತ್ತಿರುವ ಫೋಟೊ ಹಂಚಿಕೊಂಡಿದ್ದಾರೆ. ಬೈಕ್‌ನಲ್ಲಿ ಪೋಸ್ ನೀಡುತ್ತಿರುವ ಪ್ರಿಯಾಂಕಾ ಜತೆಗೆ ನಿಕ್ ಅವರ ಸ್ನೇಹಿತರ ಕೆಲವು ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Priyanka Chopra: ಯಾರ ಹೋಲಿಕೆ ಇದೆ ಎಂದ ನೆಟ್ಟಿಗರು: ಪ್ರಿಯಾಂಕಾ, ನಿಕ್, ಮಗಳು ಮಾಲತಿ ಫೋಟೊ ಕೊಲಾಜ್ ವೈರಲ್!
ಇದನ್ನೂ ಓದಿ: Priyanka Chopra: ಪ್ರಿಯಾಂಕಾ ಚೋಪ್ರಾ ಮಗಳ ಫೋಟೋ ವೈರಲ್; ಸಖತ್ ವೈಟ್ ಆ್ಯಂಡ್ ಕ್ಯೂಟ್ ಆಗಿದ್ದಾಳೆ ಮಾಲತಿ ಮೇರಿ
ಪತಿ ನಿಕ್ ಜೋನಸ್ ಮತ್ತು ಕುಟುಂಬದವರ ಜತೆ ಲಾಸ್ ಏಂಜಲೀಸ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ ಚೋಪ್ರಾ, ಮಗಳು ಮಾಲತಿಯನ್ನು ಪರಿಚಯಿಸಿದ್ದಾರೆ. ಕೆಲವು ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದಿದ್ದಾರೆ. 2018ರಲ್ಲಿ ಮದುವೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ 2022ರ ಜನವರಿಯಲ್ಲಿ ತಮಗೆ ಹೆಣ್ಣುಮಗು ಹುಟ್ಟಿದ್ದಾಗಿ ತಿಳಿಸಿದ್ದರು. ಹಾಗೇ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾಗಿಯೂ ಹೇಳಿದ್ದರು. ಈ ಒಂದು ವರ್ಷದಲ್ಲಿ ಪ್ರಿಯಾಂಕಾ ಚೋಪ್ರಾ ಮಗುವನ್ನು ಎತ್ತಿಕೊಂಡಿರುವ ಫೋಟೋಗಳು ವೈರಲ್ ಆಗಿದ್ದರೂ ಕೂಡ ಮಗುವಿನ ಮುಖ ಬಹಿರಂಗವಾಗಿರಲಿಲ್ಲ.